May 4, 2024

Bhavana Tv

Its Your Channel

ಅಭಿವೃದ್ಧಿಪರ ರಾಜ್ಯ ಬಜೆಟ್ ಮಂಡನೆಯಾಗಿರುವುದು ಶ್ಲಾಘನೀಯ – ಮಹಾವೀರ ಹೆಗ್ಡೆ

ಕಾರ್ಕಳ: ಇಂದು ಮಂಡನೆಯಾಗಿರುವ ಬಜೆಟ್ ರಾಜ್ಯದ ಪ್ರತಿಯೊಂದು ಕ್ಷೇತ್ರದ ಪ್ರಗತಿಗೂ ಪೂರಕವಾಗಿದೆ. ಎಲ್ಲರನ್ನೂ ಎಲ್ಲವನ್ನೂ ಒಳಗೊಂಡAತೆ ಅಭಿವೃದ್ಧಿಪರ ಮುಂಗಡ ಪತ್ರವನ್ನು ಮಾನ್ಯ ಮುಖ್ಯಮಂತ್ರಿಗಳು ಪ್ರಸ್ತುತ ಪಡಿಸಿರುವುದು ಅಭಿನಂದನಾರ್ಹ.
ಜನತೆಯ ಸ್ವಾಭಿಮಾನದ ಸ್ವಾವಲಂಬನೆಯ ಬದುಕಿಗೆ ಬೆಂಬಲ, ಶ್ರಮಿಕರ ಕುರಿತಾದ ಕಾಳಜಿ, ರೈತರ ಆದಾಯ ಹೆಚ್ಚಳಕ್ಕೆ ಪೂರಕ, ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಉದ್ಯೋಗ ಸೃಜನೆಗೆ ಆದ್ಯತೆಯನ್ನು ನೀಡಿರುವುದು ಶ್ಲಾಘನೀಯ.

ಕರಾವಳಿ ಭಾಗದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನೆ. ಕರಾವಳಿ ಜಿಲ್ಲೆಗಳಲ್ಲಿ ಕೇಂದ್ರದ ಮತ್ಸ್ಯಸಂಪದ ಯೋಜನೆ ಜಾರಿ, ಸಹ್ಯಾದ್ರಿ ಸಿರಿ ಯೋಜನೆ, ಉಡುಪಿಯಲ್ಲಿ ಯಕ್ಷ ರಂಗಾಯಣ ಸ್ಥಾಪನೆ ಸಂತಸ ತಂದಿದೆ.
ರೈತರಿಗೆ 5 ಲ.ರೂ. ಶೂನ್ಯ ಬಡ್ಡಿದರದಲ್ಲಿ ಸಾಲ, ಶಾಲಾ-ಕಾಲೇಜ್ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸಹಾಯಧನ ಬಜೆಟ್‌ನಲ್ಲಿ ಘೋಷಣೆಯಾಗಿರುವುದು ಕರ್ನಾಟಕದ ಉಜ್ವಲ ಭವಿಷ್ಯವನ್ನು ಪ್ರತಿನಿಧಿಸುತ್ತದೆ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವರದಿ: ಅರುಣ ಭಟ್ ಕಾರ್ಕಳ

error: