May 3, 2024

Bhavana Tv

Its Your Channel

ನಿಧಿ ಕುಂಭ ಹಾಗೂ ಶಿಲಾ ಸೇವಾ ಕಾರ್ಯಕ್ರಮ

ಕಾರ್ಕಳ : ಶ್ರೀ ಮಾರಿಯಮ್ಮ ಹಾಗೂ ಪರಿವಾರ ದೇವರುಗಳ ನೂತನ ಶಿಲಾಮಯ ದೇವಾಲಯದ ಜೀರ್ಣೋದ್ಧಾರ ಪ್ರಯುಕ್ತ ಆ. 19ರಂದು ನಿಧಿ ಕುಂಭ ಹಾಗೂ ಶಿಲಾ ಸೇವಾ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಗ್ರಾಮ ಸಮಿತಿ ಪ್ರತಿ ಮನೆಗೂ ತಲುಪಿಸುವ ಮೂಲಕ ಈ ಒಂದು ಪುಣ್ಯ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಮಾಡೋಣವೆಂದು ಸಚಿವ, ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿ. ಸುನೀಲ್ ಕುಮಾರ್ ಹೇಳಿದರು.
ಅವರು ಜು. 31ರಂದು ಕಾರ್ಕಳ ಮಾರಿಯಮ್ಮ ದೇವಸ್ಥಾನ ಆವರಣದಲ್ಲಿ ನಡೆದ ನಿಧಿ ಕುಂಭ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜೂ. 19ರಂದು ಕ್ಷೇತ್ರದಲ್ಲಿ ನಡೆದ ಮುಷ್ಠಿ ಕಾಣಿಕೆ ಸಮರ್ಪಣೆಯಲ್ಲಿ ಭಕ್ತರಿಂದ ಒಟ್ಟು 18 ಲಕ್ಷ ರೂ. ಮುಷ್ಠಿ ಕಾಣಿಕೆ ಸಮರ್ಪಣೆಯಾಗಿದೆ. ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡ ಬಳಿಕ ಮಾರ್ಚ್ ವೇಳೆಗೆ ವಿಜ್ರಂಭಣೆಯೊAದಿಗೆ ಬ್ರಹ್ಮಕಲಶೋತ್ಸವ ಜರುಗಲಿದೆ ಎಂದವರು ಹೇಳಿದರು.

ಸನ್ಮಾನ
ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ 5 ಲಕ್ಷ ರೂ. ಘೋಷಣೆ ಮಾಡಿರುವ ಕರುಣಾಕರ್ ಶೆಟ್ಟಿ, 1,01,101 ರೂ. ದೇಣಿಗೆ ನೀಡಿರುವ ಚಿರಾಗ್ ಹೊಟೇಲ್ ಮಾಲಕ ಉಮೇಶ್ ರಾವ್ ಅವರನ್ನು ಇದೇ ಸಂದರ್ಭದಲ್ಲಿ ಸಚಿವರು ಸನ್ಮಾನಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಬಿ. ಗೋಪಾಲಕೃಷ್ಣ ರಾವ್, ಮೊಕ್ತೇಸರ ಸುರೇಶ್ ಹವಾಲ್ದಾರ್, ಸಮಿತಿ ಸದಸ್ಯರಾದ ಜಗದೀಶ್ ಮಲ್ಯ, ವಿಜಯ ಶೆಟ್ಟಿ, ಗುತ್ತಿಗೆದಾರ ಸುಜಯ್ ಶೆಟ್ಟಿ, ನರಸಿಂಹ ಪೈ, ಅರ್ಚಕ ರಘುರಾಮ ಆಚಾರ್ಯ, ಹರೀಶ್ ರಾಣೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವೀನ್ ದೇವಾಡಿಗ ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿದರು. ನವೀನ್ ನಾಯಕ್ ನಿರೂಪಿಸಿ, ಪ್ರಶಾಂತ್ ರಾವ್ ವಂದಿಸಿದರು.
ವರದಿ ; ಅರುಣ ಭಟ್ಟ, ಕಾರ್ಕಳ

error: