March 28, 2025

Bhavana Tv

Its Your Channel

ಬೆಂಗಳೂರಿನಲ್ಲಿ ಕೊರೋನಾಗೆ ಮತ್ತೆ ಮೂವರು ಬಲಿ, ರಾಜ್ಯದಲ್ಲಿ ಹೊಸದಾಗಿ 308 ಪಾಸಿಟಿವ್ ಪ್ರಕರಣ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಇಂದು 308 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಲಬುರ್ಗಿ ಜಿಲ್ಲೆಯಲ್ಲಿ 99 ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಕಲಬುರ್ಗಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 759 ಕ್ಕೆ ಏರಿಕೆಯಾಗಿದ್ದು ಇವತ್ತು 47 ಮಂದಿ ಸೇರಿದಂತೆ 213 ಮಂದಿ ಬಿಡುಗಡೆಯಾಗಿದ್ದಾರೆ. ಯಾದಗಿರಿಯಲ್ಲಿ 581 ಒಟ್ಟು ಸೋಂಕಿತರ ಸಂಖ್ಯೆ ಇದ್ದು ಇವತ್ತು 23 ಮಂದಿ ಸೇರಿದಂತೆ ಒಟ್ಟು 92 ಮಂದಿ ಬಿಡುಗಡೆಯಾಗಿದ್ದಾರೆ. ಉಡುಪಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 947 ಆಗಿದ್ದು ಇಂದು 215 ಬಿಡುಗಡೆಯಾಗಿದ್ದು ಇದುವರೆಗೆ 318 ಮಂದಿ ಬಿಡುಗಡೆಯಾದಂತಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ 66, ಬೀದರ್ ನಲ್ಲಿ 48, ಉಡುಪಿ 45, ಬೆಂಗಳೂರು ನಗರ 18, ಬಳ್ಳಾರಿ 8, ಗದಗ 6, ಶಿವಮೊಗ್ಗ 4, ಧಾರವಾಡ 4, ಹಾಸನ 3, ದಕ್ಷಿಣ ಕನ್ನಡ 3, ಬಾಗಲಕೋಟೆ 2, ಕೊಪ್ಪಳ 1, ರಾಮನಗರ 1 ಸೇರಿದಂತೆ ಒಟ್ಟು 308 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5760 ಕ್ಕೆ ಏರಿಕೆಯಾಗಿದೆ. ಇಂದು ಮೂವರು ಮೃತಪಟ್ಟಿದ್ದು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 64 ಕ್ಕೆ ಏರಿಕೆಯಾಗಿದೆ.

error: