September 14, 2024

Bhavana Tv

Its Your Channel

ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ನ ರವರ ಸಹಕಾರದೊಂದಿಗೆ ಕುಂಚ ಕಲಾವಿದರ ಸಂಘದ ಸದಸ್ಯರಿಗೆ ಅಕ್ಕಿ ಮತ್ತು ಮಾಸ್ಕ್

ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಕುಂಚ ಕಲಾವಿದರ ಸಂಘದ ಸದಸ್ಯರು ಕೊರೋನಾ ವೈರಸ್ ಬಗ್ಗೆ ಚಿತ್ರಕಲೆ ಹಾಗೂ ಬರಹಗಳ ಮೂಲಕ ತಾಲ್ಲೂಕಿನ ಜನತೆಗಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು ಇಂತಹ ಬಡ ಕಲಾವಿದರಿಗೆ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಸಂಸ್ಥಾಪಕಾರದ ಬಿ.ಎಂ ಕಿರಣ್ ರವರ ಸಹಕಾರದಿಂದ ಅಕ್ಕಿ ಮತ್ತು ಮಾಸ್ಕ್ ನೀಡಿರುವುದು ಉತ್ತಮ ಕೆಲಸ ಹಾಗೇ ಉಳ್ಳವರು ಇಂತಹ ಕಾರ್ಯಗಳನ್ನು ಮಾಡಬೇಕು ಎಂದು ಕೃಷ್ಣರಾಜಪೇಟೆ ತಾಲ್ಲೂಕಿನ ದಂಡಾದಿಕಾರಿಗಳಾದ ಶಿವಮೂರ್ತಿ ತಿಳಿಸಿದರು.

ಈ ಸಂರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾದ್ಯಕ್ಷರಾದ ಕೆ ಎಸ್ ಪ್ರಭಾಕರ್, ಮುಖಂಡರಾದ ಮಿಲ್ ರಾಜಣ್ಣ, ಉಪ ತಹಸಿಲ್ದಾರ್ ಲಕ್ಷ್ಮೀಕಾಂತ್,ಪತ್ರಕರ್ತರಾದ ಎಚ್.ಬಿ‌ ಮಂಜುನಾಥ್, ಕಂದಾಯ ಇಲಾಖೆ ಸಿಬ್ಬಂದಿಗಳು, ಹಾಗೂ ಕುಂಚ ಕಲಾವಿದರ ಸಂಘದ ಸದಸ್ಯರುಗಳು ಸೇರಿಂದತೆ ನೂರಾರು ಜನರು ಇದ್ದರು..

ವರದಿ : ಶಂಭು ಕಿಕ್ಕೇರಿ

error: