May 15, 2024

Bhavana Tv

Its Your Channel

ಗೂಡುದೀಪ, ಮುದ್ದು ಶಾರದೆ, ಹುಲಿವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

ಕಾರ್ಕಳ: ಜ್ಯೋತಿ ಯುವಕ ಮತ್ತು ಮಹಿಳಾ ಮಂಡಲದ(ರಿ) ಸಹಭಾಗಿತ್ವದಲ್ಲಿ 5ನೇ ವರ್ಷದ ಗೂಡುದೀಪ, ಮುದ್ದುಶಾರದೆ, ಹುಲಿವೇಷ ಸ್ಪರ್ಧೆಯು ಕಾಳಿಕಾಂಬ ಜ್ಯೋತಿ ಮೈದಾನದಲ್ಲಿ ಸಂಭ್ರಮದಿAದ ನಡೆದು ಜನಮೆಚ್ಚುಗೆಗೆ ಪಾತ್ರವಾಯಿತು.

ಕಿಡ್ ಮಾಡೆಲ್ ಅವಾರ್ಡ್ ವಿಜೇತೆ ಕು. ಅಪೂರ್ವ ಸ್ಪರ್ಧೆಯನ್ನು ಉದ್ಘಾಟಿಸಿದ್ದರು. ಸಮಾರೋಪ ಸಮಾರಂಭದಲ್ಲಿ ನವೋದಯ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ನಿರ್ದೇಶಕರಾದ ಸುನೀಲ್ ಕುಮಾರ್ ಬಜಗೋಳಿ, ಉದ್ಯಮಿ ಉದಯ್ ಮಡಿವಾಳ್, ಯುವರಾಜ್ ಶೆಟ್ಟಿ, ನವೀನ್ ರಾವ್, ಭಾಸ್ಕರ್ ಕುಲಾಲ್, ವಿಜೇತರಿಗೆ ಚಿನ್ನದ ಪದಕ, ಶಾಶ್ವತ ಫಲಕ, ನಗದು ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಿ ಗೌರವಿಸಿದರು. ಸಂದರ್ಭದಲ್ಲಿ ಗುಣಪ್ರಕಾಶ್ ರಾವ್, ಶಿಲ್ಪಾ ಕಿಣಿ, ಯುವಕ ಮಂಡಲದ ನಿರ್ದೇಶಕರಾದ ರವೀಂದ್ರನಾಥ ಹೆಗ್ಡೆ, ಗೌರವಾದ್ಯಕ್ಷರುಗಳಾದ ವಾಮನ್ ರಾವ್ , ಶ್ರೀಮತಿ ಯಶ, ಅಧ್ಯಕ್ಷರುಗಳಾದ ನಿತೇಶ್ ಕೋಟ್ಯಾನ್, ಹರ್ಷಿಣಿ ಶೆಟ್ಟಿಗಾರ್ ಉಪಸ್ಥಿತರಿದ್ದರು, ಆಯೋಜಕರಾದ ಪುರಸಭಾ ಸದಸ್ಯ ಶುಭದರಾವ್ ವಿಜೇತರ ವಿವರಗಳನ್ನು ವಾಚಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸ್ಪರ್ಧಾವಿಜೇತರು: ಮುದ್ದುಶಾರದೆ- ಐಶ್ವರ್ಯ ಸುಭಾಶ್ ಪ್ರಥಮ ಆಕಾಂಕ್ಷ ಕಾಮತ್ ದ್ವಿತೀಯ ಪ್ರಾಚೀ ಕೋಟ್ಯಾನ್ ತೃತೀಯ ಸ್ಥಾನ ಪಡೆದರೆ ಸ್ಪೂರ್ತಿ ರಾವ್, ಪ್ರತ್ಯೋಷಾ ನಾಯಕ್, ಮತ್ತು ತಮಿಷಾ ಪ್ರೋತ್ಸಾಹಕ ಬಹುಮಾನ ಪಡೆದರು.

ಹುಲಿವೇಷ-ರಕ್ಷನ್ ಎಸ್ ಪ್ರಥಮ, ಅಕ್ಷಯ್ ಪ್ರಭು ದ್ವಿತೀಯ, ರಾಹುಲ್ ರಾವ್ ತೃತೀಯ ಸ್ಥಾನ ಪಡೆದರೆ ಗ್ಯಾನ್, ಜೇಷ್ಣವ್, ಮತ್ತು ಅನುರಾಗ್ ಪೂಜಾರಿ ಪ್ರೋತ್ಸಾಹಕ ಬಹುಮಾನ ಪಡೆದರು.

ಗೂಡುದೀಪದ ಸಾಂಪ್ರದಾಯಿಕ ವಿಭಾಗದಲ್ಲಿ- ಗೂಡು ದೀಪದಲ್ಲಿ ಶಿವಲಿಂಗ ರಚಿಸಿದ ರಕ್ಷಿತ್ ಕೋಟೆಕಣಿ ಮಂಗಳೂರು ಸತತ ಐದನೇ ವರ್ಷ ಪ್ರಥಮ ಸ್ಥಾನದ ಗೌರವಕ್ಕೆ ಪಾತ್ರರಾದರು. ಆದಿತ್ಯ ಭಟ್ ಗುರುಪುರ ದ್ವಿತೀಯ, ರವಿರಾಜ್ ಕೋಟೇಕಾರ್ ತೃತೀಯ ಸ್ಥಾನಪಡೆದರೆ ಯಶವಂತ್ ಕಾವೂರು, ಗಣೇಶ್ ಕೊಟೇಕಾರ್, ಸಂದೇಶ್ ಶಕ್ತಿನಗರ ಪ್ರೋತ್ಸಾಹಕ ಬಹುಮಾನ ಪಡೆದರು.

ಆಧುನಿಕ ವಿಭಾಗದಲ್ಲಿ- ವಿಠಲ್ ಭಟ್ ರಥಬೀದಿ ಮಂಗಳೂರು ಇವರ ರತ್ನಗಂಧಿ ಬೀಜ ಮತ್ತು ಅದರ ಕೋಡಿನಿಂದ ತಯಾರಿಸಿದ ಗೂಡುದೀಪವು ಪ್ರಥಮ, ಉಮೇಶ್ ಕುಂಜತ್ತಬೈಲು ನೂಲಿನಿಂದ ತಯಾರಿದ ಗೂಡುದೀಪ ದ್ವಿತೀಯ, ಜಗದೀಶ್ ಅಮೀನ್ ಸುಂಕದಕಟ್ಟೆ ತರಕಾರಿ ಬೀಜಗಳಿಂದ ತಯಾರಿಸಿದ ಗೂಡುದೀಪ ತೃತೀಯ ಸ್ಥಾನ ಪಡೆದು ಜನಮೆಚ್ಚುಗೆ ಪಡೆಯಿತು. ರಕ್ಷಿತ್ ಹೊಸ್ಮಾರು, ಕೀರ್ತನ್ ಪೂಜಾರಿ, ನರಹರಿ ಶೆಣೈ ಸಾಲಿಗ್ರಾಮ ಪ್ರೋತ್ಸಾಹ ಪ್ರಶಸ್ತಿಯನ್ನು ಪಡೆದರು.

ವರದಿ: ಅರುಣ ಭಟ್ ಕಾರ್ಕಳ

error: