March 30, 2023

Bhavana Tv

Its Your Channel

ಕುಂಚ ಕಲಾವಿದರ ಸಂಘದಿoದ ಕೋರೋನಾ ಎಚ್ಚರಿಕೆಯ ನಾಮಪಲಕ

ಕೃಷ್ಣರಾಜರಾಜ ಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದಲ್ಲಿ ಕುಂಚ ಕಲಾವಿದರ ಸಂಘದ ವತಿಯಿಂದ ಎಲ್ಲಾ ಸರ್ಕಾರಿ ಕಚೇರಿಯ ಕಾಂಪೌಡಗಳ ಮೇಲೆ ಕರೋನ ವೈರಸ್ ಬಗ್ಗೆ ಚಿತ್ರಕಲೆ ಹಾಗೂ ವೈರಸ್ ತಡೆಕಟ್ಟುವ ಸಲುವಾಗಿ ನಾಮ ಪಲಕಗಳನ್ನು ಬರೆದು ಸಾರ್ವಜನಿಕರು ಮನೆಯಲ್ಲೆ ಇರುವಂತೆ ಅರಿವು ಮೂಡಿಸುವ ಜೊತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಕೊರೋನಾ ವೈರಸ್ ತಡೆಗಟ್ಟಲು ತಮ್ಮ ಕೈಲಾದ ಕೆಲಸವನ್ನು ಮಾಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕಿಕ್ಕೇರಿ ಪೋಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಶಾಂತಕುಮಾರ್ ರವರು ಕುಂಚ ಕಲಾವಿದರ ಸಂಘದ ಸಾಮಾಜಿಕ ಕೆಲಸವನ್ನು ನೋಡಿ ಮೆಚ್ಚುಗೆ ವ್ಯೆಕ್ತಪಡಿಸಿದರು..

ಈ ಸಂರ್ಭದಲ್ಲಿ ಕುಂಚಕಲಾವಿದರ ಸಂಘ ಕೆ.ಆರ್ ಪೇಟೆ ಅದ್ಯಕ್ಷರಾದ ಆನಂದ್, ಉಪಾದ್ಯಕ್ಷರಾದ ರಮೇಶ್, ಸದಸ್ಯರಾದ ವಿನಯ್, ಹರೀಶ್, ಓಂಕಾರ್ ಮೂರ್ತಿ, ಮಹೇಂದ್ರ, ಲೋಕೇಶ್, ಸುರೇಶ್, ಮುರ್ಗೇಶ್, ರಘು, ಮತ್ತಿತ್ತರರು ಇದ್ದರು.

ವರದಿ : ಶಂಭು ಕಿಕ್ಕೇರಿ

About Post Author

error: