
ಕಾರವಾರ: ಜಿಲ್ಲೆಯಲ್ಲಿ ಕರೋನಾ ಆರ್ಭಟ ಮುಂದುವರೆದಿದ್ದು ಹೊಸದಾಗಿ ೧೭ ಮಂದಿಗೆ ಕೋವಿಡ್- ೧೯ ಸೋಂಕು ದೃಢಪಟ್ಟಿದೆ.
ಇಷ್ಟು ದಿನ ಮುಂಬೈ ನಿಂದ ಆಗಮಿಸಿದವರಿಗೆ ಸೊಂಕು ಪತ್ತೆಯಾಗುತ್ತಿದ್ದರೆ ಇಂದು ದುಬೈ ಕಂಟಕವು ಇದಕ್ಕೆ ಸೆರ್ಪಡೆಯಾಗಿದೆ ಭಟ್ಕಳದಲ್ಲಿ ೧೧, ಹಳಿಯಾಳದಲ್ಲಿ ಎರಡು, ಕುಮಟಾ, ಯಲ್ಲಾಪುರ, ಅಂಕೋಲಾ, ಮುಂಡಗೋಡದಲ್ಲಿ ತಲಾ ಒಂದು ಪ್ರಕರಣ ಇಂದು ದೃಢಪಟ್ಟಿದೆ. ದುಬೈನಿಂದ ಆಗಮಿಸಿ ೯ಜನರಲ್ಲಿ ಸೊಂಕುದೃಡವಾದರೆ, ಒರ್ವರು ಚೈನ್ನೆನಿಂದ ಆಗಮಿಸಿದವರು ಇದ್ದಾರೆ. ಇನ್ನೊಬ್ಬರು ಸೊಂಕಿತರ ಸಂಪರ್ಕಕ್ಕೆ ಬಂದವರಿಗೆ ಸೊಂಕು ತಗಲಿದೆ. ಉಖಳಿದಂತೆ ಕುಮಟಾ ಅಂಕೋಲಾದಲ್ಲಿ ಪ್ರಾಥಮಿಕ ಸಂಪರ್ಕದಿoದ ಸೊಂಕು ದೃಡವಾದರೆ, ಉಳಿದ ತಾಲೂಕಿನಲ್ಲಿ ಪತ್ತೆಯಾದ ಎಲ್ಲಾ ಪ್ರಕರಣಗಳಿಗೂ ನೆರೆಯ ರಾಜ್ಯ ಮಹರಾಷ್ಟçದ ನಂಟಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೨೯೩ಕ್ಕೆ ತಲುಪಿದ್ದು, ಎರಡು ಸಾವು ಸಂಭವಿಸಿದ್ದು, ೧೪೪ ಮಂದಿ ಈಗಾಗಲೇ ಗುಣಮುಖರಾಗಿದ್ದು, ಸಕ್ರಿಯವಾಗಿ ೧೪೭ ಸೋಂಕಿತರಿಗೆ ಚಿಕಿತ್ಸೆಯನ್ನು ಮುಂದುವರಿದಿದೆ.
More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ