April 26, 2024

Bhavana Tv

Its Your Channel

ಜೂನ್ ೫ ರಂದು ಆಗಸದಲ್ಲಿ ಸಂಭವಿಸಲಿದೆ ಕೌತುಕ; ಆದರೆ ಈ ಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ.

ಜೂನ್ ೫ರಂದು ಚಂದ್ರ ಗ್ರಹಣ ಇರುವುದರಿಂದ ಈ ವರ್ಷದ ಎರಡನೇ ಚಂದ್ರಗ್ರಹಣ ಇದಾಗಿದೆ. ಆದರೆ ಈ ಚಂದ್ರ ಗ್ರಹಣವು ಸಾಮಾನ್ಯವಾಗಿ ಸಂಭವಿಸುವ ಚಂದ್ರ ಗ್ರಹಣಕ್ಕಿಂತ ಭಿನ್ನವಾಗಿದೆ ಎಂದು ಹೇಳಲಾಗುತ್ತಿದ್ದು, ಈ ಸಮಯದಲ್ಲಿ ನೀವು ಚಂದ್ರನನ್ನೂ ನೋಡಬಹುದು.
ಹುಣ್ಣಿಮೆಯಂದು ಅಂದರೆ ಜೂನ್ ೫ ರ ರಾತ್ರಿ ೧೧-೧೫ ಕ್ಕೆ ಗ್ರಹಣ ಆರಂಭವಾಗಲಿದ್ದು, ಜೂನ್ ೬ ರ ಬೆಳಗಿನ ಜಾವ ೨-೩೪ ಕ್ಕೆ ಕೊನೆಗೊಳ್ಳಲಿದೆ. ಜೂನ್ ೬ ರ ಬೆಳಗಿನ ಜಾವ ೧೨.೫೪ ಕ್ಕೆ ಗ್ರಹಣ ಸ್ಪಷ್ಟವಾಗಿ ಕಾಣಲಿದೆ.
ಮತ್ತೊಂದು ವಿಶೇಷ ಅಂದರೆ ಗ್ರಹಣದ ಸಮಯದಲ್ಲಿ ಚಂದ್ರನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಅರ್ಧಾಕಾರದಲ್ಲಿ ಚಂದ್ರನು ಗೋಚರಿಸುವುದಿಲ್ಲ. ಈ ಚಂದ್ರಗ್ರಹಣ ದಕ್ಷಿಣ ಅಮೆರಿಕಾ, ಯುರೋಪ್, ಆಫ್ರಿಕಾ, ಏಷ್ಯಾದ ಕೆಲವು ಭಾಗಗಳಲ್ಲಿ ಹಾಗೂ ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಇನ್ನು ಜೂನ್ ತಿಂಗಳಲ್ಲಿಯೇ ಎರಡು ಬಾರಿ ಗ್ರಹಣ ಸಂಭವಿಸಲಿದೆ. ಜೂನ್ ೫ ರಂದು ಚಂದ್ರ ಗ್ರಹಣವಿದ್ದು, ಜೂನ್ ೨೧ ರಂದು ಸೂರ್ಯಗ್ರಹಣ ಸಂಭವಿಸುತ್ತಿದ್ದು, ಇದು ಭಾರತದಲ್ಲಿ ಗೋಚರಿಸುತ್ತದೆ.

error: