November 14, 2024

Bhavana Tv

Its Your Channel

ಹಾಲು ಉತ್ಪಾದಕರ ಸಾಮಾಜಿಕ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ತಾಲೂಕು ದಂಡಾಧಿಕಾರಿಗಳು

ಕೋರೋನ ವೈರಸ್ ಹಿನ್ನೆಲೆಯಲ್ಲಿ ತಾಲೂಕಿನ ಜನತೆ ತಮಗೆ ತಾವೇ ನಿರ್ಬಂಧನ ಹಾಕಿಕೊಂಡು ಹೆಮ್ಮಾರಿ ಕೋರೋನ ವೈರಸ್ ವಿರುದ್ಧ ಅಂತರ ಕಾಯ್ದು ಕೊಳ್ಳುವುದಕ್ಕಾಗಿ ಉತ್ತಮ ಉಪಾಯ ಕಂಡುಕೊAಡಿದ್ದಾರೆ. ಮುಂಜಾನೆಯ ಜನದಟ್ಟಣೆ ಇರುವ ಜಾಗವಿರುವುದರಿಂದ ತಾವು ಸಾಕಿರುವ ಜಾನುವಾರುಗಳ ಹಾಲನ್ನು ಕರೆದು ತಮ್ಮ ಗ್ರಾಮದ ಸಮೀಪದ ಹಾಲು ಉತ್ಪಾದಕರ ಸಂಘದ ಆವರಣದಲ್ಲಿ ಅಕ್ಕಪಕ್ಕದಲ್ಲಿ ನಿಲ್ಲುವ ಜಾಗವನ್ನು ಸ್ವಚ್ಛವಾಗಿಟ್ಟುಕೊಂಡು ಹಾಲು ಸರಬರಾಜಿಗೆ ಮುಂದಾಗಿದ್ದಾರೆ.ಅಲ್ಲದೆ ಮಹಾಮಾರಿ ಕರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಡೈರಿಗೆ ಹಾಲು ಸರಬರಾಜು ಮಾಡುತ್ತಿದ್ದಾರೆ.

ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಕೊರೋನಾ ಮಹಾಮಾರಿಯ ಅಟ್ಟಹಾಸವನ್ನು ತಡೆಗಟ್ಟಲು ಆರೋಗ್ಯ ಇಲಾಖೆಯ ಮುನ್ಸೂಚನೆಯಂತೆ ಸಾಮಾಜಿಕ ಅಂತರ ಕೈಗೊಳ್ಳುವ ಕಾರ್ಯದಲ್ಲಿ ಗ್ರಾಮದ ಮುಗ್ಧ ಜನತೆ ಸಹಕರಿಸಿದ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿಗಳಾದ ಶಿವಮೂರ್ತಿ ರವರು ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ಮಾದಾಪುರ ಹಾಗೂ ಗ್ರಾಮದ ಸಾರ್ವಜನಿಕರಿಗೆ ಶ್ಲಾಘನೆ ವ್ಯಕ್ತಪಡಿಸಿದರು.

error: