May 19, 2024

Bhavana Tv

Its Your Channel

ಕಾರ್ಕಳ ಪೊಲೀಸ್ ಠಾಣೆಯಲ್ಲಿ ಧರ್ಮದ ಮುಖಂಡರೊOದಿಗೆ ಶಾಂತಿ ಸಭೆ

ಕಾರ್ಕಳ, ಸಮಾಜದ ಸಾಮರಸ್ಯ ಕದಡದೆ ಶಾಂತಿಗೆ ಭಂಗ ತರದೆ ವಿವೇಕರಹಿತವಾಗಿ ವರ್ತಿಸದೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಎಲ್ಲ ಧರ್ಮದವರು ಸಾರ್ವಜನಿಕರು ಸಹಕರಿಸಬೇಕು ಮಕ್ಕಳ ಚಟುವಟಿಕೆ ಬಗ್ಗೆ ಗಮನ ಹರಿಸುತ್ತಾ ತಪ್ಪು ದಾರಿ ಹಿಡಿದಾಗ ಅವರು ಸರಿದಾರಿಗೆ ತರುವ ಕೆಲಸವನ್ನು ಎಲ್ಲ ಧರ್ಮ ಸಂಪ್ರದಾಯದ ಹೆತ್ತವರು ಮಾಡಬೇಕು ಎಂದು ನಗರ ಠಾಣಾಧಿಕಾರಿ ತೇಜಸ್ವಿಹೇಳಿದರು.

ಕಾರ್ಕಳದ ಧರ್ಮದ ಮುಖಂಡರೊAದಿಗೆ ಶಾಂತಿ ಸಭೆಯನ್ನು ನಗರ ಠಾಣೆಯಲ್ಲಿ ಶುಕ್ರವಾರ ನಡೆಯಿತು ನಂತರ ಅವರು ಮಾತನಾಡಿ ಸಮಾಜದಲ್ಲಿ ಯಾವುದೇ ಘಟನೆಗಳು ನಡೆದಾಗ ಅದನ್ನು ನಿಯಂತ್ರಿಸುವಲ್ಲಿ ಪೊಲೀಸರಿಗೆ ಸಾರ್ವಜನಿಕರು ನೀಡುವ ಸಹಕಾರ ಮುಖ್ಯವಾಗಿರುತ್ತದೆ ಅದರ ಮೇಲೆ ಪೊಲೀಸರ ಯಶಸ್ಸು ನಿಂತಿದೆ ಸಾರ್ವಜನಿಕರು ಸಹಕರಿಸದೆ ಇದ್ದಲ್ಲಿ ಕಾನೂನು ಸುವ್ಯವಸ್ಥೆಗೆ ಬರುವುದು ಹೇಗೆ ಸಾಧ್ಯ ಎಂದು ಅಧಿಕಾರಿಗಳು ಹೇಳಿದರು

ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಪೂರ್ಣ ಪ್ರಮಾಣದಲ್ಲಿ ಬರುವವರೆಗೂ ಈಗಿನ ಕೋರ್ಟ್ ಆದೇಶ ಪಾಲನೆಗೆ ಎಲ್ಲರೂ ಸಹಕರಿಸಬೇಕು ಸಮಾಜದ ಶಾಂತಿಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತ ಯಾವುದೇ ಘಟನೆಗಳು ಆದಲ್ಲಿ ಅಂತಹ ಸಂದರ್ಭದಲ್ಲಿ ತಕ್ಷಣ ಪೊಲೀಸರ ಗಮನಕ್ಕೆ ತನ್ನಿ ಮಕ್ಕಳು ತಪ್ಪು ಮಾಡದಂತೆ ಮನೆಯವರೇ ಎಚ್ಚರವಹಿಸಿ ಮಕ್ಕಳು ಕಾನೂನು ವಿರೋಧಿ ಕೃತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಲ್ಲಿ ಮುಂದೆ ಮಕ್ಕಳ ಜೊತೆಗೆ ಸಮಸ್ಯೆ ಎದುರಿಸಬೇಕಾಗುತ್ತದೆ.
ನ್ಯಾಯಾಲಯದ ಸೂಚನೆಯ ಮೇರೆಗೆ ಶಾಲೆಗಳು ಆರಂಭವಾಗುತ್ತಿದ್ದು ಯಾವುದೇ ಅಹಿತಕರ ಘಟನೆ ಯಾಗದಂತೆ ಮಕ್ಕಳಿಗೆ ತಿಳುವಳಿಕೆ ನೀಡುವಂತೆ ಮನವಿ ಮಾಡಿದರು

ಕಾರ್ಕಳ ಕೋಮುಸೌಹಾರ್ದ ಊರು ಇದುವರೆಗೆ ಹಿಜಾಬ್ ಸಂಬAಧಿಸಿ ಯಾವುದೇ ಇತರ ಘಟನೆ ಕಾರ್ಕಳದಲ್ಲಿ ನಡೆದಿಲ್ಲ ಇದು ಪ್ರಶಂಸನೀಯ ಮಕ್ಕಳ ವಿಚಾರ ಕ್ಲಿಷ್ಟ ಕರ ಹೀಗಾಗಿ ಪೋಷಕರು ಹೆಚ್ಚುಈ ವಿಚಾರದಲ್ಲಿ ಜವಾಬ್ದಾರಿ ಹೊಂದಿರಬೇಕು ಎಂದು ಪುರಸಭಾ ವಿರೋಧಪಕ್ಷ ನಾಯಕ ಹಾಗೂ ಮುಸ್ಲಿಂ ಜಮಾತಿನ ಅಧ್ಯಕ್ಷ ಅಶ್ಪಕ್ ಅಹಮ್ಮದ್ ಸಭೆಯಲ್ಲಿ ಹೇಳಿದರು.

ನಗರ ಕ್ರೈಂ ಠಾಣಾಧಿಕಾರಿ ದಾಮೋದರ ನಗರ ಠಾಣಾಧಿಕಾರಿ ಪ್ರಸನ್ನ,ಹಾಗೂ ಮುಂತಾದವರು ಭಾಗವಹಿಸಿದರು

error: