March 29, 2025

Bhavana Tv

Its Your Channel

ಹುಬ್ಬಳ್ಳಿಯ ಸಿಟಿ ಹೈಸ್ಕೂಲ್ ವಿದ್ಯಾರ್ಥಿಗಳ ಉತ್ತಮ ಸಾಧನೆ

ಹುಬ್ಬಳ್ಳಿ:-2021-22 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಸಿಟಿ ಪ್ರೌಢಶಾಲೆ ಹುಬ್ಬಳ್ಳಿಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಹೇಮಾ ಈರಗಾರ 625 ಕ್ಕೆ 611 (97.76%) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ, ಪುಷ್ಪಾ ಬಡಿಗೇರ ಹಾಗೂ ಸಜ್ಜಾದ ರೋಟಿವಾಲೆ 625 ಕ್ಕೆ 594 (95.04%) ಅಂಕ ಪಡೆದು ಶಾಲೆಗೆ ದ್ವಿತೀಯ, ಮಧು ಜಾವಳಕೋಟಿ 625 ಕ್ಕೆ 587 (93.92%) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಜೋತಿಬಾ ಜಾಧವ ಶೇ.93.60 ದೇವಕ್ಕಾ ಪೂಜಾರ ಶೇ.93.28 ಕವಿತಾ ವಾಲಿಕಾರ ಶೇ.93.12 ಸ್ವಾತಿ ಸುಣಗಾರ ಶೇ.92.00 ಸ್ನೇಹಾ ಹಿರೇಮಠ ಶೇ.91.68 ದಿವ್ಯಾ ಅಡಗತ್ತಿ ಶೇ.90.88 ಅಫ್ರೋಜಾಫಾತಿಮಾ ಹರ್ತಿ ಶೇ. 89.44 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಕೆಲವು ವಿದ್ಯಾರ್ಥಿಗಳು 125 ಕ್ಕೆ 125 ಅಂಕಗಳನ್ನು ಹಾಗೂ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.

ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯಾದ್ಯಾಫಕಾರಾದ ಶ್ರೀಮತಿ ವ್ಹಿ.ಡಿ ಜೋಶಿ, ಹಿರಿಯ ಶಿಕ್ಷಕರಾದ ಶ್ರೀ ಪಿ.ಎಚ್ ಪೂಜಾರ ಗುರುಗಳು, ಶಾಲೆಯ ಶಿಕ್ಷಕ ವೃಂದದವರು, ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ..

error: