May 18, 2024

Bhavana Tv

Its Your Channel

ಜಾಮಿಯಾ ಮದರಸದ ಉದ್ಘಾಟಿಸಿದ ಮಿಯಾರು ಜಾಮಿಯಾ ಮಸೀದಿಯ ಧರ್ಮಗುರುಗಳಾದ ಮೌಲಾನ ರಜಿಕ್

ಕಾರ್ಕಳ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಆದ ಹಣದಿಂದ ನವೀಕೃತ ಜಾಮಿಯಾ ಮದರಸದ ಉದ್ಘಾಟನೆಯನ್ನು ಮಿಯಾರು ಜಾಮಿಯಾ ಮಸೀದಿಯ ಧರ್ಮಗುರುಗಳಾದ ಮೌಲಾನ ರಜಿಕ್ ಅವರು ಕುರಾನ್ ಆಯತಪಠಿಸಿ ಕಟ್ಟಡದ ಉದ್ಘಾಟನೆ ನೆರವೇರಿಸಿದರು.

ನಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಭಕ್ತ ಮಾರ್ಕಂಡೇಯ ಗಣಕಯಂತ್ರವನ್ನು ಉದ್ಘಾಟನೆ ಮಾಡಿದರು. ನಂತರ ಜಿಲ್ಲಾ ವಕ್ಫ್ ಅಧಿಕಾರಿ ನಾಜಿಯ ಗ್ರಂಥಾಲಯವನ್ನು ಉದ್ಘಾಟನೆ ಮಾಡಿದರು. ಉದ್ಘಾಟನಾ ಭಾಷಣ ಮಾಡಿದ ಮೌಲಾನ ರಜೀಕ್ ಮಹಮದ್ ನಾವು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಒಳ್ಳೆಯ ವಿದ್ಯಾಭ್ಯಾಸವನ್ನು ಗಳಿಸಬೇಕಾಗುತ್ತದೆ. ಉತ್ತಮ ವಿದ್ಯೆಯನ್ನು ಬಾಲ್ಯದಿಂದಲೇ ಇಂಥ ಮದರಸ ಗಳಿಂದ ಕಲಿಯಬೇಕಾಗುತ್ತದೆ. ನಮ್ಮ ಕೊನೆಯ ಪ್ರವಾದಿಯವರು ಹೇಳುತ್ತಾರೆ ಕಲ್ಲಿನಿಂದ ಕೆತ್ತಿದ ಅಕ್ಷರ ಅಳಿಸಲು ಸಾಧ್ಯವಿಲ್ಲ. ಅದೇ ರೀತಿ ಬಾಲ್ಯದಲ್ಲಿ ಕಲಿತ ವಿದ್ಯಾಭ್ಯಾಸ ಕೂಡ ಕೊನೆ ಉಸಿರು ತನಕ ಇರುವುದೆಂದು ಹೇಳಿದ್ದಾರೆ ಎಂದು ಹೇಳಿದರು.

ನಂತರ ಮಾತನಾಡಿದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಭಕ್ತ ಮಾರ್ಕಂಡೇಯ ಮುಸ್ಲಿಂ ಧರ್ಮದ ಮುಖ್ಯ ತಿರುಳು ಶಾಂತಿ ಮತ್ತು ಪ್ರೀತಿ ಆಗಿರುತ್ತದೆ. ಅದಲ್ಲದೆ ಉಡುಪಿ ಜಿಲ್ಲೆಯಲ್ಲಿ ನೂರಾರು ಇಂಥ ಮದರಸಗಳು ಕಾರ್ಯನಿರ್ವಹಿಸುತ್ತದೆ. ಆದರೆ ಬೆರಳೆಣಿಕೆಯಷ್ಟು ಜನರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸಹಾಯಧನ ಪಡೆದುಕೊಳ್ಳುತ್ತಾರೆ ಸಾಧ್ಯವಾದಷ್ಟು ಮದ್ರಸಗಳ ಮುಖ್ಯಸ್ಥರು ಸಹಾಯಧನವನ್ನು ಪಡೆದುಕೊಂಡು ನಿಮ್ಮ ಮದ್ರಸಗಳಿಗೆ ಆಧುನಿಕ ಪರ್ಶ್ ನೀಡಿ ಮಕ್ಕಳಿಗೆ ಉತ್ತಮ ವಿದ್ಯಾ ಭ್ಯಾಸ ಕೊಡಿ ಎಂದು ಹೇಳಿದರು. ನಂತರ ಮಾತನಾಡಿದ ಜಿಲ್ಲಾ ವಕ್ಫ್ ಅಧಿಕಾರಿ ನಜಿಯ ಅವರು ಸಣ್ಣ ಪ್ರಾಯದಲ್ಲಿ ಮಕ್ಕಳ ಬುದ್ದಿ ವಿಕಸನ ಆಗಬೇಕು. ಬುದ್ಧಿ
ವಿಕಸನಗೊಳ್ಳ ಬೇಕಾದರೆ ನಾವು ಕೇವಲ ಧಾರ್ಮಿಕ ಶಿಕ್ಷಣ ಬೋಧಿಸದೆ ಲೌಕಿಕ ಶಿಕ್ಷಣವನ್ನು ಕಲಿಸಬೇಕಾಗುತ್ತದೆ ಹೇಳಿದರು. ಈ ಯುಗ ಕಂಪ್ಯೂಟರ್ ಯುಗ ಆಗಿರುತ್ತದೆ ಆದ್ದರಿಂದ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ನೀಡಬೇಕಾಗುತ್ತದೆ. ನಮ್ಮ ಹೆಣ್ಣು ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಿ ಅವರಿಗೆ ವಿದ್ಯಾವಂತರನ್ನಾಗಿ ಮಾಡಿ ಇದು ನಮ್ಮ ಕೊನೆಯ ಪ್ರವಾದಿಯವರ ಆದೇಶವು ಕೂಡ ಆಗಿದೆ ಎಂದು ಹೇಳಿದರು. ಸಂದರ್ಭದಲ್ಲಿ ೪೦ವರ್ಷ ಸಹಾಯಕ ಧರ್ಮ ಗುರುಗಳಾಗಿ ಸೇವೆ ಸಲ್ಲಿಸಿದ ಮೋಹಜನ್ ರವರಿಗೆ ಸನ್ಮಾನಿಸಲಾಯಿತು. ನಂತರ ಸಭಾಧ್ಯಕ್ಷರಾದಅಸ್ಫಾಖ್ ಅಹಮದ್ ರವರು ಮಾತನಾಡಿ ನಮ್ಮ ಮದ್ರಸ ಗಳನ್ನು ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಆಧುನಿಕರಣ ಮಾಡಲಾಗಿದೆ. ಸದು ಪಯೋಗವನ್ನು ಇಲ್ಲಿಯ ವಿದ್ಯಾರ್ಥಿಗಳು ಪಡೆಯಬೇಕು.ನಮ್ಮ ಇಸ್ಲಾಂಕೂಡ ವಿದ್ಯಾಭ್ಯಾಸಕ್ಕೆ ತುಂಬಾ ಮಹತ್ವ ನೀಡುತ್ತದೆ. ಎಂದು ಹೇಳಿದರು.
ಮಿಯರುಜಾಮಿಯಾ ಮಸೀದಿಯ ಅಧ್ಯಕ್ಷರಾದ ಶಬ್ಬೀರ್ ಪ್ರಾಸ್ತಾವಿಕ ಭಾಷಣ ಮಾಡಿ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿಸಿಲ್ವಾ, ತಾರಾನಾಥ್ ಕೋಟ್ಯಾನ್, ರಾಜೇಶ್ ನೆಲ್ಸನ್ ಡಿಸೋಜಾ, ಸುಧಾಕರ್ ಪೂಜಾರಿ, ಕೆ.ಎಮ್ ಖಲೀಲ್,ಉಪ ಅಧ್ಯಕ್ಷರಾದ ಇಂತಿಯಾಜ್ ಸಾಹೇಬ್, ಕಾರ್ಯದರ್ಶಿ ಮೊಹಮ್ಮದ್ ಸಾಜಿದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: