December 22, 2024

Bhavana Tv

Its Your Channel

ಕೊರೋನಾ ಮಹಾಮಾರಿ ನಿಯಂತ್ರಣ ಕುರಿತು ತಾಲೂಕು ಮಟ್ಟದ ಅಧಿಕಾರುಗಳ ಸಭೆ ನಡೆಸಿ ಮಾಹಿತಿ ಪಡೆದ ಸಚಿವ ಡಾ.ನಾರಾಯಣಗೌಡ*

ಕೆಆರ್ ಪೇಟೆ ; ಹೋಂ ಕ್ವಾರಂಟೈನ್ ಗಳ ಬಗ್ಗೆ ವಿಶೇಷವಾದ ನಿಗಾ ವಹಿಸಬೇಕು. ಮನೆಯಿಂದ ಹೊರಗೆ ಓಡಾಡಲು ಬಿಡಬಾರದು..ಮೋಟಾರ್ ಬೈಕುಗಳಲ್ಲಿ ಅನಗತ್ಯವಾಗಿ ಸುತ್ತುವ ಯುವಕರನ್ನು ನಿಯಂತ್ರಿಸಬೇಕು..ಅಗತ್ಯಬಿದ್ದರೆ ಮೋಟಾರ್ ಬೈಕುಗಳನ್ನು ಸೀಜ್ ಮಾಡಿ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಅವರಿಗೆ ಆದೇಶ ನೀಡಿದರು.

ಕೊರೋನಾ ನಿಯಂತ್ರಣದಲ್ಲಿ ಕರ್ತವ್ಯಲೋಪ ತಾ.ಪಂ ಇಓ ಚಂದ್ರಮೌಳಿ ಅಮಾನತ್ತಿಗೆ ಸಚಿವ ನಾರಾಯಣಗೌಡ ಆದೇಶ…

ಕೊರೋನಾ ತುರ್ತು ಸಂದರ್ಭದಲ್ಲಿಯೂ ಕೇಂದ್ರ ಸ್ಥಾನದಲ್ಲಿ ವಾಸವಿದ್ದು ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳದೇ ಕರ್ತವ್ಯಲೋಪ ಎಸಗುತ್ತಿರುವ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್.ಚಂದ್ರಮೌಳಿ ಅವರನ್ನು ಸೇವೆಯಿಂದ ಅಮಾನತ್ತು ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಪಾಂಡವಪುರ ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ಅವರಿಗೆ ಸಚಿವ ನಾರಾಯಣಗೌಡ ಅದೇಶ ನೀಡಿದರು

…ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯವೈಖರಿಯ ಜವಾಬ್ದಾರಿಯನ್ನು ತಹಶೀಲ್ದಾರ್ ಎಂ.ಶಿವಮೂರ್ತಿ ಅವರೇ ನೋಡಿಕೊಳ್ಳುವಂತೆ ಸಚಿವ ನಾರಾಯಣಗೌಡ ನಿದೇಶನ ನೀಡಿದ್ದಾರೆ.

ಹೆಚ್ಚು ಬೆಲೆಗೆ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸಚಿವ ನಾರಾಯಣಗೌಡ ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ನಿರ್ದೇಶನ ನೀಡಿದರು.

ತರಕಾರಿಗಳು ಹಾಗೂ ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವಂತೆ ತೋಟಗಾರಿಕೆ ಅಧಿಕಾರಿ ಹಾಗೂ ಮುಖ್ಯಾಧಿಕಾರಿ ಗೆ ಸಚಿವ ನಾರಾಯಣಗೌಡ ಆದೇಶ ನೀಡಿದ್ದಾರೆ..

ತಾಲೂಕು ಆರೋಗ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಜಯಪ್ರಕಾಶ್, ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ, ಡಾ.ಮರುಳೇಶ್, ಅಗ್ನಿಶಾಮಕ ಅಧಿಕಾರಿ ಶ್ರೀನಿವಾಸರಾವ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

error: