May 3, 2024

Bhavana Tv

Its Your Channel

ರಾಜ್ಯದಲ್ಲಿ ಮುಂದುವರೆದ ಕರೋನಾ ಆರ್ಭಟ ; ಉಡುಪಿ ಯಾದಗಿರಿಯಲ್ಲಿ ಒಂದೇ ದಿನ ಶತಕ ದಾಟಿದ ಸೊಂಕಿತರು

ಬೆಂಗಳೂರು: ರಾಜ್ಯದಲ್ಲಿ ನಿಧಾನಗತಿಯಲ್ಲಿ ಏರುತ್ತಿದ್ದ ಕೊರೋನ ಸೋಂಕಿನ ಪ್ರಕರಣಗಳು ವೇಗ ಪಡೆದುಕೊಂಡಿದ್ದು, ವ್ಯಾಪಕವಾಗಿ ಹರಡುವ ಮೂಲಕ ರಾಜ್ಯದ ಜನತೆಯಲ್ಲಿ ಆತಂಕವನ್ನು ಉಂಟುಮಾಡಿದೆ. ಕರ್ನಾಟಕದಲ್ಲಿ ಒಂದೇ ದಿನ ಮತ್ತೆ ೩೭೮ ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ ೫,೨೧೩ಕ್ಕೆ ಏರಿಕೆಯಾಗಿದೆ.
ಬೀದರ್ ಮತ್ತು ವಿಜಯಪುರ ಜಿಲ್ಲೆಯಲ್ಲಿ ಕೊರೋನದಿಂದ ತಲಾ ಒಂದು ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ ೫೯ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಶುಕ್ರವಾರ ಹೆಲ್ತಬುಲೆಟಿನ್ ಪ್ರಕಾರ ಎರಡು ಸಾವು ಮತ್ತು ೩೭೮ ಕೋವಿಡ್ ಪ್ರಕರಣಗಳು ಪಾಸಟಿವ್ ಎಂದು ಬಂದಿದೆ. ಜಿಲ್ಲಾವಾರು ನೋಡುದಾದರೆ,
ಉಡುಪಿ-೧೨೧, ಕಲಬುರ್ಗಿ ೬೯, ಯಾದಗಿರಿ-೧೦೩, ಬೆಂಗಳೂರು ನಗರ -೧೮, ರಾಯಚೂರು -೦೨, ಮಂಡ್ಯ-೦೩, ಬೆಳಗಾವಿ -೦೫, ಬೀದರ್ -೦೧, ಹಾಸನ-೦೩, ವಿಜಯಪುರ-೦೬, ದಾವಣಗೆರೆ -೦೬, ದಕ್ಷಿಣ ಕನ್ನಡ -೨೪, ಚಿಕ್ಕಬಳ್ಳಾಪುರ -೦೨, ಉತ್ತರ ಕನ್ನಡ -೦೨, ಧಾರವಾಡ -೦೩, ಗದಗ -೦೪, ತುಮಕೂರು -೦೧, ಕೋಲಾರ -೦೧, ಹಾವೇರಿ -೦೩, ಕೊಪ್ಪಳ -೦೧ ಪ್ರಕರಣ ಪತ್ತೆಯಾಗಿದೆ.
ಒಟ್ಟಾರೆಯಾಗಿ ಇಂದು ಹೊಸದಾಗಿ ದಾಖಲೆಯ ೩೭೮ ಜನರಿಗೆ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಆಗಿ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ೫೨೧೩ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೋನಾಗೆ ಇದುವರೆಗೆ ೫೯ ಜನರು ಬಲಿಯಾಗಿದ್ದಾರೆ. ಇದುವರೆಗೆ ೩೧೮೪ ಕೊರೊನಾ ವೈರಸ್ ಸೋಂಕು ಪೀಡಿತರು ಗುಣಮುಖರಾಗಿರುವುದಾಗಿಟಿವ್ ಬಂದಿರುವುದಾಗಿ ಮಾಹಿತಿ ನೀಡಲಾಗಿದೆ.

error: