May 3, 2024

Bhavana Tv

Its Your Channel

ರಾಜ್ಯದಲ್ಲಿ ನಡೆಯುತ್ತಿರುವ ಮಹಿಳಾ ದೌರ್ಜನ್ಯ ವಿರುದ್ಧ ಹೆಬ್ರಿಯಲ್ಲಿ ಬ್ಲಾಕ್ ಕಾಂಗ್ರೇಸ್ ಪ್ರತಿಭಟನೆ.

ವರದಿ: ಅರುಣ ಭಟ್ಟ ಕಾರ್ಕಳ

ಕಾರ್ಕಳ: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆಸಿದ ಅತ್ಯಾಚಾರ ದುಷ್ಕೃತ್ಯ ಹೇಯ ಅಮಾನವೀಯ ಕೃತ್ಯವಾಗಿದ್ದು ಇದನ್ನು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ. ಈ ಘಟನೆ ನಡೆದು ನಲವತ್ತೆಂಟು ಗಂಟೆಗಳ ಬಳಿಕವೂ ಪೋಲೀಸ್ ಇಲಾಖೆ ಎಫ್ ಐಆರ್ ದಾಖಲಿಸದೆ ದೂರು ನೀಡಿದರೂ ಕರ್ತವ್ಯಲೋಪ ಎಸಗಿದೆ ಆದ್ದರಿಂದ ವಿದ್ಯಾರ್ಥಿನಿಯರು .ಮಹಿಳೆಯರು. ಮಕ್ಕಳು ಮತ್ತು ಜನಸಾಮಾನ್ಯರಿಗೆ ಈ ಸರಕಾರದಿಂದ ನ್ಯಾಯ ದೊರಕುತ್ತಿಲ್ಲ ಕಾನೂನು ಸುವ್ಯವಸ್ಥೆ ಹದಗೆಟ್ಟು ಸರಕಾರದ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಮೈಸೂರಲ್ಲಿ ನಡೆದ ಘಟನೆ ಮರುಕಳಿಸದಂತೆ ರಾಜ್ಯದ ಘನವೆತ್ತ ರಾಜ್ಯಪಾಲರು ತಾವು ಕಾನೂನು ಕ್ರಮ ಕೈಗೊಳ್ಳಬೇಕೆಂದು ಮತ್ತು ಈ ಸರಕಾರವನ್ನು ವಜಾಗೊಳಿಸಬೇಕು ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಶನಿವಾರ ಹೆಬ್ರಿಯ ಬ್ಲಾಕ್ ಕಾಂಗ್ರೆಸ್ ಕಚೇರಿ ಎದುರುಗಡೆ ರಾಜ್ಯ ಸರಕಾರದ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರತಿಭಟನೆ ನಡೆಸಿ ಮಾತನಾಡಿದರು .
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಮಹಿಳೆಯರ ಹಾಗೂ ವಿದ್ಯಾರ್ಥಿಗಳ ಮೇಲೆ ನಿರಂತರವಾಗಿ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿದೆ.ಮೈಸೂರಿನ ಪ್ರಕರಣದ ಬಗ್ಗೆ ಕೇಂದ್ರ ಸಚಿವೆ ಉಡುಪಿ ಜಿಲ್ಲಾ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡುತ್ತಿಲ್ಲ .ರಾಜ್ಯದ ಗೃಹ ಸಚಿವರು ಬಾಯಿಗೆ ಬಂದ ಹಾಗೆ ಹಗುರವಾಗಿ ಮಾತನಾಡುತ್ತಾರೆ.ಇನ್ನಾದರೂ ಮೈಸೂರಿನಲ್ಲಿ ನಡೆದ ಪ್ರಕರಣದ ಬಗ್ಗೆ ಗಂಭೀರವಾಗಿ ತನಿಖೆ ನಡೆಸಿ . ಗೃಹ ಸಚಿವರು ತಮ್ಮ ಘನತೆಯನ್ನು ಕಾಪಾಡಿಕೊಳ್ಳಲಿ ಎಂದು ಹೇಳಿದರು .
ಹೆಬ್ರಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್ .ಪಕ್ಷದ ಮಹಿಳಾ ಮುಖಂಡರು .ಹೆಬ್ರಿ ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಶೆಟ್ಟಿ. ಹೆಬ್ರಿ ಸೇರಿದಂತೆ ವಿವಿಧ ಗ್ರಾಮ ಪಂಚಾಯತ್ ಸದಸ್ಯರುಗಳು .ಪಕ್ಷದ ಪ್ರಮುಖರು ಹಾಗೂ ಎನ್.ಎಸ್.ಯು.ಐ ವಿದ್ಯಾರ್ಥಿ ಘಟಕದ ಸದಸ್ಯರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು .ಇದೇ ಸಂದರ್ಭದಲ್ಲಿ ರಾಜ್ಯಪಾಲರಿಗೆ ಹೆಬ್ರಿ ಠಾಣಾಧಿಕಾರಿ ಮಹೇಶ್ ಟಿಎಮ್ ಇವರ ಮೂಲಕ ಮನವಿಯನ್ನು ನೀಡಲಾಯಿತು .

error: