March 28, 2025

Bhavana Tv

Its Your Channel

ಕರೋನಾ ಎಫೆಕ್ಟ: ಸಿಗಂಧೂರು ಚೌಡೇಶ್ವರಿ ಸನ್ನಿದಿಗೆ ಭಕ್ತರಿಗಿಲ್ಲ ದರ್ಶನಭಾಗ್ಯ.

ಸಾಗರ : ಲಾಕ್ ಡೌನ್ ರಿಲೀಫ್ ಹಿನ್ನಲೆಯಲ್ಲಿ ದೇವಾಲಯಗಳ ಬಾಗಿಲು ತೆರೆಯಲು ಸರಕಾರ ಅವಕಾಶ ನೀಡಿದ್ದರೂ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಸಿಗಂದೂರು ಚೌಡೇಶ್ವರಿ ದೇವಾಲಯ ಸೋಮವಾರ ತೆರೆದಿಲ್ಲ.ಹೀಗಾಗಿ ದೇವಿ ದರ್ಶನಕ್ಕೆ ಆಗಮಿಸಿದ್ದ ಸುಮಾರು ೫೦ ಕ್ಕೂ ಹೆಚ್ಚು ಭಕ್ತರು ವಾಪಸ್ ತೆರಳಿದ್ದಾರೆ. ಜೂನ್ ೧೫ ರಿಂದ ದೇವಾಲಯ ತೆರೆಯುವ ಬಗ್ಗೆ ದೇವಸ್ಥಾನ ಸಮಿತಿ ಸದ್ಯದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ. ಸಿಗಂದೂರು ಚೌಡೇಶ್ವರಿ ದೇವಿಗೆ ಕರಾವಳಿ ಭಾಗ ಹಾಗೂ ಬೆಂಗಳೂರು ಸೇರಿ ಹೊರ ರಾಜ್ಯಗಳಲ್ಲಿಯೂ ಲಕ್ಷಾಂತರ ಮಂದಿ ಭಕ್ತರಿದ್ದು ಪ್ರತಿದಿನ ಸಾವಿರಾರು ಜನ ಇಲ್ಲಿಗೆ ಬಂದು ತಾಯಿಯ ದರ್ಶನ ಪಡೆಯುತ್ತಿದ್ದರು.ಆದರೆ ಕೊರೋನಾ ಸೋಂಕು ಎಲ್ಲೆಡೆ ಹೆಚ್ಚಾಗಿ ಕಾಣಿಸುತ್ತಿರುವುದರಿಂದ ಇನ್ನೂ ಸ್ವಲ್ಪ ದಿನಗಳ ಕಾಲ ಭಕ್ತರಿಗೆ ದೇವಿ ದರ್ಶನ ನಿರ್ಬಂಧಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.ಈ ಮಧ್ಯೆ ಈ ಕ್ಷೇತ್ರಕ್ಕೆ ತೆರಳಲು ಶರಾವತಿ ಹಿನೀರಲ್ಲಿ ಲಾಂಚ್ ಮೂಲಕ ದಾಟಬೇಕಾಗಿದ್ದು ಸಾಮಾಜಿಕ ಅಂತರ ಕಾಪಾಡುವುದು ಕಷ್ಟವೆಂಬ ಕಾರಣಕ್ಕೆ ಸ್ಥಳೀಯರನ್ನು ಸೋಂಕಿನ ಭಯ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ದರ್ಶನ ವ್ಯವಸ್ಥೆಯನ್ನು ಇನ್ನಷ್ಟು ಕಾಲ ಪ್ರತಿಬಂಧಿಸಬೇಕೆAಬ ಒತ್ತಾಯ ಕೂಡ ದೇವಾಲಯ ಸಮಿತಿಯ ಗಮನಕ್ಕೆ ಬಂದಿದೆ.ಪ್ರತಿದಿನ ಮುಂಜಾನೆ ಹಾಗೂ ಸಂಜೆ ದೇವಸ್ಥಾನ ಆಡಳಿತ ಮಂಡಳಿ ದೇವಿಗೆ ಪೂಜೆ , ನೈವೇದ್ಯ ನೆರವೇರಿಸುತ್ತಿದೆ.ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಆದರೆ ಭಕ್ತರಿಗೆ ಸದ್ಯಕ್ಕೆ ದೇವಿಯ ದರ್ಶನ ಇರುವರಿಲ್ಲ. ಮುಂದಿನ ದಿನಗಳಲ್ಲಿ ದೇವಸ್ಥಾನ ತೆರೆಯುವ ದಿನಾಂಕವನ್ನು ತಿಳಿಸಲಾಗುವುದು.ಭಕ್ತರು ಸಹಕರಿಸಬೇಕೆಂದು ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ರವಿಕುಮಾರ್ ಮನವಿ ಮಾಡಿದ್ದಾರೆ.

error: