May 19, 2024

Bhavana Tv

Its Your Channel

ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕ

ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಂ|ಫಾ| ಅಲ್ಬನ್ ಡಿ’ಸೋಜ ನಿರ್ದೇಶಕರು ಸಂತ ಲಾರೆನ್ಸರ ಬಾಸಿಲಿಕ, ಅತ್ತೂರು, ಕಾರ್ಕಳ. ಸುದ್ದಿಗೋಷ್ಠಿಯಲ್ಲಿ ಈ ಕೆಳಗಿನಂತೆ ವಿವರ ನೀಡಿದರು.

  1. ಸಂತಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ 2022 ಫೆಬ್ರವರಿ 20, 21, 22, 23 ಹಾಗೂ 24 ರಂದು ಜರಗಲಿರುವುದು. ಈ ಬಗ್ಗೆ ಎಲ್ಲಾ ಪೂರ್ವಭಾವಿ ಸಿದ್ದತೆಗಳು ನಡೆದಿದ್ದು, ಬಸಿಲಿಕದ ವತಿಯಿಂದ ವಾರ್ಷಿಕ ಮಹೋತ್ಸವದ ಆಚರಣೆಗೆ ಸನ್ನದ್ದರಾಗಿದ್ದೇವೆ. ಶ್ರೀಕ್ಷೇತ್ರಕ್ಕೆ ಆಗಮಿಸುತ್ತಿರುವ ಯಾತ್ರಿಕರ ಭೇಟಿಯು, ಆದ್ಯಾತ್ಮಿಕ ನೆಮ್ಮದಿ, ಮಾನಸಿಕ ಸಂತೃಪ್ತಿ ಹಾಗೂ ಸ್ಮರಣೀಯವಾಗಲೆಂದು ಹಾರೈಸುತ್ತೇವೆ.
  2. ದಿನಾಂಕ 20-02-2022 ರಂದು ಭಾನುವಾರ ಮಕ್ಕಳಿಗಾಗಿ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ಇರುವುದು.
  3. ದಿನಾಂಕ 22-02-2022 ರಂದು ಮಂಗಳವಾರ ಅಸ್ವಸ್ಥರಿಗಾಗಿ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ಇರುವುದು. ಅಸ್ವಸ್ಥರು ಅದೇ ದಿವಸದ ಬಲಿಪೂಜೆಗೆ ಬಂದು ನಮ್ಮೊಂದಿಗೆ
    ಸಹಕರಿಸಬೇಕಾಗಿ ವಿನಂತಿಸುತ್ತೇವೆ.
  4. ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಕೊಂಕಣಿ ಭಾಷೆಯಲ್ಲಿ 27 ಹಾಗೂ ಕನ್ನಡ ಭಾಷೆಯಲ್ಲಿ 3 ಹೀಗೆ ಒಟ್ಟು 30 ದಿವ್ಯ ಬಲಿ ಪೂಜೆಗಳನ್ನು ಅರ್ಪಿಸಲಾಗುವುದು. ವಾರ್ಷಿಕ ಮಹೋತ್ಸವದ ದಿನಗಳಲ್ಲಿ, ಶಿವಮೊಗ್ಗ, ಬೆಳ್ತಂಗಡಿ, ಬಳ್ಳಾರಿ, ಮಂಗಳೂರು ಹಾಗೂ ನವಿÆ್ಮ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಇಲ್ಲಿಗೆ ಆಗಮಿಸಿ ದಿವ್ಯ ಬಲಿಪೂಜೆಯನ್ನು ಅರ್ಪಿಸುವರು.
  5. ಭಕ್ತಾಧಿಗಳ ಸುರಕ್ಷತೆಗಾಗಿ ಬಸಿಲಿಕಾದ ಒಳಗಡೆ ಹಾಗೂ ಬಸಿಲಿಕದ ವಠಾರದಲ್ಲಿ 64 ಸಿ.ಸಿ
    ಕ್ಯಾಮರಗಳನ್ನು ಅಳವಡಿಸಲಾಗಿದೆ.
  6. ಬಸಿಲಿಕದ ಬಲ ಬದಿಯಲ್ಲಿ ಅಂದರೆ “ಪವಾಡ ಮೂರ್ತಿ” ಪ್ರತಿಷ್ಠಾಪಿಸಿದ ಪಕ್ಕದಲ್ಲಿ ಕಥೋಲಿಕ್ ಕ್ರೆöÊಸ್ತರಿಗೆ ಪಾಪನಿವೇದನೆಗೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಒಳಗೆ ಪ್ರಾರ್ಥನೆಗಾಗಿ ಮಾತ್ರ
    ಅವಕಾಶ ನೀಡಲಾಗಿದೆ.
  7. ಭಕ್ತರು ಶ್ರೀಕ್ಷೇತ್ರಕ್ಕೆ ಹೇಳಿಕೊಂಡ ಹಣದ ರೂಪದ ಹರಕೆ, ವಸ್ತು ರೂಪದ ಹರಕೆ, ಮೊಂಬತ್ತಿಗಳ
    ಹರಕೆಗಳನ್ನು ದೇವಾಲಯದ ಎಡಬದಿಯಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
  8. ಭಕ್ತಾಧಿಗಳಿಗೆ ಕುಡಿಯಲು ಶುದ್ದ ಹಾಗೂ ತಂಪು ನೀರಿನ ವ್ಯವಸ್ಥೆಯನ್ನು ಬಸಿಲಿಕದ ವಠಾರದಲ್ಲಿ ಐದು ಸ್ಥಳದಲ್ಲಿ ಮಾಡಲಾಗುವುದು.
  9. ಶಾರೀರಿಕ ಅಗತ್ಯತೆ ಪೂರೈಸಲು ಬಸಿಲಿಕದ ವಠಾರದಲ್ಲಿ ಪೋಲಿಸ್ ಸೇವಾ ಕೇಂದ್ರದ ಪಕ್ಕದಲ್ಲಿ ಸುಮಾರು 40 ಆಧುನಿಕ ಸವಲತ್ತುಗಳುಳ್ಳ ಶೌಚಾಲಯಗಳು, ಗುರುನಿವಾಸದ ಎಡ ಬದಿಯಲ್ಲಿ 20 ಶೌಚಾಲಯಗಳು ಇವೆ. ಅಂಗವಿಕಲರಿಗಾಗಿ ಪ್ರತ್ಯೇಕ ಹಾಗೂ ಹಿರಿಯ ನಾಗರಿಕರಿಗಾಗಿ ಕೊಮೊಡ್ ಮಾದರಿಯ ಶೌಚಾಲಯಗಳಿವೆ.
  10. ಕಾನೂನು ಮತ್ತು ಶಿಸ್ತು ಪಾಲನೆಗಾಗಿ ಗರಿಷ್ಟ ಸಂಖೈಯ ಪೋಲಿಸ್ ಅಧಿಕಾರಿ ಹಾಗೂ ಪೋಲಿಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಬಾಂಬ್ ನಿಷ್ಕಿçಯ ದಳ ಹಾಗೂ ರಿಜರ್ವ್ ಪೋಲಿಸ್ ತುಕಡಿಗಳಿದ್ದು ಯಾತ್ರಾರ್ಥಿಗಳ ಸುರಕ್ಷಿತೆಯ ಹೊಣೆ ನಿರ್ವಹಿಸಲಿರುವರು.
  11. ಯಾತ್ರಿರ್ಥಿಗಳ ವಾಹನಗಳ ನಿಲುಗಡೆಯ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ನುರಿತ ಗೃಹ ರಕ್ಷದಳ
    ಹಾಗೂ ಇತರ ಸಿಬ್ಬಂಧಿಗಳು ನಿರ್ವಹಿಸಲಿರುವರು.
  12. ಕಾಬೆಟ್ಟು ದ್ವಾರದ ಮೂಲಕ ಬರುವ ವಾಹನಗಳ ದಟ್ಟಣೆಯಿಂದ ಭಕ್ತಾಧಿಗಳಿಗೆ ಆಗುವ ಅಡಚಣೆಯನ್ನು ನಿವಾರಿಸಲು ಪುಲ್ಕೇರಿಯಿಂದ ದೂಪದಕಟ್ಟೆ ಮೂಲಕ ವಾಹನಗಳನ್ನು ಕಳುಹಿಸಿ ದೂಪದಕಟ್ಟೆ ದ್ವಾರ ಪ್ರವೇಶಿಸುವಾಗ ಎಡಬದಿಗೆ ವಿಸ್ತಾರವಾದ ವಾಹನ ನಿಲುಗಡೆ ಸ್ಥಳ, ಗಾರ್ಡನ್ ಹೌಸ್ ಹತ್ತಿರ ತಿರುವಿನಲ್ಲಿ ಎಡಬದಿಯಲ್ಲಿ, ಹಾಗೂ ಗಾರ್ಡನ್ ಹೌಸ್ ದಾಟಿದ ನಂತರ ಎಡಬದಿಯಲ್ಲಿ ವಾಹನ ನಿಲುಗಡೆಗೆ ಅವಾಕಾಶ ಕಲ್ಪಿಸಲಾಗಿದೆ. ಕೊಡಂಗೆ ಶ್ರೀ ರೋಬರ್ಟ್ ನೊರೋರವರ ತನಕ ರಿಕ್ಷಾ ಸಂಚಾರಕ್ಕೆ ಅವಕಾಶವಿದೆ. ಅದರ ಮುಂದಕ್ಕೆ ವಾಹನಗಳಿಗೆ ಪ್ರವೇಶವಿಲ್ಲ.
  13. ಕಾಬೆಟ್ಟು ಕಡೆಯಿಂದ ಬರುವ ವಾಹನಗಳಿಗೆ ಪ್ರಸಾದ್ ಟೈಲರ್ ಜಂಕ್ಷನ್ ದಾಟಿ ಮುಂದೆ ಬರುವಾಗ
    ಬಲಬದಿಯಲ್ಲಿ ಸಂತ ಲಾರೆನ್ಸ್ ಧರ್ಮಕೇಂದ್ರದ ಆಡಳಿತಕ್ಕೊಳಪಟ್ಟ ಸಂತ ಲಾರೆನ್ಸ್ ಹೈಸ್ಕೊಲ್ ಶಾಲಾ ಆಟದ ವಿಶಾಲವಾದ ಮೈದಾನವನ್ನು ಸಂಪೂರ್ಣವಾಗಿ ವಾಹನ ನಿಲುಗಡೆಗಾಗಿಯೇ ಕಾದಿರಿಸಲಾಗಿದೆ.
  14. ವೆಹಿಕಲ್ ಪಾಸ್ ಹೊಂದಿದ ವಾಹನ ಚಾಲಕರು ತಮ್ಮ ವಾಹನಗಳನ್ನು ಕಾಬೆಟ್ಟು ” ಅತ್ತೂರು
    ಕ್ವಾನ್ವೆಂಟ್ ಮಾರ್ಗವಾಗಿ ತಂದು ಬಸಿಲಿಕಾದ ಎಡಬದಿಯ ಪರ್ಪಲೆ ಗುಡ್ಡದಲ್ಲಿ ನಿರ್ಮಿಸಿದ ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸುವುದು.
  15. ವೆಹಿಕಲ್ ಪಾಸ್ ಹೊಂದಿದ ವಾಹನಗಳು, ಹಾಗೂ ಪರ್ಪಲ ಗುಡ್ಡೆಯ ಮೇಲೆ ನಿಲುಗಡೆ ಮಾಡಿದ ವಾಹನಗಳಿಗೆ ನಿಲುಗಡೆ ಸ್ಥಳದಿಂAದ ಮುಂದೆ ಸಾಗಿ ಏಕಮುಖ ಕಾಂಕ್ರಿಟ್ ರಸ್ತೆಯ ಮೂಲಕ ಕಾರ್ಕಳ- ಪಡುಬಿದ್ರಿ ರಸ್ತೆಗೆ ಸಂಪರ್ಕ ಕಲ್ಪಿಸಲಾಗಿದೆ. ಪೋಲಿಸ್ ಸಿಬ್ಬಂದಿ ವಾಹನಗಳಿಗೆ ಹಾಗೂ ತುರ್ತು ಚಿಕ್ಸಿತ್ಸಾ ವಾಹನಗಳಿಗೆ ಬಿಟ್ಟರೆ ಬೇರೆ ಯಾವುದೇ ವಾಹನಗಳಿಗೆ ಬಸಿಲಿಕಾದ ವಠಾರಕ್ಕೆ ಪ್ರವೇಶವಿಲ್ಲ.
  16. ಬಸಿಲಿಕದ ವಠಾರದಲ್ಲಿ ಬಸಿಲಿಕದ ಅಧಿಕೃತ ಸ್ಟಾಲ್‌ನಲ್ಲಿ ಮಾತ್ರ ಮೊಂಬತ್ತಿ ಮಾರಾಟ ಮಾಡಲಾಗಿದೆ. ಬಸಿಲಿಕಾದ ವಠಾರದಲ್ಲಿ ಅನಧಿP ÀÈತ ಮೊಂಬತ್ತಿ ಮಾರಟ ಸಂಪೂರ್ಣವಾಗಿ ನಿಷೇದಿಸಲಾಗಿದೆ.
  17. ಕರ್ನಾಟಕ ಸರಕಾರದ ಸುತ್ತೋಲೆಯಂತೆ ಹಾಗೂ ಪೊಲೀಸ್ ಇಲಾಖೆಯ ಆದೇಶದಂತೆ ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ 1975 ರ ಅನ್ವಯ ಭಿಕ್ಷಾಟನೆ ಅಪರಾಧವಾಗಿದ್ದು ಜಾತ್ರಾ ಸಮಯದಲ್ಲಿ ಭಿಕ್ಷಾಟನೆಯನ್ನು ಹಾಗೂ ಹಬ್ಬದ ಶುಕ್ರವಾರ ಬಿ üಕ್ಷÄಕರಿಗೆ ನೀಡುತ್ತಿದ್ದ ಹಣವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜಾತ್ರಾ ಸಮಯದಲ್ಲಿ ವಿಶೇಷ ತಂಡಗಳನ್ನು ರಚಿಸಿ ಭಿಕ್ಷಾಟನೆ ಮಾಡುವವರು ಕಂಡುಬAದಲ್ಲಿ ಅವರನ್ನು ಹಿಡಿದು ನಿರಾಶಿv್ರÀರ ಕೇಂದ್ರಗಳಿಗೆ ಬಿಡುವ ವ್ಯವಸ್ಥೆಯನ್ನು ಪೊಲೀಸ್ ಇಲಾಖೆಯಿಂದ ಮಾಡಲಾಗಿದೆ.
  18. ಸಾರ್ವಜನಿಕರ ಹಾಗೂ ಭಕ್ತಾಧಿಗಳ ಸುಗಮ ಸಂಚಾರಕ್ಕಾಗಿ ದೂಪದಕಟ್ಟೆಯಿಂದ ಪ್ರಸಾದ್ ಟೈಲರ್ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಕಡೆಯ ಅಂಚಿನಿAದ ಕ್ರಮವಾಗಿ ಕನಿಷ್ಟ 5 ಅಡಿ ಜಾಗ ಬಿಟ್ಟು ಅಂಗಡಿಮುAಗಟ್ಟು ನಿರ್ಮಿಸುವಂತೆ ಸ್ಥಳೀಯ ನಿಟ್ಟೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿಗೆ ತಿಳಿಸಲಾಗಿದೆ. ಇದು ಸುರಕ್ಷೆಂiÄÀ ದೃಷ್ಠಿಯಿಂದ ಹಾಗೂ ರಸ್ತೆಯಲ್ಲಿ ಹಾದುಹೋಗುವ ಯಾವುದೇ ವ್ಯಕ್ತಿಗೆದೈಹಿಕ ಕಿರುಕುಳ ಆಗದಂತೆ ತಡೆಯಲು ಅತೀ ಆವಶ್ಯಕವಾಗಿದೆ.
  19. ಬಸಿಲಿಕದ ವಠಾರವನ್ನು ಪ್ರವೇಶಿಸುವ 2 ಮುಖ್ಯ ಪ್ರವೇಶ ದ್ವಾರಗಳಲ್ಲಾಗುವ ಜನಸಂದಣಿಯನ್ನು ಕಡಿಮೆ ಮಾಡಲು, ಬಸಿಲಿಕದ ಬಲಬದಿಯಲ್ಲಿ ನಿರ್ಮಿಸುತ್ತಿರುವ ಕಟ್ಟಡದಲ್ಲಿ ಪ್ರವೇಶದ್ವಾರ 3 ಹಾಗೂ ಪ್ರವೇಶದ್ವಾರ 4 ನ್ನು ಹೊಸದಾಗಿ ನಿರ್ಮಿಸಲಾಗಿದೆ. ದೂಪದಕಟ್ಟೆಯಿಂದ ಬರುವ ಭಕ್ತಾಧಿಗಳು ಈ ಪ್ರವೇಶ ದ್ವಾರವನ್ನು ಬಳಸಿ ಬಂದಲ್ಲಿ ಸುಲಭವಾಗಿ ಬಸಿಲಿಕದ ವಠಾರವನ್ನು, ತಲುಪಲು ಅವಕಾಶವನ್ನು ಕಲ್ಪಿಸಲಾಗಿದೆ.
  20. ಎಕಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲಾರೆನ್ಸರ ಅತೀ ದೊಡ್ಡ ಹೊಸ ಮೂರ್ತಿಯನ್ನು ಬಸಿಲಿಕದ ಬಲಬದಿಯಲ್ಲಿ ಪ್ರತಿಷ್ಟಾಪಿಸಲಾಗಿದೆ. ಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲಾರೆನ್ಸರ ಪ್ರತಿಮೆ ಇಟಲಿ ದೇಶದ ರೋಮ್ ಪ್ರಾಂತ್ಯದಲ್ಲಿ ಹಾಗೂ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ಬಿಟ್ಟರೆ ಬೆರೆಲ್ಲೂ ಕಾಣಸಿಗುವುದಿಲ್ಲ
  21. ಎಕಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲಾರೆನ್ಸರ ಹೊಸ ಮೂರ್ತಿಯನ್ನು ನವ್ಮಿÆÃ ಸಂತ ಲಾರೆನ್ಸರ ಪುಷ್ಕರಣಿಯಲ್ಲಿ ಪ್ರತಿಷ್ಟಾಪಿಸಲಾಗಿದೆ. ಬಸಿಲಿಕದಲ್ಲಿ ಪುಷ್ಕರಣಿ ಹಾಗೂ ಪುಷ್ಕರಣಿಯಲ್ಲಿ ಸಂತ ಲಾರೆನ್ಸರ ಎಕಶಿಲಾ ಪ್ರತಿಮೆ ಇಲ್ಲಿ ನವ್ಮಿÆ ಅತ್ತೂರು ಸಂತ ಲಾರೆನ್ಸ್ ಬಸಿಲಿಕದಲ್ಲಿ ಬಿಟ್ಟರೆ ಪ್ರಪಂಚದಲ್ಲಿ ಬೇರೆಲ್ಲೂ ಕಾಣಸಿಗುವುದಿಲ್ಲ.
error: