ಸಂಕಷ್ಟದ ಪರಿಸ್ಥಿತಿಯಲ್ಲಿ ಜವಾಬ್ದಾರಿ ನಿರ್ವಹಿಸಬೇಕಾದ ಕಾಲಘಟ್ಟಲ್ಲಿ ಜನರಿದ್ದಾರೆ. ಲಾಕ್ ಡೌನ್ ನಿಂದಾಗಿ ಅನೇಕ ಜನರು ಉದ್ಯೋಗಕ್ಕಾಗಿ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬಡ ಜನರಿಗೆ ಉದ್ಯೋಗ ಒದಗಿಸಿ ಆರ್ಥಿಕ ಭದ್ರತೆ ನೀಡಲು ಪಂಚಾಯತ್ ಮೂಲಕವೂ ಸಾಧ್ಯ ಎಂದು ಹಾಗೂ ಜನರೊಂದಿಗೆ ಪಂಚಾಯತ್ ಇದೆ ಎಂದು ಹಾಗು ಜನರಿಗೆ ಪಂಚಾಯತ್ ನಮ್ಮೊಂದಿಗೆ ಇದೆ ಎನ್ನುವ ಆತ್ಮವಿಶ್ವಾಸ ಭರಿಸಲು ಸಕಾಲವಿದು.
ಆತ್ಮೀಯ ಗ್ರಾಮ ಪಂಚಾಯತ್ ಅಧ್ಯಕ್ಷರುಗಳೇ, ಸದಸ್ಯರುಗಳೆ, ನಿಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಸಂಘ ಸಂಸ್ಥೆಗಳ ಸಹಕಾರ ಪಡೆದು, ಕೃಷಿಕರ ಸಹಕಾರ ಪಡೆದು ಕೂಲಿಕಾರ್ಮಿಕರ ಸಹಕಾರ ಪಡೆದು ಉದ್ಯೋಗ ಖಾತರಿ ಯೋಜನೆ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿ ಜನರಿಗೆ ಉದ್ಯೋಗದೊಂದಿಗೆ ಗ್ರಾಮಗಳ ಅಭಿವೃದ್ಧಿಯಾಗುತ್ತದೆ ಎನ್ನುವ ಕಲ್ಪನೆಯನ್ನು ನೀಡಿ ಜನರನ್ನು ತೊಡಗಿಸುವಂತೆ ಮಾಡಬೇಕು..
ಅದಕ್ಕು ಮೊದಲು ನಮ್ಮ ಊರಲ್ಲಿ ತುರ್ತು ಅಗತ್ಯವಿರುವ ಕೃಷಿ ನೀರಾವರಿ ತೋಡುಗಳು, ಸಾಧಾರಣ ದೊಡ್ಡದಾದ ಕೆರೆಗಳು, ಮಣ್ಣಿನ ಇನ್ನಿತರ ಕಾಮಾಗಾರಿಗಳು, ಕಾಲುಸಂಕ ಇತ್ಯಾದಿಗಳನ್ನು (ನಿಯಮದಂತೆ) ಗುರುತಿಸಿಕೊಳ್ಳಬೇಕು. ಜನರು ಗುಂಪುಗೂಡದ0ತೆ ಪಂಚಾಯತ್ ಸಿಬ್ಬಂಧಿಗಳೆ ಜನವಸತಿ ಪ್ರದೇಶಕ್ಕೆ ತೆರಳಿ ಕೊರೊನ ನಿಯಮಾವಳಿಗಳನ್ನು ಪಾಲಿಸಿ ಉದ್ಯೋಗ ಚೀಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡು ಕಾಮಾಗಾರಿ ಆದೇಶದೊಂದಿಗೆ ಕಾಮಗಾರಿ ಕೈಗೊಳ್ಳಬೇಕು.
ಕಾಮಗಾರಿಗಳ ತುರ್ತು ಅನುಮೋದನೆ ಪಡೆಯಲು ತಾ.ಪಂ. ಜಿ.ಪಂ. ನಲ್ಲಿ ಅವಕಾಶವಿದೆ.
ಈ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಂಡು ಜನಸ್ನೇಹಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ವಿಶ್ವಾಸದೊಂದಿಗೆ ಜನರಿಗೆ ಉದ್ಯೋಗ ನೀಡಿ ಆರ್ಥಿಕ ಭದ್ರತೆಯೊಂದಿಗೆ ಗ್ರಾಮಗಳ ಅಭಿವೃದ್ಧಿ ಮಾಡಿಸಬೇಕಾಗಿ ವಿನಂತಿಸುತ್ತೇವೆ ಎಂದು ಹೊನ್ನಾವರದ ರಾಜೇಶ್ ನಾಯ್ಕ್ ಎನ್ನುವವರು ವಾಟ್ಸಾö್ಯಪ್ ಗ್ರೂಪ್ನಲ್ಲಿ ಬರೆದು ಕೊಂಡಿದ್ದಾರೆ.
ನಿಜ ಗೆಳೆಯರೆ ಇಂದಿನ ಈ ಸಮಯದಲ್ಲಿ ಜನಪ್ರತಿನಿದಿಗಳು ತಮ್ಮ ಕಾರ್ಯವ್ಯಾಪ್ತಿಗೆ ಬರುವ ಕೆಲಸಗಳನ್ನು ಜನಸ್ನೇಹಿಯಾಗಿ ತೆಗೆದುಕೊಂಡು ಬಡವರಿಗೆ ಸಹಾಯ ಮಾಡಬಹುದಾಗಿದೆ, ರಾಜೇಶ್ ನಾಯ್ಕರು ಉತ್ತಮ ಸಲಹೆಯ ಸಂದೇಶ ಕಳುಹಿಸಿದ್ದಾರೆ. ಇದನ್ನು ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳು ಗಮನಿಸಿ ಕಾರ್ಯ ಕೈಗೊಳ್ಳಬಹುದಾಗಿದೆ. ಕೋರೊನಾ ಸಂದರ್ಬದಲ್ಲಿ ನಿಮ್ಮ ಊರಿನ ಕೂಲಿ ಕಾರ್ಮಿಕರಿಗೆ ಸಹಾಯ ಮಾಡಿ ಬದುಕಿಗೆ ದಾರಿ ಮಾಡಿ ಕೊಡಿ,
More Stories
ನಿತ್ಯ ಅಪ್ಪನ ದಿನಾಚರಣೆ ಮತ್ತು ಮಕ್ಕಳು
ಪುನಃ ಕೊನೆಗೌಡರತ್ತ ಒಲವು ತೋರುತ್ತಿರುವ ಕೃಷಿಕರು
ಅಸ್ತಂಗತನಾದ ತಬಲಾಸೂರ್ಯ ಶ್ರೀ ಎನ್. ಎಸ್. ಹೆಗಡೆ ಹಿರೇಮಕ್ಕಿ.