
ಚಾಮರಾಜನಗರ : ಕೊರೋನಾ ಮುಕ್ತ ಹಸಿರು ಕಿರೀಟ ಹೊತ್ತಿದ್ದ ಗಡಿ ಜಿಲ್ಲೆ ಚಾಮರಾಜನಗರಕ್ಕೂ ಮಹಾ ಮಾರಿ ಕೊರೋನಾ ಕಾಲಿಟ್ಟಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದ 25 ವರ್ಷದ ಯುವಕನಿಗೆ ಕೊರೋನಾ ಇರುವುದು ದೃಢ ಪಟ್ಟಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಇನ್ನೂ ಕೊಟ್ಟಿಲ್ಲ.
ಮುಂಬೈನಿಂದ ಹನೂರು ತಾಲೂಕಿನ ಮಾರ್ಟಳ್ಳಿಗೆ ಹೋಗುತ್ತಿದ್ದ ಮಹಾರಾಷ್ಟ್ರ ಮೂಲದ ವ್ಯಕ್ತಿಯನ್ನು ಏಳು ದಿನಗಳ ಹಿಂದೆ ಹನೂರಿನಲ್ಲಿ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿತ್ತು. ಮಹಾರಾಷ್ಟ್ರದಿಂದ ಬಂದಿದ್ದಾನೆ ಅನ್ನುವ ಕಾರಣದಿಂದ ಈ ವ್ಯಕ್ತಿಯ ಗಂಟಲು ದ್ರವ, ರಕ್ತ ಮಾದರಿ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಲಾಗಿತ್ತು.
ಪಾಸಿಟಿವ್ ಇರುವ ವ್ಯಕ್ತಿ ಈಗಾಗಲೇ ಕ್ವಾರಂಟೈನ್‌ನಲ್ಲಿರುವ ಕಾರಣ ಇತರರಿಗೆ ಸೋಂಕು ಹರಡಿರುವ ಸಾಧ್ಯತೆ ಇಲ್ಲ.
More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ