
ಶ್ರೀರಂಗಪಟ್ಟಣ: ಕಳೆದೆರಡು ದಿನಗಳಿಂದ ನಗರದಾದ್ಯಂತ ಅಲೆದಾಡುತ್ತಿರುವ ಹುಚ್ಚ ವೆಂಕಟ್ ಇಂದು ಮಧ್ಯಾಹ್ನ ಕಬ್ಬಿನ ಜ್ಯೂಸ್ ಅಂಗಡಿಯಲ್ಲಿ ಜ್ಯೂಸ್ ಕುಡಿದು ಹಣ ಕೊಡದೆ ರಂಪಾಟ ಮಾಡಿದ್ದು ಈ ವೇಳೆ ಕೆರಳಿದ ಅಂಗಡಿ ಮಾಲಕ ಸ್ಥಳೀಯರ ಜೊತೆ ಸೇರಿ ಗೂಸಾ ನೀಡಿರುವ ಘಟನೆ ವರದಿಯಾಗಿದೆ.
ಶ್ರೀರಂಗಪಟ್ಟಣದ ದರಸಗುಪ್ಪೆ ಬಳಿ ಘಟನೆ ನಡೆದಿದ್ದು ಜ್ಯೂಸ್ ಹಣ ನೀಡದೆ ಹುಚ್ಚ ವೆಂಕಟ್ ಗಲಾಟೆ ಮಾಡಿದ್ದಾನೆ. ನಂತರ ಮುಂದುವರಿದು ಅಂಗಡಿಯವನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ವೆಂಕಟ್‍ಗೆ ಸಾರ್ವಜನಿಕರು ಹಲ್ಲೆ ಮಾಡಿದ್ದಾರೆ. ಹುಚ್ಚ ವೆಂಕಟ್ ಸದ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡವನಂತೆ ಮಂಡ್ಯ, ಶ್ರೀರಂಗಪಟ್ಟಣ ಮುಂತಾದೆಡೆಗಳಲ್ಲಿ ಅಲೆದಾಡುತ್ತಿದ್ದು ಆತನ ಮೇಲೆ ಸಾರ್ವಜನಿಕರು ಹಲ್ಲೆ ಮಾಡುತ್ತಿರುವ ಘಟನೆಗಳು ಜರುಗುತ್ತಿವೆ
More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ