December 20, 2024

Bhavana Tv

Its Your Channel

ವೈದ್ಯರನ್ನು ನಿಂದಿಸಿದ ಯುವಕರಿಗೆ ಎಚ್ಚರಿಕೆ ನೀಡಿದ ತಾಲೂಕು ಆರೋಗ್ಯಾಧಿಕಾರಿ ಧನಂಜಯ್.

ಗುಂಪುಗುಂಪಾಗಿ ಆಟವಾಡುತ್ತಿದ್ದ ಯುವಕರಿಗೆ ತಿಳಿ ಹೇಳಲು ಹೋದ ಡಾಕ್ಟರ್ ಮೇಲೆ ಯುವಕರ ಗುಂಪೊಂದು ಡಾಕ್ಟರನ್ನು ನಿಂದಿಸಿರುವ ಘಟನೆ ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿ ವಳಗೆರೆ ಪುರ ದಲ್ಲಿ ನಡೆದಿದೆ.

ನಾಗಮಂಗಲ ತಾಲೂಕಿನಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ತಪಾಸಣೆ ನಡೆಸುತ್ತಿರುವ ಡಾಕ್ಟರ್ ಮಮತಾ ರವರು ತಂಡವು ಬೆಳ್ಳೂರು ಹೋಬಳಿ ವಳಗೆರೆ ಪುರಕೆ ಭೇಟಿ ನೀಡಿದಾಗ ಯುವಕರ ಗುಂಪೊಂದು ಆಟವಾಡುತ್ತಿರುವುದನ್ನು ಕಂಡು ಯುವಕರಿಗೆ ದೇಶದಾದ್ಯಂತ ಕೊರೊನಾ ವೈರಸ್ ಎಂಬ ಕಾಯಿಲೆ ಹರಡುತ್ತಿದ್ದು ಯಾರು ಕೂಡ ಹೀಗೆ ಗುಂಪುಗುಂಪಾಗಿ ಸೇರಬಾರದು ಎಂದು ತಿಳಿ ಹೇಳಲು ಹೋದಾಗ. ಯುವಕರ ಗುಂಪೊಂದು ಡಾ: ಮಮತಾ ರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ತಕ್ಷಣ ಡಾ: ಮಮತಾ ರವರು ತಾಲೂಕು ಆರೋಗ್ಯಾಧಿಕಾರಿಗೆ ಮತ್ತು ಪೊಲೀಸ್ ಇಲಾಖೆಗೆ ನಡೆದ ಘಟನೆಯ ಬಗ್ಗೆ ಮಾಹಿತಿ ತಿಳಿಸುತ್ತಾರೆ. ಮಾಹಿತಿ ತಿಳಿದ ತಕ್ಷಣ ಘಟನೆ ನಡೆದ ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ: ಧನಂಜಯ್, ಹಾಗೂ ಡಿವೈಎಸ್ಪಿ ವಿಶ್ವನಾಥ್, ಸಿಪಿಐ ಕೆ ರಾಜೇಂದ್ರ, ಪಿಎಸ್ಐ, ದಯಾನಂದ್, ರವರು ಭೇಟಿ ನೀಡಿ. ಡಾ:ಮಮತಾರನ್ನು ನಿಂದಿಸಿದ ಯುವಕರ ಗುಂಪನ್ನು ಕರೆಸಿ ಕಾನೂನು ರೀತಿಯ ಕ್ರಮಕ್ಕೆ ಮುಂದಾದಾಗ. ಊರಿನ ಮುಖಂಡರು ಹಾಗೂ ಗ್ರಾಮಸ್ಥರು ನಮ್ಮಿಂದ ಆಗಿರುವ ತಪ್ಪನ್ನು ಕ್ಷಮಿಸಿ ಇನ್ನು ಮುಂದೆ ಈ ತರಹದ ಘಟನೆಗಳು ನಡೆಯದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಡಾ: ಮಮತಾ ರವರ ಬಳಿ ಯುವಕರ ಗುಂಪಿನಿಂದ ಕ್ಷಮೆಯಾಚಿಸಿದ್ದಾರೆ.

ನಂತರ ಆರೋಗ್ಯಾಧಿಕಾರಿ ಧನಂಜಯ ರವರು ಊರಿನ ಮುಖಂಡರು ಹಾಗೂ ಗ್ರಾಮಸ್ಥರಿಗೆ ಕೊರೊನಾ ವೈರಸ್ ಎಂಬ ರೋಗವು ಎಲ್ಲಾ ಕಡೆ ಹರಡುತ್ತಿದ್ದು ಜನರು ಗುಂಪು ಗುಂಪಾಗಿ ಓಡಾಡುವುದು ನಿಲ್ಲಿಸಬೇಕು. ಜನರು ಒಬ್ಬರಿಂದ ಒಬ್ಬರಿಗೆ ಅಂತರವನ್ನು ಕಾಯ್ದಿರಿಸಿ ಕೊಳ್ಳಬೇಕೆಂದು ತಿಳಿಹೇಳಿ ಇನ್ನೊಮ್ಮೆ ಹೀಗೆ ನಡೆದುಕೊಂಡರೆ ನಿಮ್ಮಗಳ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗುತ್ತದೆ ಊರಿನ ಜನರಿಗೆ ಹಾಗೂ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದರು. ಆರೋಗ್ಯ ತಪಾಸಣೆಗೆ ಬರುವ ಆಶಾ ಕಾರ್ಯಕರ್ತೆಯರ ಹಾಗೂ ವೈದ್ಯರ ಬಳಿ ಸೌಜನ್ಯದಿಂದ ವರ್ತಿಸಬೇಕಾಗಿ ತಿಳಿ ಹೇಳಿದರು.

ವರದಿ.ದೇ.ರಾ .ಜಗದೀಶ ದೇವಲಾಪುರ

error: