ಬೈಂದೂರು: ಕುಂದಾಪುರದಿAದ ಭಟ್ಕಳದತ್ತ ಅಕ್ರಮವಾಗಿ ಸಾಗಿಸುತ್ತಿದ್ದ ಗೋ ಮಾಂಸ ಸಾಗಾಟ ವಾಹನವನ್ನ ಖಚಿತ ಮಾಹಿತಿಯನ್ನು ಪಡೆದುಕೊಂಡು ತಡೆದ ಬೈಂದೂರಿನ ಹಿಂದೂಪರ ಸಂಘಟನೆ ಕಾರ್ಯಕರ್ತರು ಬೈಂದೂರಿನಲ್ಲಿ ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ರಾತ್ರಿ ನಡೆದಿದೆ.
ಆ ಕಾರಿನಲ್ಲಿ 3 ಮುಸ್ಲಿಮ್ ಮಹಿಳೆಯರು 2 ಪುಟ್ಟ ಮಕ್ಕಳು ಬಳಸಿಕೊಂಡು ಇಂತಹ ಕುಕ್ರತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಬೈoದೂರಿನ ಪಿಎಸ್ ಐ ಪವನ್ ಕುಮಾರ್ ನೇತೃತ್ವದಲ್ಲಿ ಚುರುಕಿನ ಕಾರ್ಯಾಚರಣೆಯಿಂದ ಮೂವರು ಮಹಿಳೆಯರು ಸೇರಿದಂತೆ ನಾಲ್ಕು ಮಂದಿ ಆರೋಪಿಗಳನ್ನು ವಶಪಡಿಸಿಕೊಂಡು ಬೈಂದೂರು ಠಾಣೆಗೆ ಕರೆತರಲಾಯಿತು. ಬೈಂದೂರು ಆರಕ್ಷಕ ಸಿಬ್ಬಂದಿ ವರ್ಗದವರು ಹಿಂದೂಪರ ಸಂಘಟನೆಗಳು ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿದರು.
ಬೈಂದೂರು -ಕುಂದಾಪುರ ಕಡೆಯಿಂದ ಭಟ್ಕಳಕ್ಕೆ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಂದೂಪರ ಸಂಘಟನೆಗಳು ನೀಡಿದ ಮಾಹಿತಿ ಆಧರಿಸಿ ಬೆನ್ನತ್ತಿದ ಬೈಂದೂರು ಪೊಲೀಸರು ಒತ್ತಿನಣೆ ಬಳಿ ತಡೆಹಿಡಿದು, ಎರಡು ಕ್ವಿಂಟಾಲ್ ಗೂ ಅಧಿಕ ಗೋಮಾಂಸ ವಶಕ್ಕೆ ಪಡೆದಿದ್ದಾರೆ ಕಾರು ಚಾಲಕ ಕರ್ಕುಂಜೆಯ ಮೊಹಮ್ಮದ್ ಅಲ್ತಾಫ್ (37 )ಹಾಗೂ ಕಾರಲ್ಲಿ ಇದ್ದ ಮೂವರು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ನೊಂದಣಿ ಹೊಂದಿರುವ ಚವರ್ಲೆಟ್ ಬಾಡಿಗೆ ಕಾರಿನಲ್ಲಿ ಗೋಮಾಂಸ ಸಾಗಾಟ ಮಾಡಲಾಗಿದ್ದು ಇದೇ ಕಾರಿನಲ್ಲಿ ಮುಸ್ಲಿಂ ಮಹಿಳೆಯರು ಕೂಡ ಪ್ರಯಾಣಿಸುತ್ತಿದ್ದರು ಕಾರಿನ ಡಿಕ್ಕಿಯಲ್ಲಿ ಎರಡು ಕ್ವಿಂಟಾಲಿಗೂ ಅಧಿಕ ಪ್ರಮಾಣದ ಗೋಮಾಂಸ ಸಾಗಾಟ ಮಾಡಲಾಗುತ್ತಿತ್ತು ಯಾರಿಗೂ ಸಂಶಯ ಬರಬಾರದು ಎಂಬ ಕಾರಣಕ್ಕೆ ಮೂರು ಮುಸ್ಲಿಂ ಮಹಿಳೆಯರನ್ನು ಇದೇ ವಾಹನದಲ್ಲಿ ಕರೆದೊಯ್ಯಲಾಯಿತ್ತು
ಎನ್ನಲಾಗುತ್ತಿತ್ತು ಅವರನ್ನು ವಶಕ್ಕೆ ಪಡೆಯಲಾಯಿತು ಸದ್ಯ ಅವರನ್ನು ಮಹಿಳಾ ನಿಲಯಕ್ಕೆ ಕಳುಹಿಸಲಾಗಿದ್ದ ಇಂದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಬೈಂದೂರಿನ ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರ ನಿರ್ದೇಶನದಂತೆ,ಪೊಲೀಸ್ ಪಿಎಸ್ ಐ ಪವನ್ ನಾಯಕ್ ಕಾರ್ಯಾಚರಣೆ ನಡೆಸಿದ್ದಾರೆ ಪ್ರೊಬೆಷನರಿ ಪಿಎಸ್ ಐ ಮಮತಾ ನಾಯಕ್ ಪೊಲೀಸ್ ಕಾನ್ಸ್ಟೇಬಲ್ ಅಶೋಕ್ ರಾಥೋಡ್, ಶ್ರೀನಿವಾಸ್, ಸುಜಿತ್ ಕುಮಾರ್, ಸುಧೀರ್ ಪೂಜಾರಿ, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಪೊಲೀಸರು ಕಾರನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
More Stories
ಮಕ್ಕಳಿಗಾಗಿ ಸಿದ್ಧ ಸಮಾಧಿ ಯೋಗ ಸಂಸ್ಕಾರ ಶಿಬಿರ ಮತ್ತು ಗಾಂಧಾರಿ ವಿದ್ಯೆ.
ಸೈಬರ್ ಜಾಗ್ರತಿ ಕಾರ್ಯಾಗಾರ
ಯು. ರಾಘವೇಂದ್ರ ಹೊಳ್ಳ ಅವರಿಗೆ ಬೀಳ್ಕೋಡಿಗೆ ಸಮಾರಂಭ