
ತಮಿಳುನಾಡು: ಚೆನ್ನೈನ ಚೆಪಾಕ್-ತಿರುವಲ್ಲಿಕೇನಿ ವಿಧಾನಸಭಾ ಕ್ಷೇತ್ರದ ಡಿಎಂಕೆ ಶಾಸಕ ಜೆ. ಆನ್ಬಳಗನ್ ಕರೊನಾದಿಂದಾಗಿ ಬುಧವಾರ ಮೃತಪಟ್ಟಿದ್ದಾರೆ. ಆ ಮೂಲಕ ತಮಿಳುನಾಡಿನಲ್ಲಿ ಮೊದಲ ಬಾರಿಗೆ ಜನಪ್ರತಿನಿಧಿಯೊಬ್ಬರು ಕರೊನಾಗೆ ಬಲಿಯಾದಂತಾಗಿದೆ.
ಸಿದ್ದಗಂಗಾ ಶ್ರೀ ಶಿವಕುಮಾರ ಶ್ರಿಗಳಿಗೆ ಚಿಕಿತ್ಸೆ ನೀಡಿದ್ದ ಚೆನ್ನೈನ ಡಾ. ರೇಲಾ ಇನ್ಸ್ಟಿಟ್ಯೂಟ್ ಆಯಂಡ್ ಮೆಡಿಕಲ್ ಸೆಂಟರ್ನಲ್ಲಿಯೇ ಆನ್ಬಳಗನ್ ಚಿಕಿತ್ಸೆ ಪಡೆಯುತ್ತಿದ್ದರು. 62ನೇ ಹುಟ್ಟುಹಬ್ಬದ ದಿನದಂದೇ ಆನ್ಬಳಗನ್ ಕುಟುಂಬ ವರ್ಗ, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ..
2001, 2011 ಹಾಗೂ 2016ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಪಕ್ಷ ನಿಷ್ಠೆಗೆ ಹೆಸರಾಗಿದ್ದ ಆನ್ಬಳಗನ್, ಕೆಲ ಚಿತ್ರ ವಿತರಕರಾಗಿಯೂ ಕೆಲಸ ಮಾಡಿದ್ದರು. ಹಲವು ಬಿಗ್ ಬಜೆಟ್ ಚಿತ್ರಗಳ ವಿತರಣೆ ಮಾಡಿದ್ದರು.
ಆನ್ಬಳಗನ್ ಅಗಲಿಕೆಯಿಂದ ತಮಿಳುನಾಡು ವಿಧಾನಸಭೆಯಲ್ಲಿ ಮೂರು ಸ್ಥಾನ ತೆರವಾದಂತಾಗಿದೆ. ಈ ಮೂರು ಸ್ಥಾನಗಳಲ್ಲಿ ಡಿಎಂಕೆ ಶಾಸಕರೇ ಇದ್ದರು. ಕೆಪಿಪಿ ಸ್ವಾಮಿ (ತಿರುವತ್ತಿಯೂರು ಕ್ಷೇತ್ರ), ಎಸ್. ಕಥಾವರಾಯನ್ (ಗುಡಿಯಾಟ್ಟಂ ಕ್ಷೇತ್ರ) ಇತ್ತೀಚೆಗೆ ಅಗಲಿದ ಇನ್ನಿಬ್ಬರು ಡಿಎಂಕೆ ಶಾಸಕರಾಗಿದ್ದಾರೆ.
Source:- vijayavani
More Stories
ಈಜಿಪ್ಟ್ ನಲ್ಲಿ ನಡೆಯಲಿರುವ ಹವಾಮಾನ ವೈಫರೀತ್ಯದ ವಿಶ್ವ ನಾಯಕರ ಸಮಾವೇಶಕ್ಕೆ ಕನ್ನಡಿಗ ಐಎಫ್ಎಸ್ ಅಧಿಕಾರಿ ಎ.ಟಿ. ದಾಮೋದರ ನಾಯ್ಕ
‘ಖೇಲ್ ರತ್ನ ಪ್ರಶಸ್ತಿ’ಯನ್ನು ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ’ ಎಂದು ಮರುನಾಮಕರಣ – ಪ್ರಧಾನಿ ನರೇಂದ್ರ ಮೋದಿ ಘೋಷಣೆ
NEET-PG ಪರೀಕ್ಷೆ ಕನಿಷ್ಠ ʼ4 ತಿಂಗಳು ಮುಂದೂಡಿಕೆʼ; ಕೇಂದ್ರ ಸರ್ಕಾರ ಘೋಷಣೆ