May 19, 2024

Bhavana Tv

Its Your Channel

ವಿಜೇತ ಬಾಲವನ ಉದ್ಘಾಟನೆ ಹಾಗೂ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

ಕಾರ್ಕಳ:ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ ರಿ. ವಿಜೇತ ವಸತಿಯುತ ವಿಶೇಷ ಶಾಲೆ ಮತ್ತು ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆ ಇದರ ವಿಜೇತ ಬಾಲವನ ಉದ್ಘಾಟನಾ ಕಾರ್ಯಕ್ರಮ ಹಾಗೂ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ 2022ರ ಕಾರ್ಯಕ್ರಮ ವಿಜೇತ ವಿಶೇಷ ಶಾಲೆಯಲ್ಲಿ ವಿಜೃಂಭಣೆಯಿAದ ನೆರವೇರಿತು.

ಅಧ್ಯಕ್ಷರು ಶ್ರೀ ಉದಯಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ರಿ. ಉದಯ್ ಶೆಟ್ಟಿ ಮುನಿಯಾಲು ಅವರ ವಿಜೇತ ಬಾಲವನದ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.

ಸಮಾರಂಭದ ಉದ್ಘಾಟಕಾರದ ದಾಮೋದರ್ ಕಾಮತ್ ಉದ್ಯಮಿಗಳು ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಇವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.

ಶ್ರೀ ಪರಂಪರದಾಸ್ ನಿರ್ದೇಶಕರು ಇಸ್ಕಾನ್ ಧಾರ್ಮಿಕ ಅಭಿವೃದಿ ಕೇಂದ್ರ ಇವರು ಆಶೀರ್ವಚನ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಭಾ ಅಧ್ಯಕ್ಷತೆಯನ್ನು ವಿಜೇತ ಶಾಲಾ ಅಧ್ಯಕ್ಷರು ಹಾಗೂ ಎ.ಪಿ.ಯಂ.ಸಿ ಅಧ್ಯಕ್ಷರಾದ ರತ್ನಾಕರ್ ಅಮೀನ್ ಇವರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಬಾಲಕೃಷ್ಣ ಶೆಟ್ಟಿ ಉದ್ಯಮಿಗಳು ಗೋವಾ, ಶ್ರೀ ದುರ್ಗಾ ವಿದ್ಯಾ ಸಂಘ ಟ್ರಸ್ಟ್ ರಿ. ಇದರ ಅಧ್ಯಕ್ಷರಾದ ಕೆ. ರಾಧಾಕೃಷ್ಣ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಯಕ್ಷಗಾನ ಗುರುಗಳು, ರಾಕೇಶ್ ಅಮೀನ್ ಸಿವಿಲ್ ಇಂಜಿನಿಯರ್ ಕಾರ್ಕಳ, ದಿನೇಶ್ ಸುವರ್ಣ ಗುತ್ತಿಗೆದಾರರು ಮುಲ್ಕಿ ಬೆಟ್ಟು ಬರ್ಕೆ ಕುಕ್ಕುಂದೂರು, ನಿರಂಜನ್ ಭಟ್ ನಿವೃತ್ತ ಅಧಿಕಾರಿಗಳು ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಅಧಿಕಾರಿಗಳು ಬೆಂಗಳೂರು, ಕನಸುಗಾರ ನವೀನ್ ಬೈಲೂರು ಇವರಿಗೆ ಸಂಸ್ಥೆಯ ವತಿಯಿಂದ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.

ಕು. ನಳಿನಿ ಕಾರ್ಯಕ್ರಮ ನಿರೂಪಿಸಿ, ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿ, ವಿಶೇಷ ಶಿಕ್ಷಕಿ ಕು.ಶ್ರೀನಿಧಿ ವಂದಿಸಿದರು.
ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕು. ಪೃಥ್ವಿ ಹೆಗ್ಡೆ ಕುಂಟಾಡಿ ಇವರ ನಿರ್ದೇಶನದಲ್ಲಿ ವಿಜೇತ ವಿಶೇಷ ಶಾಲಾ ಮಕ್ಕಳಿಂದ ಭಗತ್ ಸಿಂಗ್ ನೃತ್ಯ ರೂಪಕವನ್ನು ಪ್ರದರ್ಶಿಸಲಾಯಿತು.
ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಇವರ ನಿರ್ದೇಶನದಲ್ಲಿ ಶ್ರೀ ದುರ್ಗಾ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಶ್ರೀ ಗಣೇಶ ಮಹಾತ್ಮೆ ಯಕ್ಷಗಾನ ಪ್ರಸಂಗ ಹಾಗೂ ಶ್ರೀ ವಿಜಯ್ ಶೆಟ್ಟಿ ಉದ್ಯಮಿಗಳು ಇವರ ಪ್ರಾಯೋಜಕತ್ವದಲ್ಲಿ ಶ್ರೀ ದುರ್ಗಾ ಯಕ್ಷಗಾನ ಕೇಂದ್ರದ ಮಹಿಳಾ ವಿಭಾಗದ ವಿದ್ಯಾರ್ಥಿಗಳಿಂದ ವಿದ್ಯುನ್ಮತಿ ಕಲ್ಯಾಣ ಯಕ್ಷಗಾನ ಪ್ರಸಂಗವು ನೆರವೇರಿತು.

ವರದಿ: ಅರುಣ ಭಟ್ ಕಾರ್ಕಳ

error: