May 18, 2024

Bhavana Tv

Its Your Channel

ಪ್ರಜಾಪ್ರಭುತ್ವದ ನಾಲ್ಕನೇ ಅಂಗವನ್ನು ರಕ್ಷಿಸುವ ಕಾರ್ಯ ನಡೆಸಬೇಕು ಎಂದು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಗ್ರಹಿಸಿದೆ.

ಕಾರ್ಕಳ: ಅಹಿತಕರ ಘಟನೆಗಳು ನಡೆದಾಗ ಮಾಧ್ಯಮದವರನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿರುವುದನ್ನು ಖಂಡನೀಯವಾಗಿದೆ. ಕಾನೂನು ಜಾರಿಗೊಳಿಸುವ ಮೂಲಕ ಇಂತಹ ಘಟನೆ ಮರುಕಳಿಸಿದಂತೆ ಸರಕಾರವು ಕಠಿಣ ಕ್ರಮಕೈಗೊಳ್ಳಬೇಕು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವನ್ನು ರಕ್ಷಿಸುವ ಕಾರ್ಯ ನಡೆಸಬೇಕು ಎಂದು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಗ್ರಹಿಸಿದೆ.
ಪ್ರವಾಸಿ ಮಂದಿರದಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ಸಭೆಯಲ್ಲಿ ಮೇಲಿನ ಮಹತ್ವದ ನಿರ್ಣಯವನ್ನು ಸರ್ವಾನುಮತದಿಂದ ಕೈಗೊಳ್ಳಲಾಯಿತು.
ಸನ್ಮಾನ
೨೦೨೦ ಸಾಲಿನ ಸಿಜಿಕೆ ಪ್ರಶಸ್ತಿ ಪುರಸ್ಕೃತ ಚಂದ್ರನಾಥ ಬಜಗೋಳಿ ಮತ್ತು ಶ್ರೀನಿವಾಸ ಭಟ್ ಪ್ರಶಸ್ತಿ ಪುರಸ್ಕೃತ ಶರತ್ ಶೆಟ್ಟಿ ಕಿನ್ನಿಗೋಳಿ ಅವರನ್ನು ಇದೇ ಸಂದರ್ಭದಲ್ಲಿ ಕಾರ್ಕಳ ತಾಲುಕು ಕಾರ್ಯನಿರತ ಪತ್ರಕರ್ತರ ಸಂಘವು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿ, ಕಲೆ ಮತ್ತು ಪತ್ರಿಕೆ ಕಲಾ ಮಾಧ್ಯಮ ಒಂದೇ ಮುಖಗಳು. ಪತ್ರಕರ್ತರಲ್ಲಿಯೂ ಕಲೆಯ ಕಾಳಜಿಯಿದ್ದರೆ ಸಂವಹನ ಹೆಚ್ಚು ಅನುಕೂಲವಾಗಲಿದೆ.
ಶರತ್ ಶೆಟ್ಟಿ ಕಿನನಿಗೋಳಿ ಮಾತನಾಡಿ, ಸಂಘದ ಕಾರ್ಯಚಟುವಟಿಕೆ ಮೆಚ್ಚುಗೆ ವ್ಯಕ್ತಪಡಿಸಿ, ಪತ್ರಕರ್ತರಾಗಿದ್ದುಕೊಂಡು ನಾಟಕ ಕ್ಷೇತ್ರದಲ್ಲಿ ಸಾಧನೆ ಮಾಡಲಾದ ಕ್ಷಣಗಳನ್ನು ಸ್ಮರಿಸಿಕೊಂಡರು.
ಸಂಘದ ಅಧ್ಯಕ್ಷ ಆರ್.ಬಿ.ಜಗದೀಶ್ ಅಧ್ಯಕ್ಷತೆವಹಿಸಿದರು. ಕಾರ್ಯದರ್ಶಿ ಗಣೇಶ್ ನಾಯಕ್ ಸಾಣೂರು ಜಿಲ್ಲಾ ಸಂಘದ ಪ್ರತಿನಿಧಿಗಳಾದ ಮಹಮ್ಮದ್ ಶರೀಫ್, ಕೆ.ಎಂ.ಖಾಲಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಚಂದ್ರನಾಥ ಬಜಗೋಳಿ ಹಾಘೂ ಶರತ್ ಕಿನ್ನಿಗೋಳಿ ಇವರಿಗೆ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸನ್ಮಾನಿಸಿ ಗೌರವಿಸಿದೆ. ಸಂಘದ ಅಧ್ಯಕ್ಷ ಆರ್.ಬಿ.ಜಗದೀಶ್, ಕಾರ್ಯದರ್ಶಿ ಗಣೇಶ್ ನಾಯಕ್ ಸಾಣೂರು ಜಿಲ್ಲಾ ಸಂಘದ ಪ್ರತಿನಿಧಿಗಳಾದ ಮಹಮ್ಮದ್ ಶರೀಫ್, ಕೆ.ಎಂ.ಖಾಲಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: