December 19, 2024

Bhavana Tv

Its Your Channel

ರಾಮಕ್ಷತ್ರಿಯ ಧ್ರುವತಾರೆ ದಿವಂಗತ ಬಾಲಕೃಷ್ಣ ಎಸ್ ಸಾಳೇಹಿತ್ತಲ್( ಅವರಿಗೊಂದು ನುಡಿನಮನ)

ಶ್ರೀ ಶಿವರಾಮ- ಮಹಾದೇವಿ ಸಾಳೇಹಿತ್ತಲ್ ದಂಪತಿಗಳ ಎರಡನೇ ಮಗನಾದ ದಿವಂಗತ ಬಾಲಕೃಷ್ಣ(ವಸಂತ) ಸಾಳೇಹಿತ್ತಲ್ ಇವರು ಹೊನ್ನಾವರದ ಸಾಳೇಹಿತ್ತಲ್ ಮಜರೆಯಲ್ಲಿ ೨೨/೩/೧೯೪೫ ರಂದು ಜನಿಸಿದರು. ಹೊನ್ನಾವರದ ಸೆಂಥ್ ಥಾಮಸ್ ಹೈಸ್ಕೂಲನಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿ ಪಿಯುಸಿಯನ್ನು ಹುಬಳ್ಳಿಯಲ್ಲಿ ಪಡೆದು ಸುರತ್ಕಲಿನ ಇಂಜನಿಯರಿoಗ್ ಕಾಲೇಜಿನಲ್ಲಿ ಬಿ.ಇ. ಇಲೆಕ್ಟೀಕಲ್ ಪದವಿ ಮುಗಿಸಿ ಸುಮಾರು ೧೪ ವರ್ಷಗಳ ಕಾಲ ಮಸ್ಕತನ ಸಿವಿಲ್ ಕೋ ಇಲೆಕ್ಟೀಕಲ್ ಕಂಪನಿಯೊoದರಲ್ಲಿ ಜಿ.ಎಂ ಆಗಿ ಕಾರ್ಯನಿರ್ವಹಿಸಿದ ಪರಿಣತಿ ಇವರಿಗಿದೆ. ತದನಂತರ ಸುಮಾರು ೩೦ ವರ್ಷಗಳಿಂದ ಸ್ವಂತ ಇಲೆಕ್ಟೀಕಲ್ ಗುತ್ತಿಗೆ ಕಂಪನಿಯೊoದನ್ನು ದುಬೈನಲ್ಲಿ ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದ ಹೆಗ್ಗಳಿಕೆ ಇವರ ಪಾಲಿಗಿದೆ. ಉತ್ತಕನ್ನಡ ಜಿಲ್ಲೆಯ ಹೊನ್ನಾವರ ಕುಮಟಾ ತಾಲೂಕಿನ ನಿರುದ್ಯೋಗಿ ಯುವಕರಿಗೆ ತನ್ನ ಸ್ವಂತ ಖರ್ಚಿನಲ್ಲಿ ದುಬೈಗೆ ಕರೆಸಿಕೊಂಡು ಕೆಲಸ ನೀಡಿ ಆರ್ಥಿಕವಾಗಿ ಸದೃಡಗೊಳಿಸಿದ್ದ ಮಾನವತವಾದಿ. ಇವರ ಆದರ್ಶ, ಸರಳತೆ, ಸಜ್ಜನಿಕೆ, ಕ್ರೀಯಾಶೀಲ ವ್ಯಕ್ತಿತ್ವ ಸರ್ವರಿಗೂ ದಾರಿದೀಪದಂತಿದೆ. ಹಲವು ಕಾಯಕಗಳಲ್ಲಿ ತೊಡಗಿಸಿಕೊಂಡ ಪಾದರಸದಂತಹ ವ್ಯಕ್ತಿತ್ವ ಇವರದ್ದು. ಎಂದರಿತ ಇವರು ವ್ಯಕ್ತಿತ್ವ ಶ್ರೆಯೋಭಿವೃದ್ದಿಗೆ ವೃತ್ತಿ ಮೂಲ ಕಾಯಕವಾಗಬೇಕೆಂದು ಸ್ವಂತ ಉದ್ದಿಮೆಯನ್ನು ಸ್ಥಾಪಿಸಿ ಬದುಕಿಗೆ ಬೆಳಕಾದವರು. ಹಲವರು ಹೊಟ್ಟೆಗೆ ಅನ್ನ ನೀಡಿದ ಜೀವ ಶಿಲೆಯನ್ನು ಹೃದಯಪೂರ್ವಕವಾಗಿ ಅಭಿನಂದಿಸಲೇಬೇಕು. ಔಧ್ಯೊಗಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಛಲದಂಕ ಮಲ್ಲ ಸರ್ವೆ ಜನ ಸುಖೀನೋ ಭವಂತು ಎನ್ನುವ ಮನೋಗುಣ ಹೊಂದಿದವರು. ಇಳಿ ವಯಸ್ಸಿನಲ್ಲಿ ಚೆತನ್ಯದ ಚಿಲುಮೆಯಾಗಿ ಕ್ರೀಯಾಶೀಲರಾಗಿ ಓಡಾಡುತ್ತ ಹತ್ತಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದಣಿವರಿಯದ ಕಾಯಕ ಜೀವಿ. ವಯಸ್ಸನ್ನು ಲೆಕ್ಕಿಸದೇ ಕೆಲಸ ಮಾಡುತ್ತಲ್ಲೆ, ಕೊನೆಯುಸಿರೆಳೆದ ಪುಣ್ಯಾತ್ಮ. ಇವರ ಬದುಕು ಅನುಕರಣಿಯವೂ, ಆದರಣಿಯವೂ, ಪ್ರಶಂಸೆಗೆ ಅರ್ಹವಾಗಿದೆ. ತನ್ನ ಬದುಕಿನ್ನುದಕ್ಕೂ ದುಡಿಯುತ್ತಾ ಸಮಾಜ ಸೇವಕರಾಗಿ ಕೊಡುಗೈ ದಾನಿಯಾಗಿ ರಾಮಕ್ಷತ್ರಿಯ ಸಮಾಜದ ಆಪ್ತ ಕಾಲದ ಭಾದಂವರಾಗಿ ಗೈದ ಸಾಧನೆ ಸ್ಮರಣಿಯ. ಈ ದೃಷ್ಟಿಯಿಂದ ಅವರ ಕಾಯ ಅಳಿದರೂ ಅವರ ನೆನಪು ಸ್ಮರಣೀಯ. ಬಾಲಕೃಷ್ಣ ಅವರು ಮಾಡಿದ ಪುಣ್ಯ ಕಾರ್ಯದಿಂದ ಸಮಾಜ ಬಾದಂವರು ಮನಮನೆಯಲ್ಲಿಯೂ ಮನೆಮಾಡಿಕೊಂಡಿದ್ದಾರೆ. ಅವರ ಸೇವೆ ಇನ್ನು ಸಮಾಜಕ್ಕೆ ಬೇಕು ಎನ್ನುವ ಸಮಯದಲ್ಲಿ ಸ್ವರ್ಗಸ್ಥರಾಗಿರುವುದು ತುಂಬಲಾರದ ನಷ್ಟ. ಇವರ ಮನೆತನದಲ್ಲಿ ಹೆಚ್ಚು ಸುಶಿಕ್ಷಿತರು, ಸುಸಂಸ್ಕೃತವರಾಗಿದ್ದರು.
ಮನೆತನದ ಉದ್ಯೋಗ ಕಿರಾಣಿ ವ್ಯಾಪರವಾಗಿದ್ದರೂ ತಾನು ಸಹ ಇದೇ ವ್ಯಾಪಾರ ಮಾಡಿ ತನ್ನ ಸಹೋದರರಿಗೆ ಹೊರೆಯಾಗಬರದೆಂಬ ದೃಷ್ಟಿಯಿಂದ ಹೊರದೇಶಕ್ಕೆ ಹೋಗಿ ತನ್ನ ಏಳ್ಗೆಯೊಂದಿಗೆ ಸಮಾಜ ಉದ್ದಾರವನ್ನು ಮಾಡಿದರು. ಸಮಾಜದ ದೇವಾಲಯದ ಜಿರ್ಣೊದ್ದಾರಕ್ಕೆ ಆರ್ಥಿಕ ನೆರವನ್ನು ನೀಡಿದ್ದಾರೆ.
ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣ ಕುಂಠಿತವಾಗಬಾರದೆoದು ಅವರಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಶೈಕ್ಷಣಿಕವಾಗಿ ಮುಂದುವರೆಯಲು ಸಹಕರಿಸಿದ ಶಿಕ್ಷಣ ಪ್ರೇಮಿ ಕಳೆದ ವರ್ಷ ದುಬೈನಲ್ಲಿ ಕಾರಣಾತಂತರದಿoದ ಸಾವನ್ನಪ್ಪಿದ ಹೆಗಡೆಯ ಸಮಾಜಭಾಂದವನ ಪಾರ್ಥಿವ ಶರೀರವನ್ನು ತರಲು ಅತೀವ ಮುತವರ್ಜಿ ವಹಿಸಿದ ವ್ಯಕ್ತಿ. ಇವರ ನಿಧನಕ್ಕೆ ರಾಮಕ್ಷತ್ರೀಯ ಸಮಾಜದ ಪ್ರತಿಯೊಬ್ಬರು ಕಣ್ಣಿರು ಇಟ್ಟಿದ್ದಾರೆ. ತನ್ನ ಸತ್ಕಾರ್ಯಗಳನ್ನೆಲ್ಲ ಹೆಂಡತಿ ಮಕ್ಕಳ ಹೆಗಲಿಗೆ ಏರಿಸಿ ಯಾರಿಗೂ ಹೇಳದೆ ಒಂದು ದಿನವು ಹಾಸಿಗೆ ಹಿಡಿಯದೆ ಆರೊಗ್ಯವಂತರಾಗಿ ತನ್ನ ಮಡದಿಯೊಂದಿಗೆ ಜೊತೆಯಾಗಿದ್ದು ತನ್ನ ಆಸ್ತಿ ಪಾಸ್ತಿ ಆದರ್ಶಗಳನ್ನು ಬಿಟ್ಟು ಅಗಲಿರುವುದು ನೋವಿನ ಸಂಗತಿ.ಕಾಯ ಅಳಿದರೂ ಮಾಡಿದ ಅನನ್ಯ ಸಾಧನೆಯಿಂದ ಎಂದೆoದಿಗೂ ಅಮರರಾಗಿರುತ್ತಾರೆ. ತನ್ನ ಸಹೋದರರ ಮಕ್ಕಳ ಬಗ್ಗೆ ಇವರಿಗೆ ಅತೀವ ಕಾಳಜಿ ಇತ್ತು. ಶ್ರೀ ರಾಜೇಶ ಹಾಗೂ ಅಜಿತ್ ಸಾಲೆಹಿತ್ತಲ್ ಅವರ ಆಶ್ರಯದಲ್ಲಿ ಬೆಳೆದುಬಂದವರು. ಬಾಲಕೃಷ್ಣರವರು ಅವರ ಮನೆತನಕ್ಕೆ ಕಿರ್ತಿಯನ್ನು ತಂದುಕೊಟ್ಟ ಪ್ರತಿಭಾ ಸಂಪನ್ನ. ಕುಟುಂಬದ ಯಾವುದೇ ಸಣ್ಣಪುಟ್ಟ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಎಲ್ಲರನ್ನು ಸಮನಾಗಿ ಕಂಡ ಸಮನ್ವಯಕಾರ.
ಜನಸೇವಕರಾದ ಇವರು ತನ್ನ ಕೊನೆಯುಸಿರನ್ನು ವಿದೇಶದಲ್ಲಿ ಬಿಡದೇ ತನ್ನ ತಾಯ್ನಾಡದ ಪ್ರೀತಿಯ ಬೆಂಗಳೂರಿನಲ್ಲಿ ಮನೆಯಲ್ಲಿಯೇ ಬಿಟ್ಟಿರುವುದು ಅವರಿಗಿರುವ ತಾಯ್ನಾಡಿನ ಪ್ರೀತಿಯ ದ್ಯೋತವಾಗಿ ಕಂಡುಬರುತ್ತದೆ. ತನ್ನ ಏಳ್ಗೆಯೊಂದಿಗೆ ಸಮಾಜದ ಹಿತವನ್ನು ಗುರುಯನ್ನಾಸಿಕೊಂಡ ಕೆಲವೇ ವ್ಯಕ್ತಿಗಳಲ್ಲಿ ಇವರೊಬ್ಬರು. ಏನೆ ಇದ್ದರೂ ಇವರು ಇಷ್ಟು ವರ್ಷಗಳ ಸೇವೆ ಅನುಕರಣಿಯ. ಇಂತಹ ಸಮರ್ಪಣ ಭಾವದ ವ್ಯಕ್ತಿಯನ್ನು ಕಳೆದುಕೊಂಡ ಸಮಾಜ ಬಡವಾಗಿದೆ.
ಕರೆವ ಹೆಸರು ಹಲವಿದ್ದರೂ ನೆನವ ಹೆಸರು ಕೆಲವರದು ಮಾತ್ರ. ಇವರ ನಡೆ ನುಡಿಗಳೆಲ್ಲ ನೆನೆಯುವಂತಹದೇ, ಆಗಿರುವುದು ಹೆಮ್ಮೆಯ ವಿಷಯ. ಇವರಿಂದ ಸಹಾಯಹಸ್ತ ಪಡೆದು ಸಂಸ್ಕೃತಿಕರಣಗೊoಡ ಸಮಜ ಭಾದಂವರು ಮುಂದಾಗಿ ಇವರ ಹೆಸರಿನ ಸೇವಾ ಸಂಸ್ಥೆಯನ್ನು ಸ್ಥಾಪಿಸಿ ಸಮಾಜದ ಅಸಹಾಯಕರಿಗೆ ಸಹಾಯ ಮಾಡಿದ್ದಲ್ಲಿ ಮಾತ್ರ ಇವರ ಋಣ ತೀರಿಸಲು ಸಾಧ್ಯ. ಇವರು ತನ್ನ ಧರ್ಮಪತ್ನಿ ರಾಜಶ್ರೀ ಮಕ್ಕಳಾದ ನವೀನ, ಸಚೀನ, ಸೊಸೆಯಂದಿರಾದ ಶಿಲ್ಪ, ರೇಖಾ, ಮೊಮ್ಮಕ್ಕಳಾದ ಸೋನೊಯಾ, ರೇಹಾ,ಅಮೋಘಾ, ಹಾಗೂ ಸಹೋದರರು, ಸಹೋದರಿಯರು ಅಪಾರ ಬಂಧುಬಳಗವನ್ನು ಅಗಲಿ ೧೫-೬-೨೦೨೦ರಂದು ಸ್ವರ್ಗಸ್ಥರಾಗಿರುವುದು ಅತೀವ ನೋವಿನ ಸಂಗತಿ. ಪರಮಾತ್ಮನು ಇವರ ಆತ್ಮಕ್ಕೆ ಚಿರಶಾಂತಿ ಕೊಡಲಿ. ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲೆಂದು ಈ ಮೂಲಕ ಪ್ರಾರ್ಥಿಸುತ್ತೇನೆ..


ಡಾ ಸುರೇಶ ಎನ್.ನಾಯ್ಕ ಹೊನ್ನಾವರ
ಮೊಬೈಲ್ ನಂಬರ್ – ೯೪೪೮೬೨೬೫೦೬

error: