April 23, 2024

Bhavana Tv

Its Your Channel

ಬನವಾಸಿ ತಾಲೂಕು ಹೋರಾಟ ಸಮಿತಿ ಪ್ರತಿಭಟನೆ ಹಿನ್ನೆಲೆ :ಶ್ರೀ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಇಲಾಖೆ ಅಧಿಕಾರಿಗಳು!!

ಬನವಾಸಿ :-ಇತಿಹಾಸ ಪ್ರಸಿದ್ಧ ಬನವಾಸಿಯ ಶ್ರೀ ಮಧುಕೇಶ್ವರ ದೇವಾಲಯ ಸಂಪೂರ್ಣವಾಗಿ ಸೋರುತ್ತಿರುವುದನ್ನು ಖಂಡಿಸಿ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ವಿರುದ್ದ, ಬನವಾಸಿ ತಾಲೂಕು ಹೋರಾಟ ಸಮಿತಿ ಪ್ರತಿಭಟನೆಗೆ ಸಜ್ಜಾದ ಹಿನ್ನೆಲೆಯಲ್ಲಿ, ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಇಲಾಖೆಯ ಹಾವೇರಿ ಉಪ ವಿಭಾಗದ ಹಿರಿಯ ಸಂರಕ್ಷಣೆ ಅಧಿಕಾರಿ (ಸಿ ಎ )ಎಂ. ಬಿ. ವಿಜಯಕುಮಾರ್ ತಮ್ಮ ಸಿಬ್ಬಂದಿಗಳೊAದಿಗೆ ಶ್ರೀ ಮಧುಕೇಶ್ವರ ದೇವಸ್ಥಾನ ಬೇಟಿ ಮಾಡಿ ಸೋರಿಕೆಯನ್ನು ಖುದ್ದಾಗಿ ಪರಿಶೀಲನೆ ಮಾಡಿದರಲ್ಲದೆ, ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ರಿಪೇರಿ ಕಾರ್ಯ ಪ್ರಾರಂಭ ಮಾಡುವ ಭರವಸೆ ನೀಡಿದ್ದಾರೆ. ಪ್ರತಿಭಟನೆಗೆ ಕರೆ ನೀಡಿದ ಬನವಾಸಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ್ ಪಿ. ಕಾನಳ್ಳಿ ಸೋರಿಕೆ ಎಲ್ಲೆಲ್ಲಿ ಇದೆ ಎಂದು ತೋರಿಸಿ ಮನವರಿಕೆ ಮಾಡಿದರು. ಅಲ್ಲದೆ ಇಷ್ಟೊಂದು ದೊಡ್ಡ ಇತಿಹಾಸ ಇರುವ ದೇವಸ್ಥಾನಕ್ಕೆ ಇಲಾಖೆ ನೀಡುವ ಮಹತ್ವ ತುಂಬಾ ಕಡಮೆ ಎಂದು ಆಕ್ಷೇಪಿಸಿ, ಹೆಚ್ಚು ಮಹತ್ವ ನೀಡಲು ಅಗ್ರಹಿಸಿದರು. ಇಲಾಖೆಯ ಹಿರಿಯ ಅಧಿಕಾರಿಗಳು ದೇವಸ್ಥಾನಕ್ಕೆ ಬೇಟಿ ಮಾಡಿ ಪರಿಶೀಲನೆ ಮಾಡಬೇಕು ಅಲ್ಲದೆ ಹೇಳಿದಂತೆ ಸೆಪ್ಟೆಂಬರ್ ನಲ್ಲಿ ಕೆಲಸ ಪ್ರಾರಂಬಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಸಮಿತಿ ಗೌರವಧ್ಯಕ್ಷ ಸಿ. ಎಫ್. ನಾಯ್ಕ್ ದೊಡ್ಡ ಇತಿಹಾಸ ಇರುವ ಕ್ಷೇತ್ರ ಬನವಾಸಿ ದೇವಸ್ಥಾನಕ್ಕೆ ಹೆಚ್ಚಿನ ಅಭಿವೃದ್ಧಿ ಆಗಬೇಕು, ಹೆಚ್ಚಿನ ಸಂರಕ್ಷಣೆ ಆಗಬೇಕು ಎಂದು ಅಗ್ರಹಿಸಿದರು. ಸಮಿತಿ ಕಾರ್ಯದರ್ಶಿ ವಿಶ್ವನಾಥ್ ವಡೆಯರ್, ದೇವಸ್ಥಾನ ಆಡಳಿತ ಕಮಿಟಿ ಸದಸ್ಯರಾದ ಶಿವಯೋಗಿ ಉಳ್ಳಾಗಡ್ಡಿ, ಸೀಮಾ ಕೆರೂಡಿ, ದಯಾನಂದ ಮರಾಟೆ, ಜೈ ಶಂಕರ್ ಮೇಸ್ತ್ರಿ, ಪತ್ರಕರ್ತರಾದ ಸುಧೀರ್ ನಾಯರ್, ಅರವಿಂದ್ ಬಳೆಗಾರ, ಪ್ರಮುಖರಾದ ಸಾಯಿರಾಮ ಕಾನಳ್ಳಿ, ನಾಗೇಶ್ ಪತ್ರೆ, ಶಂಕರ್ ಉಪ್ಪಾರ್, ಅಭಿನಂದನ್ ದಾರವಾಡ, ಇಲಾಖೆಯ ಅನಂತ ಖರೆ ಹಾಗೂ ಬ್ರಹ್ಮಕುಮಾರ್ ಮುಂತಾದವರಿದ್ದರು.
ಶ್ರೀ ಮಧುಕೇಶ್ವರ ದೇವಸ್ಥಾನದ ಗರ್ಭ ಗುಡಿ, ಸಂಕಲ್ಪ ಮಂಟಪ, ಆದಿ ಮಾದವ, ಗಂಟಾ ಮಂಟಪ, ನ್ರತ್ಯ ಮಂಟಪ, ಕೂಡುವ ಆಸನಗಳ ಮೇಲೆ, ಬಸವನ ಸುತ್ತ, ಇನ್ನುಳಿದ ಪ್ರಾಕಾರದಲ್ಲಿರುವ ದೇವಸ್ಥಾನ ಸೋರಿಕೆ ಬಗ್ಗೆ ಹೋರಾಟ ಸಮಿತಿ ಇಲಾಖೆ ಗಮನಕ್ಕೆ ತಂದಿತ್ತು.

error: