October 5, 2024

Bhavana Tv

Its Your Channel

ಕೈಗೆ ಬಂದ ಬೆಳೆ ಮಾರಲು ಆಗುತ್ತಿಲ್ಲ ,ಕಣ್ಣೀರಿಡುತ್ತಿರುವ ರೈತನ ಗೋಳು

ನಾಗಮಂಗಲ: ಸುಮಾರು ಮೂರು ತಿಂಗಳಿAದ ಹಗಲಿರುಳೆನ್ನದೆ ಕಷ್ಟಪಟ್ಟು ಬೆಳೆದ ಬೆಳೆ ಇಂದು ಕೊರೊನಾ ವೈರಸ್ ಹರಡದಂತೆ ಲಾಕ್ ಡೌನ್ ಮಾಡಲಾಗಿರುವ ಹಿನ್ನೆಲೆಯಲ್ಲಿ ಕೈಗೆ ಬರದೇ ಹೊಲದಲ್ಲೇ ಒಣಗಿಹೋಗುತ್ತಿದ್ದು ಅಪಾರ ನಷ್ಟವಾಗಿ ರೈತ ಕಂಗಾಲಾಗಿದ್ದಾನೆ.

ತಾಲ್ಲೂಕಿನ ದೇವಲಾಪುರ ಹೋಬಳಿಯ ಹರದನಹಳ್ಳಿ ಗ್ರಾಮದ ಸತೀಶ್ ಹೊಸಕೆರೆಯ ಬಳಿ ತಮಗಿರುವ ಜಮೀನಿನಲ್ಲಿ ಒಂದೂವರೆ ಎಕರೆ ಎಲೆಕೋಸು ಮತ್ತು ಒಂದು ಎಕರೆಯಲ್ಲಿ ಸುನಾಮಿ ಬೆಳೆಯನ್ನು ಬೆಳೆಯಲು ಸುಮಾರು ೨.೧೦ ಲಕ್ಷದ ವರೆಗೆ ಬಂಡವಾಳ ಹೂಡಿದ್ದು, ಉತ್ತಮ ಬೆಳೆ ಬಂದ ಹಿನ್ನೆಲೆಯಲ್ಲಿ ಉತ್ತಮ ಲಾಭ ಬರುವ ನಿರೀಕ್ಷೆಯನ್ನು ಹೊಂದಿದ್ದ ರೈತನಿಗೆ ಕೊರೊನಾ ದಿಂದ ಉಂಟಾದ ಲಾಕ್ ಡೌನ್ ನಿಂದ ಕಟಾವಿಗೆ ಬಂದ ಒಂದೂವರೆ ಎಕರೆ ಎಲೆಕೋಸು ಮತ್ತು ಒಂದು ಎಕರೆ ಸುನಾಮಿ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೇ ಜೊತೆಗೆ ಉತ್ತಮ ಬೆಲೆಯೂ ಇಲ್ಲದ ಕಾರಣ ಬೆಳೆಯನ್ನು ಕಟಾವು ಮಾಡಿಸಿದರೆ ಅದಕ್ಕೆ ತಗಲುವ ಕೂಲಿಯೂ ಸಹ ಹೆಚ್ಚಾಗಿ ಈಗ ಆಗಿರುವ ನಷ್ಟದಲ್ಲಿ ಮತ್ತಷ್ಟು ನಷ್ಟವಾಗುವ ಭೀತಿಯಲ್ಲಿ ಕಟಾವಯ ಮಾಡದೇ ಇರುವುದರಿಂದ ಬೆಳೆ ಒಣಗಿ ನಾಶವಾಗುತ್ತಿದೆ.

ಕಲ್ಲಂಗಡಿ ಬೆಳೆದು ಕಣ್ಣೀರಿಡುತ್ತಿರುವ ರೈತ.

ಬೇಸಿಗೆಯಲ್ಲಿ ಅಪಾರ ಬೇಡಿಕೆ ಬರುವ ಉದ್ದೇಶದಿಂದ ೫ ಎಕರೆಯಲ್ಲಿ ಕಲ್ಲಂಗಡಿ ಬೆಳೆ ಬೆಳೆದಿದ್ದ ರೈತ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಸಾಗಿಸಲಾಗದೆ ಹೊಲದಲ್ಲೇ ಬೆಳೆ ಕೊಳೆಯುತ್ತಿದ್ದು ರೈತ ಕಣ್ಣೀರಿಡುತ್ತಿದ್ದಾನೆ.

ತಾಲ್ಲೂಕಿನ ಕಸಬಾ ಹೋಬಳಿಯ ಕಾಚೇನಹಳ್ಳಿ ಗ್ರಾಮದ ಶಿವಕುಮಾರ್ ಎಂಬ ರೈತ ಗ್ರಾಮದ ಕೆರೆಯ ಸಮೀಪದಲ್ಲಿ ೫ ಎಕರೆ ಜಮೀನಿನಲ್ಲಿ ಸುಮಾರು ಎರಡುವರೆ ಲಕ್ಷ ಬಂಡವಾಳ ಹೂಡಿ ಕಲ್ಲಂಗಡಿ ಬೆಳೆ ಬೆಳೆದಿದ್ದರು. ಆದರೆ ಈ ವೇಳೆಗೆ ಕೊರೊನಾ ವೈರಸ್ ಹರಡುವ ಭೀತಿಯಿಂದ ದೇಶವನ್ನೇ ಲಾಕ್ ಡೌನ್ ಮಾಡಿದ್ದರಿಂದ ಉತ್ತಮ ಬೆಲೆ ಹೊಂದಿದ್ದ ಕಲ್ಲಂಗಡಿಗೆ ಬೆಲೆ ಕುಸಿಯುವ ಜೊತೆಗೆ ಕೊಳ್ಳುವವರು ಇಲ್ಲದೇ ನಿರ್ದಿಷ್ಟ ಸಮಯಕ್ಕೆ ಮಾರುಕಟ್ಟೆಯನ್ನು ತಲುಪಿಸಲು ಸಾಧ್ಯವಾಗದೆ ಕಲ್ಲಂಗಡಿ ಹೊಲದಲ್ಲೇ ಕೊಳೆತು ಹೋಗುತ್ತಿದೆ.

ಕೊರೊನಾ ಭೀತಿ ಉಂಟಾಗಿದ್ದರಿAದ ಉತ್ತಮ ಫಸಲು ಬಂದರೂ ಅದರಿಂದ ಲಾಭ ಸಿಗದೇ ಕೈಗೆ ಬಂದ ತುತ್ತು ಬಾಯಿಗೆ ಬರದಾಗಿದೆ. ಮಧ್ಯವರ್ತಿಗಳು ಕೆಜಿಗೆ ೫೦ ಪೈಸೆ ಅಥವಾ ೧ ರೂಪಾಯಿಗೆ ಕೇಳುತ್ತಾರೆ. ಇನ್ನಾದರೂ ಸರ್ಕಾರ ಇತ್ತ ಗಮನ ಹರಿಸದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ನಮಗೆ ದಾರಿ. ಆದ್ದರಿಂದ ಜನರು ಉಚಿತವಾಗಿ ತೆಗೆದುಕೊಂಡು ಹೋಗಲು ಬಿಟ್ಟಿದ್ದೇನೆ ಎಂದು ರೈತ ಶಿವಕುಮಾರ್ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

ಬಂಡವಾಳವನ್ನು ತೊಡಗಿಸಿ ಬೆಳೆದ ಬೆಳೆ ಉತ್ತಮ ಫಸಲು ಬಂದಿದ್ದು ಹೆಚ್ಚಿನ ಸಂತೋವನ್ನುoಟು ಮಾಡಿತ್ತು. ಅಲ್ಲದೇ ತೊಡಗಿಸಿದ್ದ ೨.೧೦ ಲಕ್ಷ ಬಂಡವಾಳದ ಜೊತೆಗೆ ೪ ಲಕ್ಷದ ವರೆಗೆ ಆದಾಯ ಬರುವ ನಿರೀಕ್ಷೆ ಇತ್ತು.ಆದರೆ ಸರಿಯಾದ ಸಮಯಕ್ಕೆ ದೇಶದಾದ್ಯಂತ ಕೊರೊನಾ ವೈರಸ್ ಹಾವಳಿಯಿಂದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸದೇ ಜೊತೆಗೆ ಉತ್ತಮ ಬೆಲೆಯು ಸಿಗದೇ ಅತಂತ್ರವಾಗಿದೆ.ಕೆಜಿ ಗೆ ಎರಡು ರೂಪಾಯಿ ಕೊಡುತ್ತೇವೆ ಎನ್ನುತ್ತಾರೆ ಮಧ್ಯವರ್ತಿಗಳು ಇದರಿಂದಾಗಿ ಅಪಾರ ನಷ್ಟವಾಗಿದೆ.ಆದ್ದರಿಂದ ಸರ್ಕಾರ ಇತ್ತ ಗಮನಹರಿಸಿ ನಮಗೆ ಅಗತ್ಯ ಪರಿಹಾರ ನೀಡಬೇಕು ಎಂದು ರೈತ ಸತೀಶ್ ಮನವಿ ಮಾಡಿದರು.
ವರದಿ.ದೇ.ರಾ .ಜಗದೀಶ ದೇವಲಾಪುರ

error: