April 29, 2024

Bhavana Tv

Its Your Channel

ಕರ್ನಾಟಕಕ್ಕೆ ಕೊರೋನಾಘಾತ: ಇಂದು ಬೆಂಗಳೂರಿನಲ್ಲಿ ೮೮೯, ರಾಜ್ಯದಲ್ಲಿ ೧,೫೦೨ ಪ್ರಕರಣಗಳು ಪತ್ತೆ!

ಬೆಂಗಳೂರು : ಕರ್ನಾಟಕದಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ೧೫೦೨ ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ೧೮,೦೧೬ ಕ್ಕೆ ಏರಿಕೆಯಾಗಿದೆ.
ಇಂದೂ ಸಹ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಗರವೇ ಮುಂಚೂಣಿಯಲ್ಲಿದೆ. ಇನ್ನುಳಿದಂತೆ ದಕ್ಷಿಣ ಕನ್ನಡ, ಮೈಸೂರು, ಬಳ್ಳಾರಿ, ಧಾರವಾಡ, ವಿಜಯಪುರ, ರಾಮನಗರ, ಕಲಬುರಗಿ, ಬೀದರ್, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ.
ಬೆಂಗಳೂರು-೮೮೯, ದಕ್ಷಿಣಕನ್ನಡದಲ್ಲಿ ೯೦, ಮೈಸೂರು ೬೮, ಬಳ್ಳಾರಿ ೬೫, ಧಾರವಾಡ-೪೭, ವಿಜಯಪುರ-೩೯, ಕಲಬುರ್ಗಿ-೩೮, ಬಿದರ-೩೨, ತುಮಕೂರು-೨೬, ಶಿವಮೊಗ್ಗ-೨೩, ಮಂಡ್ಯ-೧೯, ಉತ್ತರ ಕನ್ನಡ-೧೭, ಹಾಸನ-೧೫, ಉಡುಪಿ-೧೪, ಕೋಲಾರ-೧೨, ರಾಯ್ಚುರು-೧೧, ಬಾಗಲಕೋಟೆ-೧೦. ದಾವಣಗೆರೆ-೮, ಯಾದಗಿರಿ-೭, ಬೆಳಗಾವಿ-೭, ಕೊಡಗು-೬, ಬೆಂಗಳುರು ರೂರಲ್-೫, ಹಾವೇರಿ-೪, ಕೊಪ್ಪಳ-೪, ಚಿತ್ರದುರ್ಗಾ-೩, ಗದಗ-೨, ಚಿಕ್ಕಬಳ್ಳಾಪುರ,ಚಿಕ್ಕಮಂಗಳೂರು ತಲಾ ೧ ಜನರಲ್ಲಿ ಸೋಂಕು ದೃಢವಾಗಿದೆ.

ಇಂದು ರಾಜ್ಯಾದ್ಯಂತ ೨೭೧ ಕೋವಿಡ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.

error: