May 4, 2024

Bhavana Tv

Its Your Channel

ವಿಜೃಂಭಣೆಯಿoದ ಪ್ರಾರಂಭಗೊoಡ ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಚರ್ಚ್ ನ ಜಾತ್ರಾ ಮಹೋತ್ಸವ

ಕಾರ್ಕಳ:- 21/01/2023 ರಂದು ಸಂಜೆ ಅತ್ತೂರು ಸಂತ ಲಾರೆನ್ಸ್ ಚರ್ಚ್ ನಿಂದ ಸಂತ ಲಾರೆನ್ಸ್ ರ ಪವಾಡ ಮೂರ್ತಿಯನ್ನು ಮೆರವಣಿಗೆಯಲ್ಲಿ ಅತ್ತೂರು ಯುವಕ ಮಂಡಲದ ಸಭಾಂಗಣದ ವರೆಗೆ ಭಾತ್ರತ್ವದ ಮೆರವಣಿಗೆ ನಡೆಯಿತು.
ಅತ್ತೂರು ಚರ್ಚ್ ನ ಅತಿ ವಂದನೀಯ ಧರ್ಮ ಗುರುಗಳಾದ ಅಲ್ಬನ್ ಡಿ.ಸೋಜ ಮಾತನಾಡಿ ಭಾತ್ರತ್ವದ ಸಂದರ್ಭದಲ್ಲಿ ಏಸು ರಾಜ ಕ್ರಿಸ್ತನನ್ನು ಸಾರ್ವಜನಿಕವಾಗಿ ಮೆರವಣಿಗೆ ತಂದು ವಿಶಾಲವಾದ ಮೈದಾನದಲ್ಲಿ ಏಸು ಕ್ರಿಸ್ತನ ದೇವರ ವಾಕ್ಯವನ್ನು ಕೇಳುತ್ತಾ ಅವರನ್ನು ಸ್ತುತಿಸುತ್ತ ಏಸು ಕ್ರಿಸ್ತನ ನಾಮದಲ್ಲಿ ಆಶೀರ್ವಾದ ಪಡೆದಿದ್ದೇವೆ. ಏಕತೆ ಸಹೋದರತೆ ಭಾತ್ರತ್ವ್ ಇರಬೇಕು ಎಂದು ಪ್ರವಚನ ನೀಡಿದಂತ ದಿವ್ಯ ಬಲಿ ಪೂಜೆಯನ್ನು ವಂದನೀಯ ಸ್ವಾಮಿ ಸಿರಿಲ್ ಲೋಬೋ ಉಡುಪಿ ಧರ್ಮಪ್ರಾಂತ್ಯದ ದಿವ್ಯ ಜ್ಯೋತಿ ಇದರ ನಿರ್ದೇಶಕರಾಗಿದ್ದವರು ಮುಂದಿನ ಐದು ದಿನಗಳ ಕಾಲ ದೇವರ ದಿವ್ಯ ನಾಮವನ್ನು ಮಾಡಲಿದ್ದಾರೆ ಎಂದರು.

error: