April 26, 2024

Bhavana Tv

Its Your Channel

ಶ್ರೀಕ್ಷೇತ್ರ ಸಿಗಂದೂರಿನಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದ ಶ್ರೀ ಸತ್ಯಾನಂದತೀರ್ಥಸ್ವಾಮೀಜಿ

ಸಿಗoದೂರು : ಧಾರ್ಮಿಕ ಕ್ಷೇತ್ರಗಳು ಸರಳತೆಯಿಂದ ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದು ಕೇರಳ ಶಿವಗಿರಿ ಮಠದ ಪೀಠಾಧೀಶರಾದ ಶ್ರೀ ಸತ್ಯಾನಂದತೀರ್ಥ ಸ್ವಾಮೀಜಿ ಹೇಳಿದರು.

ಅವರು ಶ್ರೀಕ್ಷೇತ್ರ ಸಿಗಂದೂರಿನಲ್ಲಿ ಇಂದಿನಿAದ ಆರಂಭವಾದ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಶ್ರೀ ಗಳು ಆಶೀರ್ವಚನ ನೀಡಿದರು. ಆಡಂಬರವಿಲ್ಲದೆ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತಿರುವ ಶ್ರೀ ಕ್ಷೇತ್ರ ಸಿಗಂದೂರಿನ ಸೇವೆ ಪ್ರಶಂಸನೀಯವಾದುದು. ಧಾರ್ಮಿಕ ಕರ‍್ಯದ ಜತೆಗೆ ಸಾಮಾಜಿಕ ಪ್ರಗತಿಗಾಗಿ ಶ್ರಮಿಸುತ್ತಿರುವ ಧರ್ಮದರ್ಶಿಗಳಾದ ಡಾ. ರಾಮಪ್ಪನವರೊಂದಿಗೆ ಭಕ್ತವೃಂದ ಕೈಜೋಡಿಸಬೇಕು. ಧಾರ್ಮಿಕ ಕ್ಷೇತ್ರದದಿಂದ ಸಾಮಾಜಿಕ ಪ್ರಗತಿ ಸಾಧ್ಯ ಎಂಬುದಕ್ಕೆ ಇದು ಮಾದರಿಯಾಗಿದೆ ಎಂದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ಶೋಷಿತರ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿ ಸಾಮಾಜಿಕ ಸಮಾನತೆಯ ಹರಿಕಾರ ರಾಗಿದ್ದಾರೆ ಎಂದರು.


ಕರ‍್ಯಕ್ರಮದಲ್ಲಿ ಶ್ರೀ ಕ್ಷೇತ್ರ ಸಿಗಂದೂರು ಧರ್ಮದರ್ಶಿ ಡಾ. ರಾಮಪ್ಪ ಶ್ರೀಮತಿ ಮೀನಾಕ್ಷಿ ರಾಮಪ್ಪ ಶ್ರೀ ನಾರಾಯಣಪ್ಪ ಹಾಗೂ ಸಿಗಂದೂರು ಕುಟುಂಬವರ್ಗದವರು ಪಾಲ್ಗೊಂಡಿದ್ದರು.

ನವರಾತ್ರಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ:-
ಶರನ್ನವರಾತ್ರಿ ಪ್ರಯುಕ್ತ ಶ್ರೀಕ್ಷೇತ್ರ ಸಿಗಂದೂರು ವಿದ್ಯುತ್ ದೀಪದಿಂದ ಕಂಗೊಳಿಸುತ್ತಿದ್ದು ಸಂಪೂರ್ಣ ದೇವಾಲಯ ಬಗೆ ಬಗೆಯ ಪುಷ್ಪಗಳಿಂದ ಅಲಂಕಾರ ಗೊಳಿಸಲಾಗಿದೆ. ಶರನ್ನವರಾತ್ರಿ ಉತ್ಸವ ಆರಂಭಕ್ಕೂ ಮುನ್ನ ದೇವಸ್ಥಾನದ ವ್ಯವಸ್ಥಾಪಕ ಪ್ರಕಾಶ್ ಭಂಡಾರಿ ಹಾಗೂ ಅರ್ಚಕ ವೃಂದದವರು ಮಂಗಳ ವಾದ್ಯದೊಂದಿಗೆ ಧರ್ಮದರ್ಶಿಗಳ ನಿವಾಸಕ್ಕೆ ತೆರಳಿ ಸಂಪ್ರದಾಯದAತೆ ಫಲತಾಂಬೂಲ ನೀಡಿ, ನವರಾತ್ರಿ ಉತ್ಸವಕ್ಕೆ ಅನುಮತಿ ಕೋರಿದರು. ತಾವುಗಳು ನವರಾತ್ರಿಯ ಪುಣ್ಯ ಕಾಲದಲ್ಲಿ ಶ್ರೀಕ್ಷೇತ್ರದಲ್ಲಿ ನಡೆಯುವ ಎಲ್ಲ ರೀತಿಯ ಪೂಜೆ, ಹೋಮ – ಹವನ ಇತರೆ ಧಾರ್ಮಿಕ ಕರ‍್ಯಕ್ರಮ ಮತ್ತು ಸಾಂಸ್ಕೃತಿಕ ಕರ‍್ಯಕ್ರಮಗಳ ಮುಂದಾಳತ್ವ ವಹಿಸಿ ನಡೆಸಿ ಕೊಡಬೇಕೆಂದು ಸಾಂಪ್ರದಾಯಿಕವಾಗಿ ವಿನಂತಿಸಿದರು. ಅದಕ್ಕೆ ಶ್ರೀಮತಿ ಮೀನಾಕ್ಷಿ ಮತ್ತು ಶ್ರೀರಾಮಪ್ಪ ದಂಪತಿ ಸಮ್ಮತಿಸಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ನಂತರ ವಿವಿಧ ಧಾರ್ಮಿಕ ಕರ‍್ಯಗಳಿಗೆ ಚಾಲನೆ ನೀಡಲಾಯಿತು.

ಅನುವಂಶಿಕ ಧರ್ಮದರ್ಶಿಗಳಾದ ಡಾ.ಸಿ.ಎಸ್.ರಾಮಪ್ಪನವರು ಸಕುಟುಂಬ ಸಮೇತರಾಗಿ ಮಂಗಳ ವಾದ್ಯಗಳ ಘೋಷಗಳೊಂದಿಗೆ ದೇವಾಲಯಕ್ಕೆ ತೆರಳಿ ನಿರ್ವಿಘ್ನವಾಗಿ ನವರಾತ್ರಿ ಉತ್ಸವ ನಡೆಯುವಂತೆ ಅನುಗ್ರಹ ನೀಡಬೇಕೆಂದು ದೇವಿಯಲ್ಲಿ ಹಾಗೂ ನಾರಾಯಣಗುರುಗಳಲ್ಲಿ ಪ್ರಾರ್ಥಿಸಿದರು.
ನವರಾತ್ರಿ ಚಾಲನೆ ನೀಡಲು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಕೇರಳದ ವರ್ಕಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥಸ್ವಾಮೀಜಿ ಅವರನ್ನು ಪೂರ್ಣಕುಂಬ ಕಳಶ, ಚಂಡೆ ಮಂಗಳವಾದ್ಯದೊAದಿಗೆ ಬರಮಾಡಿಕೊಳ್ಳಲಾಯಿತು.

error: