May 5, 2024

Bhavana Tv

Its Your Channel

ಜನವರಿ 22 ರಿಂದ 26 ರವರೆಗೆ ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ, ಪತ್ರಿಕಾಗೋಷ್ಠಿಯಲ್ಲಿ ವಂದನೀಯ ಫಾದರ್ ಆಲ್ಬನ್ ಡಿಸೋಜ

ಕಾರ್ಕಳ: ಶಾಂತಿಸೌಹಾರ್ದತೆಗೆ ಹೆಸರಡದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದಲ್ಲಿ , ಜನವರಿ 22ರಿಂದ 26ರ ವಾರ್ಷಿಕ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತದ ಸಹಕಾರದೊಂದಿಗೆ ನಡೆಯಲಿದೆ ಎಂದು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ರೆಕ್ಟರ್ ಅತೀ ವಂದನೀಯ ಆಲ್ವನ್ ಡಿಸೋಜಾ ಹೇಳಿದರು.

ನೀವು ನನಗೆ ಸಾಕ್ಷಿಗಳಾಗುವಿರಿ-ಎಂಬ ಮಹೋತ್ಸವದ ವಿಷಯದೊಂದಿಗೆ ನಡೆಯುವ ಈ 5 ದಿನಗಳ ಉತ್ಸವದ ಅವಧಿಯಲ್ಲಿ ಒಟ್ಟು 35 ಬಲಿ ಪೂಜೆಗಳು ನಡೆಯಲಿದೆ. ಜ. 22ರ ಪೂರ್ವಾಹ್ನ 10 ಗಂಟೆಗೆ (ಕೊಂಕಣಿ) ಉಡುಪಿಯ ಧರ್ಮಾಧ್ಯಕ್ಷ ಪರಮ ಪೂಜ್ಯ ಜೆರಾಲ್ಡ್ ಐಸಾಕ್ ಲೋಬೋ, ಜ. 23ರಂದು ಬೆಳಿಗ್ಗೆ 10 ಗಂಟೆಗೆ (ಕನ್ನಡ) ಪುತ್ತೂರಿನ ಧರ್ಮಾಧ್ಯಕ್ಷ ಪರಮ ಪೂಜ್ಯ ಜೀವರ್ಗಿಸ್ ಮಾರ್ ಮಕರಿಯೋಸ್ ಕಲಯಿಲ್, ಜ. 24ರಂದು ಸಂಜೆ 6.00 ಗಂಟೆಗೆ (ಕನ್ನಡ) ಬೆಳ್ತಂಗಡಿ ಧರ್ಮಾಧ್ಯಕ್ಷ ಪರಮ ಪೂಜ್ಯ ಲೊರೆನ್ಸ್ ಮುಕ್ಕುಝಿ, ಜ. 25ರಂದು ಬೆಳಿಗ್ಗೆ 10.00 ಗಂಟೆಗೆ (ಕೊಂಕಣಿ) ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಪರಮ ಪೂಜ್ಯ ಆಲೋಷಿಯಸ್ ಪಾವ್ಲ್ ಡಿಸೋಜಾ , ಜ. 26ರಂದು ಬೆಳಿಗ್ಗೆ 10.00 ಗಂಟೆಗೆ (ಕೊಂಕಣಿ) ಬೆಂಗಳೂರಿನ ನಿವೃತ್ತ ಮಹಾ ಧರ್ಮಾಧ್ಯಕ್ಷ ಪರಮ ಪೂಜ್ಯ ಬರ್ನಾರ್ಡ್ ಮೊರಾಸ್ ಅವರು ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನೆರವೇರಿಸಲಿರುವರು.
ಮಹೋತ್ಸವದ ದಿನಗಳಲ್ಲಿ ಪ್ರತಿದಿನ ಪೂರ್ವಾಹ್ನ 8-00, 10-00, 12-00, ಅಪರಾಹ್ನ 2-00, 4-00, 6-00, 8-00 ಗಂಟೆಗೆ ಸೇರಿದಂತೆ 7 ಬಲಿಪೂಜೆಗಳು ನಡೆಯಲಿರುವುದು. ಜ. 21ರಂದು ಮಧ್ಯಾಹ್ನ 3.30 ಗಂಟೆಗೆ ಅಸ್ವಸ್ಥರಿಗಾಗಿ ದಿವ್ಯ ಬಲಿಪೂಜೆ, ಆರಾಧನೆ ಹಾಗೂ ಪರಮ ಪ್ರಸಾದದ ಮೆರವಣಿಗೆ ಇರಲಿರುವುದು ಎಂದು ಬಸಿಲಿಕಾದ ರೆಕ್ಟರ್ ಅತೀ ವಂದನೀಯ ಅಲ್ಬನ್ ಡಿ’ಸೋಜಾ ತಿಳಿಸಿದ್ದಾರೆ.

ಕನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ -1975ರ ಸನ್ವಯ ಭಿಕ್ಷಾಟನೆ ಅಪರಾಧವಾಗಿರುವುದರಿಂದ ಜಾತ್ರಮಹೋತ್ಸವದ ಅಂತಿಮ ದಿನದಂದು ಭಿಕ್ಷÄಕರಿಗೆ ನೀಡುತ್ತಿದ್ದ ಆಹಾರದ ಪೊಟ್ಟಣದ ಜೊತೆಗೆ ಹಣ(ಭಿಕ್ಷೆ) ನೀಡುವ ಕ್ರಮವನ್ನು ಕೈಬಿಡಲಾಗಿದೆ ಎಂದಿದ್ದಾರೆ.

ಬಸಿಲಿಕಾದ ಡೈರೆಕ್ಟರ್ ಅತೀ ವಂದನೀಯ ಅಲ್ವನ್ ಡಿಸೋಜಾ ಮಾಹಿತಿ ನೀಡಿದ್ದಾರೆ.
ಬಸಿಲಿಕಾದ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ, ಪ್ರಧಾನ ಕಾರ್ಯದರ್ಶಿ ಬೆನೆಡಿಕ್ಟ್ ನೊರೋನ್ಹಾ ಉಪಸ್ಥಿತರಿದ್ದರು.
ವರದಿ ;ಅರಣ ಭಟ್ ಕಾರ್ಕಳ

error: