April 27, 2024

Bhavana Tv

Its Your Channel

ಪ್ರತಿಭೆಗಳಿಗೆ ಸೂಕ್ತ ಅವಕಾಶ, ಹಾಗೂ ಪ್ರೋತ್ಸಾಹ ಸಿಕ್ಕಾಗ ಮಾತ್ರ ಜಗತ್ತಿನಲ್ಲಿ ಅನಾವರಣಗೊಳ್ಳುತ್ತದೆ: ಸರ್ವಜ್ಞ ತಂತ್ರಿ

ಕಾರ್ಕಳ: ಪ್ರತಿ ವ್ಯಕ್ತಿಯಲ್ಲಿಯೂ ಕೂಡಾ ಹುಟ್ಟುತ್ತಲೇ ಒಂದು ಪ್ರತಿಭೆ ಇರುತ್ತದೆ.ಅದಕ್ಕೆ ಸೂಕ್ತ ಅವಕಾಶ, ಹಾಗೂ ಪ್ರೋತ್ಸಾಹ ಸಿಕ್ಕಾಗ ಮಾತ್ರ ಜಗತ್ತಿನಲ್ಲಿ ಅನಾವರಣಗೊಳ್ಳುತ್ತದೆ. ಅದು ಜೀವನಕ್ಕೆ ಒಂದು ಸುಗಮ ದಾರಿಯಾಗುತ್ತದೆ ಎಂದು ಜೆ ಸಿ ಐ ತರಬೇತುದಾರ ,ಖ್ಯಾತ ನ್ಯಾಯವಾದಿ ಸರ್ವಜ್ಞ ತಂತ್ರಿ ತಿಳಿಸಿದರು.

ಇವರು ಶ್ರೀನಿವಾಸ ಸೇವಾ ಟ್ರಸ್ಟ್ (ರಿ) ಹಾಗೂ ಸುಮೇಧ ಪ್ಯಾಶನ್ ಇನ್ಸ್ಟಿಟ್ಯೂಟ್ ಆಂಡ್ ಪ್ಯಾಬ್ರಿಕ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ೩ ದಿನಗಳ ಪ್ಯಾಬ್ರಿಕ್ ಪೈಂಟಿAಗ್ ಕ್ಲೆ ಜುವೆಲ್ಲರಿ ತಯಾರಿಸುವ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ನಮ್ಮಲ್ಲಿ ಪ್ರತಿಭೆ ಇರುತ್ತದೆ ಆದರೆ ಅದು ನಮಗೆ ತಿಳಿದಿರುವುದಿಲ್ಲ. ಇಂತಹ ಶಿಬಿರ ಗಳಲ್ಲಿ ಭಾಗವಹಿಸುವುದರಿಂದ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶವಾಗುತ್ತದೆ. ಇಂದಿನ ದಿನಗಳಲ್ಲಿ ಯುವ ಜನತೆ ಪ್ಯಾಶನ್ ನತ್ತ ಆಕರ್ಷಿತರಾಗುತ್ತಿದ್ದಾರೆ .ಜಗತ್ತಿನಲ್ಲಿ ಪ್ಯಾಶನ್ ಸಂಬAದಿತ ಅವಕಾಶಗಳು ಹೆಚ್ಚಾಗಿದೆ ಆದರೆ ಇದರ ಉಪಯೋಗ ಪಡೆಯುವಲ್ಲಿ ನಾವು ಕಾರ್ಯಪ್ರವರ್ತರಾಗಬೇಕು ಎಂದರು.
ನಿಮ್ಮ ಪ್ರತಿಭೆಗಳ ಬಗ್ಗೆ ಬೇರೆಯವರು ಜಾಹೀರಾತು ನೀಡುವುದಿಲ್ಲ. ನಮ್ಮ ಬಗ್ಗೆ ಪ್ರಚಾರ ಮತ್ತು ಜಾಹೀರಾತು ಗಳನ್ನು ನಾವೇ ಮಾಡಬೇಕಾಗಿದೆ. ಬೇರೆಯವರ ವಸ್ತುಗಳಿಗೆ ನೀಡುವಂತಹ ಪ್ರಚಾರಕ್ಕಿಂತ ನಾವು ತಯಾರಿಸಿದ ವಸ್ತುಗಳಿಗೆ ಹೆಚ್ಚಿನ ಪ್ರಚಾರ ಇಂದಿನ ಆಧುನಿಕ ಮಾಧ್ಯಮದ ಮೂಲಕ ಪ್ರಯೋಜನ ಪಡೆದುಕ್ಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ಮಖ್ಯ ಅತಿಥಿ ಹಾಗೂ ಶಿಬಿರದ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಪುಷ್ಪಾಂಜಲಿ ರಾವ್ ಬಾಗವಹಿಸಿ ಶಿಬಿರದ ಉದ್ದೇಶ ಬಗ್ಗೆ ಮಾಹಿತಿ ನೀಡಿದರು, ಸುಮೇಧ ಪ್ಯಾಶನ್ ಇನ್ಸ್ಟಿಟ್ಯೂಟ್ ಇದರ ಪ್ರಾಂಶುಪಾಲ ಸಾಧನ ಜಿ ಆಶ್ರಿತ್ ರವರು ಪ್ರಸ್ತಾವನೆ ಹಾಗೂ ಮಾಹಿತಿ ನೀಡಿದರು. ಈ ಶಿಬಿರದಲ್ಲಿ ಬ್ಲೌಸ್ ಎಂಬ್ರಾಯ್ಡರಿ ಪೈಂಟಿAಗ್, ಟೈ ಆಂಡ್ ಡ್ರೈ, ಪ್ಯಾಚ್
ವರ್ಕ್,ಕಚ್ ವರ್ಕ್,ಜುವೆಲ್ಲರಿ ಮೇಕಿಂಗ್ ಮುಂತಾದ ವಿಷಯದಲ್ಲಿ ತರಬೇತಿ ನೀಡಲಾಯಿತು.ಶ್ರುತಿ ಸ್ವಾಗತಿಸಿ, ಚಂದನ ಹೇರೂರು ದನ್ಯವಾದವಿತ್ತರು.
ಈ ಸಂದರ್ಭದಲ್ಲಿ ಶಿಬಿರಾರ್ತಿಗಳು ತಯಾರಿಸಿದ ವಸ್ತುಗಳ ಪ್ರದರ್ಶನ ನಡೆಯಿತು.
ಅರುಣ ಭಟ್ ಕಾರ್ಕಳ

error: