April 26, 2024

Bhavana Tv

Its Your Channel

ಕರ್ನಾಟಕದಲ್ಲಿ ಕೊರೋನಾ ಹೊಸ ದಾಖಲೆ, ಇಂದು ೩೮೮ ಮಂದಿಗೆ ಪಾಸಿಟಿವ್..!

ಬೆಂಗಳೂರು : – ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿ ಒಂದೇ ದಿನ ರಾಜ್ಯದಲ್ಲಿ ೩೮೮ ಹೊಸ ಸೋಂಕಿತರು ಪತ್ತೆಯಾಗಿದ್ದು ಜನರಲ್ಲಿ ಗಾಬರಿ ಮೂಡಿಸಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ೩,೭೯೬ಕ್ಕೆ ಏರಿಕೆಯಾಗಿದೆ.

ಪತ್ತೆಯಾಗಿರುವ ೩೮೮ ಪ್ರಕರಣಗಳ ಪೈಕಿ ೩೬೩ ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರಿAದಲೇ ಪತ್ತೆಯಾಗಿದೆ. ಉಡುಪಿಯಲ್ಲಿ ೧೫೦ ಪ್ರಕರಣ ಮತ್ತು ಕಲಬುರಗಿಯಲ್ಲಿ ೧೦೦ ಪತ್ತೆಯಾಗಿದ್ದು ಮಹಾ ನಂಜಿಗೆ ಅಕ್ಷರಶಃ ತತ್ತರಿಸಿ ಹೋಗಿವೆ.

ಉಡುಪಿ ೧೫೦, ಕಲಬುರಗಿ ೧೦೦, ಬೆಳಗಾವಿ ೫೧, ರಾಯಚೂರು ೧೬, ಬೆಂಗಳೂರು ನಗರ ೧೨, ಬೀದರ್ ೧೦, ಬಾಗಲಕೋಟೆ ಹಾಸನ ೯, ದಾವಣಗೆರೆ ೭, ಯಾದಗಿರಿ ೫, ಮಂಡ್ಯ, ವಿಜಯಪುರದಲ್ಲಿ ತಲಾ ೪, ಬೆಂಗಳೂರು ಗ್ರಾಮಾಂತರ ೩, ಚಿಕ್ಕಬಳ್ಳಾಪುರ, ಧಾರವಾಡ, ಚಿಕ್ಕಮಗಳೂರಿನಲ್ಲಿ ತಲಾ ೨, ಕೋಲಾರ, ಹಾವೇರಿಯಲ್ಲಿ ತಲಾ ೧ ಪ್ರಕರಣ ಪತ್ತೆಯಾಗಿವೆ.

ಒಟ್ಟು ೪೧೦ ಪ್ರಕರಣಗಳೊಂದಿಗೆ ಉಡುಪಿ ಈಗ ರಾಜ್ಯದ ಕೊರೋನಾ ಕಾರಸ್ಥಾನವಾಗಿದ್ದರೇ ಕಲಬುರ್ಗಿ ೪೦೫ ಪ್ರಕರಣಗಳನ್ನು ಕಂಡಿದೆ.
ದಕ್ಷಿಣ ಕನ್ನಡ, ಮೈಸೂರು, ಉತ್ತರ ಕನ್ನಡ, ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ , ಗದಗ, ಚಿಕ್ಕಮಗಳೂರು, ಕೊಪ್ಪಳ, ಕೊಡಗು, ರಾಮನಗರದಲ್ಲಿ ಇಂದು ಯಾವುದೇ ಪಾಸಿಟಿವ್ ವರದಿಯಾಗಿಲ್ಲ.

ಮಂಡ್ಯ ೨೦, ಧಾರವಾಡ ೧೫, ಬಳ್ಳಾರಿ ೧೧, ಬೆಳಗಾವಿ ೯, ಉತ್ತರ ಕನ್ನಡ ೫, ತುಮಕೂರು ೫, ಕೋಲಾರ ೪, ಹಾವೇರಿ ೩, ವಿಜಯಪುರದಲ್ಲಿ ೩ ಮಂದಿ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

೩,೭೯೬ ಪ್ರಕರಣಗಳ ಪೈಕಿ ೧೪೦೩ ಮಂದಿ ಗುಣಮುಖರಾಗಿದ್ದಾರೆ. ಇನ್ನು ೨೩೩೯ ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಒಟ್ಟಾರೆ ೫೨ ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

error: