May 4, 2024

Bhavana Tv

Its Your Channel

ಕಾರ್ಕಳದಲ್ಲಿ ನಡೆದ 18ನೇಯ ಕನ್ನಡ ಸಾಹಿತ್ಯ ಸಮ್ಮೇಳನ

ಕಾರ್ಕಳ:- ಕನ್ನಡ ಪತ್ರಿಕೆ ವ್ಯತ್ತಿ ನನ್ನ ಜೀವಾಳ ಕಳೆದ 40 ವರ್ಷಗಳ ಅವಧಿಯ ಕಾರ್ಯಕ್ಷೇತ್ರದಲ್ಲಿ ನನ್ನ ಅರಿವಿಗೆ ಬಂದoತೆ ಪತ್ರಿಕೆ ಮತ್ತು ಸಾಹಿತ್ಯ ಸೃಜನಶೀಲತೆಯ ಎರಡು ಮುಖ ಅವೆರಡು ಒಂದಕ್ಕೊAದು ಪೂರಕ ಸಾಹಿತ್ಯ ಎಂಬುದಕ್ಕೆ ಹಲವಾರು ವ್ಯಾಖ್ಯೆಗಳಿವೆ ನಮ್ಮದೇ ಭಾವನೆ ಅನುಭವಗಳ ಕಲಾತ್ಮಕ ಅಭಿವ್ಯಕ್ತಿಯೇ ಸಾಹಿತ್ಯ ಕಥಾ ಸಾಹಿತ್ಯ ವಿಮರ್ಶ ಸಾಹಿತ್ಯ ಪ್ರಬಂಧ ಸಾಹಿತ್ಯ ಪ್ರವಾಸ ಸಾಹಿತ್ಯ ಹೀಗೆ ವಿಷಯ ಸ್ವರೂಪದಲ್ಲಿ ಕೊಂಚ ಭಿನ್ನತೆ ಇರುವ ಅನೇಕ ಸಾಹಿತ್ಯ ಪ್ರಕಾರಗಳಿವೆ ಎಂದು ತರಂಗ ವಾರ ಪತ್ರಿಕೆಯ ಸಂಪಾದಕಿ ಡಾಕ್ಟರ್ ಯು. ಬಿ ರಾಜಲಕ್ಷ್ಮಿ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಘಟಕ ಇದರ ವತಿಯಿಂದ ಎಸ್.ವಿ ಟಿ. ವಿದ್ಯಾಸಂಸ್ಥೆಗಳ ಅಂಡಾರು ವಿಠಲ ರುಕ್ಮಿಣಿ ಸಭಾಂಗಣದ ಪ್ರೊಫೆಸರ್ ಎಂ ರಾಮಚಂದ್ರ ವೇದಿಕೆಯಲ್ಲಿ ರವಿವಾರ ನಡೆದ ಕಾರ್ಕಳ ತಾಲೂಕು 18ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಭಾವತರಂಗ ಭಾಷೆ ಭಾವಗಳ ಸಮ್ಮಿಲನದ ಸಮ್ಮೇಳನ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಕಳ ತಾಲೂಕು 18ನೇ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ವೈಭವದ ಮೆರವಣಿಗೆಯಲ್ಲಿ ಸಮ್ಮೇಳನ ಅಧ್ಯಕ್ಷರನ್ನು ತೆರೆದ ವಾಹನದಲ್ಲಿ ಮೆರವಣಿಗೆಯ ವೇದಿಕೆಯ ಮುಂಭಾಗ ಡಾ. ಯು ಬಿ ರಾಜಲಕ್ಷ್ಮಿ ಅವರನ್ನು ಆರತಿ ಬೆಳಗಿ ಸ್ವಾಗತಿಸಲಾಯಿತು. ಬೆಳಿಗ್ಗೆ ಎಂಟಕ್ಕೆ ರಾಷ್ಟ್ರ ಧ್ವಜಾರೋಹಣವನ್ನು ಪುರಸಭೆ ಅಧ್ಯಕ್ಷ ಸುಮಾವೇಶ ನೆರವೇರಿಸಿದರು. ಪರಿಷತ್ ದ್ವಜಾರೋಹಣವನ್ನು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕ್ ಘಟಕ ಅಧ್ಯಕ್ಷ ಪ್ರಭಾಕರ ಕೊಂಡಳ್ಳಿ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ಯುವ ಬರಹಗಾರರನ್ನು ಸೆಳೆಯುವ ಪ್ರಯತ್ನ ನಡೆಯಬೇಕು
ಕವಿ ಮುದ್ದಣ್ಣ ಜನ್ಮದಿನದಂದು ಯುವ ಬರಹಗಾರರ ಸಮಾವೇಶವನ್ನು ಕಾರ್ಕಳದಲ್ಲಿ ನಡೆಸಲು ನಿರ್ಧರಿಸಲಾಗಿದೆ. ನಶಿಸಿ ಹೋಗುತ್ತಿರುವ ಸಂಸ್ಕೃತಿ ಉಳಿಸಲು ಕನ್ನಡ ಸಾಂಸ್ಕೃತಿ ಮೂಲ ಸಂಸ್ಥೆ ಎನ್ನುವ ಅಭಿಯಾನ ರಾಜ್ಯದಂತ್ಯ ಮಾರ್ಚ್ ತಿಂಗಳಲ್ಲಿ ಆರಂಭಿಸಲಾಗುವುದು ಎಂದು ಸುನಿಲ್ ಕುಮಾರ್ ತಿಳಿಸಿದರು. ಅವನಿ ಉಪಾಧ್ಯಾಯ ಸಮ್ಮೇಳನ ಅಧ್ಯಕ್ಷರ ಪರಿಚಯ ವಾಚಿಸಿದರು

ಈ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಿರಿಯ ಸಾಹಿತಿ ಮನೋರ ಪ್ರಸಾದ್ ಡಾಕ್ಟರ್ ರವೀಂದ್ರ ಶೆಟ್ಟಿ ಬಜಗೋಳಿ ಸಮ್ಮೇಳನ ಅಧ್ಯಕ್ಷ ಕೆಪಿ ಶೆಣೈ ಪ್ರಭಾಕರ ಕೊಂಡವಳ್ಳಿ ಮತ್ತಿತರು ಉಪಸ್ಥಿತರಿದ್ದರು.

ವರದಿ:ಅರುಣ ಭಟ್ ಕಾರ್ಕಳ

error: