May 9, 2024

Bhavana Tv

Its Your Channel

ಎಂಜಿನಿಯರಿOಗ್, ಪದವಿ, ಡಿಪ್ಲೊಮಾ: ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ; ಜುಲೈ ೩೦, ೩೧ಕ್ಕೆ ಸಿಇಟಿ ಪರೀಕ್ಷೆ

ಬೆಂಗಳೂರು: ಕೋವಿಡ್- ೧೯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಕೊಂಡಿರುವ ರಾಜ್ಯ ಸರಕಾರವು, ೨೦೧೯-೨೦ನೇ ಸಾಲಿನಲ್ಲಿ ಎಂಜಿನಿಯರಿoಗ್ ಸೇರಿ ಇತರ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆ ಇಲ್ಲದೆಯೇ ಮುಂದಿನ ಹಂತಕ್ಕೆ ಉತ್ತೀರ್ಣಗೊಳಿಸುವುದಾಗಿ ಪ್ರಕಟಿಸಿದೆ. ರಾಜ್ಯದ ಡಿಪ್ಲೊಮಾ, ಇಂಜಿನಿಯರ್ ಹಾಗೂ ಪದವಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುವುದು. ಉಳಿದ ತರಗತಿಗಳಲ್ಲಿರುವವರಿಗೆ ಪರೀಕ್ಷೆ ರದ್ದು. ಫೈನಲ್ ಪರೀಕ್ಷೆ ಜೊತೆಗೆ ಬ್ಯಾಕ್ ಲಾಗ್ ಪರೀಕ್ಷೆಗೂ ಅವಕಾಶ ನೀಡಲಾಗುತ್ತದೆ. ಇದೇ ವರ್ಷದ ಸೆಪ್ಟೆಂಬರ್​ನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿವೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ತಿಳಿಸಿದ್ದಾರೆ. ಖಾಸಗಿ ಹಾಗೂ ಸರ್ಕಾರಿ ವಿವಿಗಳಿಗೆ ಪರೀಕ್ಷೆ ಮಾಡಲು ಅವಕಾಶ ನೀಡಲಾಗಿದೆ. ಈ ಸೆಮಿಸ್ಟರ್‌ನಲ್ಲಿ ಪರೀಕ್ಷೆ ಬರೆಯಲು ಆಗುವುದಿಲ್ಲ ಎನ್ನುವ ವಿದ್ಯಾರ್ಥಿಗಳಿಗೆ ಮುಂದೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಇಂಜಿನಿಯರಿoಗ್, ಡಿಪ್ಲೊಮಾ, ಪದವಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಅವರ ಸುರಕ್ಷತೆ ದೃಷ್ಟಿಯಲ್ಲಿಟ್ಟುಕೊಂಡು ಪರೀಕ್ಷೆ ನಡೆಸದಿರಲು ನಿರ್ಧರಿಸಲಾಗಿದೆ. ಆ ವಿದ್ಯಾರ್ಥಿಗಳ ಇಂಟರ್ನಲ್ ಅಸ್ಸೆಸ್ಮೆಂಟ್ ಆಧರಿಸಿ ಮತ್ತು ಹಿಂದಿನ ಅವರ ಪರೀಕ್ಷೆ ಫಲಿತಾಂಶ ನೋಡಿ ಪ್ರಮೋಟ್ ಮಾಡಲಾಗುತ್ತದೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಮಾಹಿತಿ ನೀಡಿದ್ದಾರೆ.

ಸಿಇಟಿ ಪರೀಕ್ಷೆ ದಿನಾಂಕದಲ್ಲಿ ಬದಲಾವಣೆ ಇಲ್ಲ:ಇದೇ ತಿಂಗಳ ೩೦ ಮತ್ತು ೩೧ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಆ ದಿನಾಂಕದಲ್ಲಿ ಯಾವುದೇ ಬದಲಾವಣೆಯಿಲ್ಲ. ಪಿಜಿ ಸಿಇಟಿ ಪರೀಕ್ಷೆ ಆಗಸ್ಟ್೮, ೯ರಂದು ನಡೆಯಲಿದೆ. ಡಿಪ್ಲೊಮಾ ಸಿಇಟಿ ಆಗಸ್ಟ್ ೯ಕ್ಕೆ ನಡೆಯಲಿದೆ. ಸಿಇಟಿ ಪರೀಕ್ಷೆಗೂ ಸಹಾಯವಾಣಿ ತೆರೆದಿದ್ದೇವೆ. ವಿದ್ಯಾರ್ಥಿಗಳು ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದು ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಸೆಪ್ಟೆಂಬರ್ ತಿಂಗಳ ಮೊದಲ ದಿನದಿಂದ ಆಕಾಡೆಮಿಕ್ ಕ್ಲಾಸ್ ಆರಂಭಿಸಲು ತೀರ್ಮಾನ ಮಾಡಲಾಗಿದೆ. ಸೆಪ್ಟೆಂಬರ್ನಲ್ಲಿ ಆನ್ಲೈನ್ ಕ್ಲಾಸ್‌ಗಳು ಹಾಗೂ ನವೆಂಬರ್​ನಿಂದ ರೆಗ್ಯುಲರ್ ಕ್ಲಾಸ್‌ಗಳು ಆರಂಭವಾಗಲಿವೆ. ಫೈನಲ್ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.ಉನ್ನತ ಶಿಕ್ಷಣದಲ್ಲಿ, ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲು ಸಾಕಷ್ಟು ಅಡತಡೆಗಳು ಬಂದಿದ್ವು. ಅದರಲ್ಲಿ ಕೊರೋನಾ ಕೂಡ ಒಂದು. ಆದರೂ ೫೦ ಸಾವಿರ ಆನ್ಲೈನ್ ಕ್ಲಾಸ್ಗಳನ್ನು ಮಾಡಿದ್ದೇವೆ. ವಿದ್ಯಾರ್ಥಿಗಳಿಗೆ ವಿಡಿಯೋ ಕಂಟೆoಟ್ ಕೊಟ್ಟಿದ್ದೇವೆ. ವಿದ್ಯಾಸಂಸ್ಥೆಗಳು ಶಕ್ತಿಮೀರಿ ಕೆಲಸ ಮಾಡಿವೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: