
ಅಖಿಲಭಾರತ ಕೊಂಕಣಿ ಪರಿಷತ್ ನ 32 ನೇ ಅಧಿವೇಶನ ಮಹಾರಾಷ್ಟ್ರದ ಮಾಲ್ವನ್ ನಲ್ಲಿ ಮೇ 14 ಮತ್ತು 15 ರಂದು ನಡೆಯಿತು.
ಈ ಸಂಧರ್ಭದಲ್ಲಿ ಕುಮಟಾ ಪ್ರಸಿದ್ಧ ” ನೃತ್ಯ ಸ್ವರ ಕಲಾ ಟ್ರಸ್ಟ್” ನಿಂದ ಕಲೆ ಪ್ರದರ್ಶಿಸಿದರು.
ನೃತ್ಯಸ್ವರ ಕಲಾ ಟ್ರಸ್ಟ್ ನ ನೃತ್ಯಗುರು ಶ್ರೀಮತಿ ವಿಜೇತಾ ಭಂಡಾರಿ ಯವರ ಶಿಷ್ಯೆಯರಾದ ಕುಮಾರಿ ದಿವ್ಯಜ್ಯೋತಿ,ಕುಮಾರಿ ವೈಭವಿ,ಕುಮಾರಿ ಸ್ವರಾ,ಕುಮಾರಿ ಕೀರ್ತಿ,ಕುಮಾರಿ ನವ್ಯಾ,ಕುಮಾರಿ ಕೃತಿಕಾ ಇವರು ಕೊಂಕಣಿ ದಶಾವತಾರ ನೃತ್ಯ ರೂಪಕ ಪ್ರದರ್ಶಿಸಿದರು.ಮಂಗಳೂರಿನ ಖ್ಯಾತ ಕವಯತ್ರಿ ಶ್ರೀಮತಿ ಶಕುಂತಲಾ ಕಿಣಿಯವರು ರಚಿಸಿದ ಗೀತೆಗೆ ನೃತ್ಯ ಸಂಯೋಜನೆ ಹಾಗೂ ಹಿನ್ನಲೆ ಗಾಯಕರಾಗಿ ಶ್ರೀಮತಿ ವಿಜೇತಾ ಭಂಡಾರಿ,ತಬಲಾ ವಾದಕರಾಗಿ ಕೃಷ್ಣಪ್ರಸಾದ್, ಕೀಬೋರ್ಡು ವಾದಕರಾಗಿ ನವೀನ್ ಶೇಟ್ ಇವರು ಕಾರ್ಯ ನಿರ್ವಹಿಸಿದರು,,ಕಲಾಟ್ರಸ್ಟ್ ನ ಕಾರ್ಯದರ್ಶಿ ಸೋಮಶೇಖರ್ ನಾಯ್ಕ್ ರವರು ಉಪಸ್ಥಿತರಿದ್ದು,ಕಾರ್ಯಕ್ರಮವು ವಿಭಿನ್ನವಾಗಿ ಮೂಡಿ ಬಂದು, ಜನಮೆಚ್ಚುಗೆ ಪಡೆಯಿತು…

More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ