May 4, 2024

Bhavana Tv

Its Your Channel

ನಿಟ್ಟೆಯಲ್ಲಿ ಜವಳಿ ಪಾರ್ಕ್ ಗೆ ಸಚಿವ ಸುನಿಲ್ ಕುಮಾರ್ ಭೂಮಿ ಪೂಜೆ

ಕಾರ್ಕಳ ತಾಲೂಕಿನನಿಟ್ಟೆಯಲ್ಲಿ ಜವಳಿ ಪಾರ್ಕ್ ಗೆ ಸಚಿವ ಸುನಿಲ್ ಕುಮಾರ್ ಭೂಮಿ ಪೂಜೆ ನಡೆಸಿದರು.

ಇಲ್ಲಿಯ ತನಕ ಆಗಿರುವ ಅಭಿವೃದ್ಧಿಯು ಒಂದು ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ನೀವು ಮತ್ತೆ ನನಗೆ ಆಶೀರ್ವಾದ ಮಾಡಿದರೆ ಮತ್ತೊಂದು ಹೊಸ ರೀತಿಯ ಅಭಿವೃದ್ಧಿಯನ್ನು ಇಡೀ ಕಾರ್ಕಳದಲ್ಲಿ ಮಾಡುವಂತಹ ಪ್ರಯತ್ನವನ್ನು ಖಂಡಿತ ಮಾಡುತ್ತೇನೆ .ಇದಕ್ಕೆ ನಿಮ್ಮೆಲ್ಲರ ಸಹಕಾರ ಬಹು ಮುಖ್ಯ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ನಿಟ್ಟೆಯಲ್ಲಿ 20 ಕೋ.ರೂ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪ್ರವಾಸೋದ್ಯಮ ಕ್ಷೇತ್ರವಾದ ಪರಶುರಾಮ ಥೀಮ್ ಪಾರ್ಕ್ ನಿಂದ ಉದ್ಯೋಗ ಸೃಷ್ಟಿಯ ಜವಳಿ ಪಾರ್ಕ್ ಗೆ ಬಂದಿದ್ದೇವೆ.ಬೇರೆ ಬೇರೆ ರೀತಿ ಯೋಜನೆಗಳು ಇಡಿ ತಾಲೂಕಿಗೆ ಕೊಡುವ ಮುಖಾಂತರ ತಾಲೂಕಿನ ಜನ ಸೌಲಭ್ಯಗಳು ಇಲ್ಲ ಎಂದು ಬೇರೆ ಕಡೆ ಹೋಗುವಂತೆ ಎಲ್ಲ ಸೌಲಭ್ಯಗಳು ಇಲ್ಲಿಯೇ ಸಿಗಬೇಕೆಂಬುದು ಸ್ವರ್ಣ ಕಾರ್ಕಳದ ಕಲ್ಪನೆ ಈ ಪರಿಕಲ್ಪನೆ ಇಟ್ಟುಕೊಂಡಿ ಇವತ್ತು ಜವಳಿ ಪಾರ್ಕ್ ಅಧಿಕೃತವಾದ ಶಿಲನ್ಯಾಸ ನೆರವೇರಿಸಿದ್ದೇವೆ ಎಂದರು.

ಕಾರ್ಕಳದ 15 ಸಾವಿರ ಹೆಚ್ಚಿನ ಜನ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎರಡು ಮೂರು ಗ್ರಾಮಗಳಿಗೆ ಒಂದು ಗೇರು ಬೀಜದ ಕಾರ್ಖಾನೆ ಇದ್ದು. ಒಂದು ಸಾವಿರ ಜನ ಉದ್ಯೋಗ ಮಾಡುವ ಕೈಗಾರಿಕೆಗೆ ಬೇಕೆಂಬುದು ಜನರ ಬೇಡಿಕೆ ಇತ್ತು ಇದರ ಬಗ್ಗೆ ಸುಮಾರು ಮೂರು ನಾಲ್ಕು ವರ್ಷದಿಂದ ಪ್ರಯತ್ನ ಮಾಡುತ್ತಾ ಇದ್ದು ಎಸ್ ಎಸ್ ಎಲ್ ಸಿ 3500, ಪಿಯುಸಿ ನಲ್ಲಿ ಪ್ರತಿ ವರ್ಷ 2750 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ವಿದ್ಯಾರ್ಥಿಗಳು ತರಗತಿಯಿಂದ ಹೊರಗೆ ಬರುತ್ತಿದ್ದಾರೆ ಇವರಿಗೆ ಉದ್ಯೋಗ ದೊರಕಬೇಕೆಂಬ ಅಪೇಕ್ಷೆ ಇಂದ ಬಸವರಾಜ್ ಬೊಮ್ಮಯ್ಯ ಅವರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅಂದಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು ಬಜೆಟ್ ನಲ್ಲಿ ಕಾರ್ಕಳ ಮತ್ತು ಸಿಗ್ಗಾವಿಗೆ ಎರಡು ಜವಳಿ ಪಾರ್ಕ್ ನ ಅನುಮೋದನೆ ನೀಡಿದರು ಹಲವಾರು ತಾಂತ್ರಿಕ ಕಾರಣದಿಂದ 15 20 ಎಕರೆ ಜಾಗದ ಅವಶ್ಯಕತೆ ಇತ್ತು ಒಂದೇ ಕಡೆಯಿಂದ 15 ರಿಂದ 20 ಎಕ್ಕರೆ ಸರ್ಕಾರಿ ಜಾಗದ ಸಮಸ್ಯೆ ಇತ್ತು ಹೆಚ್ಚಿನ ಜಾಗ ಡಿಮ್ಡ್ ಪೋರಿಸ್ಟ್ ಆಗಿದ್ದ ಕಾರಣ ಜಾಗದ ಸಮಸ್ಯೆಯಾಗಿತ್ತು ಸರ್ಕಾರವು ಡಿಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಿದ ಕಾರಣದಿಂದಾಗಿ ಈ ಸಮಸ್ಯೆಯೂ ಪರಿಹಾರವಾಯಿತು ಎಂದರು.

ನಿಟ್ಟೆ ಜವಳಿ ಪಾರ್ಕ್ ಕ್ಯಾಂಪಸ್ ಒಳಗೆ ನೂಲನ್ನು ನೇಯುವುದರೊಂದಿಗೆ ಹಿಡಿದು ಕೊನೆಗೆ ಜೀನ್ಸ್ ಪ್ಯಾಂಟ್ ತನಕವೂ ಎಲ್ಲವೂ ಇಲ್ಲೇ ಉತ್ಪಾದನೆಯಾಗಬೇಕು. ಜನರು ಇನ್ಯಾವುದೋ ಬೇರೆ ಕಡೆ, ಬೇರೆ ಯಾವುದೋ ಇಂಡಸ್ಟ್ರಿಗೆ ಹೋಗಿ ಕೊಂಡು ಕೊಳ್ಳುವಂತಿರಬಾರದು. ಎಲ್ಲವೂ ಕೂಡ ಇಲ್ಲೇ ಉತ್ಪಾದನೆಯಾಗಿ ಎಲ್ಲರೂ ಇಲ್ಲೇ ಬರುವಂತೆ ಮಾಡಬೇಕು. ಇದಕ್ಕೆ ಬೇಕಾದಂತಹ ಎಲ್ಲಾ ತಯಾರಿಗಳನ್ನು ನಾವು ಮಾಡುತ್ತಿದ್ದೇವೆ.

ಕೆಲವು ಬಾರಿ ಶರ್ಟ್ ಮ್ಯಾನುಫ್ಯಾಕ್ಚರ್ ಅವರು ಬಂದು ಬೇರೆ ಘಟಕದವರು ಬರುವುದಿಲ್ಲ ಎಂದಾಗಬಾರದು. ಅದಕ್ಕಾಗಿ ನೂಲು ನೇಯುವ ಘಟಕದಿಂದ ಪ್ರಾರಂಭವಾಗಿ ಎಲ್ಲಾ ಹಂತ ಹಂತದ ಯೋಜನೆಗಳನ್ನು ಇಲ್ಲೇ ರೂಪಿಸಬೇಕು. ಸಾಧ್ಯವಾದರೆ ಇನ್ನೂ 10 ಎಕರೆ ಜಾಗ ಕೊಡಲು ನಮ್ಮಲ್ಲಿ ಅವಕಾಶವಿದ್ದು, ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆನ್ನುವ ಯೋಚನೆಯನ್ನು ನಾವು ಮಾಡಿದ್ದೇವೆ. ಇದಕ್ಕೆ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್, ನೀರು ಕಾಂಪೌAಡ್ ಮುಂತಾದವುಗಳನ್ನು ಒದಗಿಸಲು ಸರ್ಕಾರ ಸಹಾಯ ಮಾಡಬೇಕು. ಈಗಾಗಲೇ 20 ಕೋಟಿ ಅನುದಾನ ಬೇಕು ಎಂಬ ಯೋಚನೆ ಮಾಡಿದ್ದು ನಾವು ಅದನ್ನು ಮಂಜೂರಾತಿ ಮಾಡಿ ಕ್ಯಾಬಿನೆಟ್ ಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಆದಷ್ಟು ಬೇಗ ಈ 20 ಕೋಟಿ ಅನುದಾನವನ್ನು ಮಂಜೂರಾತಿ ಮಾಡಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಿದ ನಂತರ ಕಂಪನಿಗಳಿಗೆ ಆಹ್ವಾನ ನೀಡುತ್ತೇವೆ. ಈಗಾಗಲೇ ಕಂಪನಿಗಳ ಜೊತೆ 2-3 ಬಾರಿ ಮಾತುಕತೆ ನಡೆಸಿದ್ದು, ಅವರು ಒಪ್ಪಿಕೊಂಡಿದ್ದಾರೆ. ಇನ್ನು ಒಂದು ವರ್ಷದಲ್ಲಿ ಎಲ್ಲಾ ಕಾಮಗಾರಿಗಳನ್ನು ಮುಗಿಸಬೇಕೆನ್ನುವ ಯೋಜನೆಯನ್ನು ಹೂಡಿದ್ದೇವೆ.

ಭವಿಷ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ 7-8 ರೂಪದ ಇಂಡಸ್ಟ್ರಿಗಳು ಇಲ್ಲಿಗೆ ಬಂದಾಗ ಒಂದೇ ಜಾಗದ ಅಡಿಯಲ್ಲಿ 1500 ರಿಂದ 2000 ಜನಗಳಿಗೆ ಉದ್ಯೋಗ ದೊರಕಿಸಿದಾಗ ಈ ಪರಿಸರದ ಉನ್ನತ ಬೆಳವಣಿಗೆ ಸಾಧ್ಯ. ನಮ್ಮ ತಾಲೂಕಿನ ಯುವ ಜನತೆಗೆ ಇ ಷ್ಟು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಲಭಿಸಿದಂತಾಗುತ್ತದೆ ಎಂಬುದನ್ನು ನಾವು ಇವತ್ತು ಅರ್ಥಮಾಡಿಕೊಳ್ಳಬೇಕು ಎಂದರು.

ಒAದು ಲೆಮಿನ ಇಂಡಸ್ಟ್ರಿಯ ಕಾರಣಕ್ಕೆ ಎಷ್ಟು ಕುಟುಂಬಗಳು ನಿರ್ವಹಣೆಯಾಗುತ್ತಿವೆ, ಕ್ಯಾಶ್ಯೂ ಫ್ಯಾಕ್ಟರಿಯಾ ಕಾರಣಕ್ಕೆ ಎಷ್ಟೊ ಕುಟುಂಬಗಳು ನಿರ್ವಹಣೆಯಾಗುತ್ತಿವೆ, ಮಿಯಾರಿನಲ್ಲಿ ಸಣ್ಣ ಸಣ್ಣ ಇಂಡಸ್ಟ್ರಿಗಳು ಹುಟ್ಟಿಕೊಂಡಿದ್ದರಿAದ ಹಲವು ಕುಟುಂಬಗಳು ನಿರ್ವಹಣೆಯಾಗುತ್ತಿವೆ, ಮಾಳದಲ್ಲಿ ಫುಡ್ ಪಾರ್ಕ್ ಆಗುತ್ತಿರುವುದರಿಂದ ಅನೇಕ ಕುಟುಂಬಗಳಿಗೆ ಪ್ರಯೋಜನವಾಗುತ್ತಿದೆ. ಹೀಗೆ ಕಾರ್ಕಳದಲ್ಲಿ ಸಣ್ಣ ಸಣ್ಣ ಇಂಡಸ್ಟ್ರಿಗಳು ಸಾಕಷ್ಟು ಬರುತ್ತಿದ್ದು ಆದರೆ ಒಂದೇ ಜಾಗದಡಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಉದ್ಯೋಗ ಪಡೆದುಕೊಳ್ಳುವ ಪರಿಸರ ನಿರ್ಮಾಣವಾಗುತ್ತಿದೆ ಎಂದರೆ ಇದರ ಬೆಳವಣಿಗೆ ಮುಂದಿನ ನಾಲ್ಕೈದು ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಸ ರೂಪವನ್ನು ಪಡೆದುಕೊಳ್ಳುತ್ತದೆ ಎಂದು ಭಾವಿಸುತ್ತೇನೆ. ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಕಾರ್ಕಳ ಕ್ಷೇತ್ರದ ಜನತೆ ನೀಡಬೇಕು.

ಜಪಾನ್ ನ ಕಂಪನಿಯವರ ಜೊತೆಗೆ ಆಪ್ಟಿಕಲ್ ಕೇಬಲ್ಸ್ ನ ಇಂಡಸ್ಟ್ರಿ ಕಾರ್ಕಳಕ್ಕೆ ಬರಬೇಕೆಂದು ಮಾತುಕತೆ ನಡೆಸಿದ್ದು ಆ ಜಪಾನ್ ಕಂಪನಿಯ ನಿಯೋಗ 14ನೇ ತಾರೀಕಿನಂದು ಕಾರ್ಕಳದ ಜಾಗದ ಪರಿಶೀಲನೆಗೆಂದು ಆಗಮಿಸುತ್ತಿದ್ದಾರೆ. ಆ ಜಪಾನ್ ಕಂಪನಿಯ ಆಪ್ಟಿಕಲ್ ಕೇಬಲ್ಸ್ ಇಲ್ಲಿಗೆ ಬಂದಲ್ಲಿ ಸುಮಾರು 2000 ಕೋಟಿ ಬಂಡವಾಳವನ್ನು ಇಲ್ಲಿ ಮಾಡಿದರೆ ಮತ್ತೆ 1000ಕ್ಕೂ ಹೆಚ್ಚು ಜನಕ್ಕೆ ಉದ್ಯೋಗವಕಾಶವನ್ನು ಕಲ್ಪಿಸಿಕೊಡುವ ಅವಕಾಶ ಒದಗಿ ಬಂದAತಾಗುತ್ತದೆ.

ಎಲ್ಲಾ ಯೋಜನೆಗಳನ್ನು ಬೇರೆ ಬೇರೆ ರೂಪದಲ್ಲಿ ಕಾರ್ಕಳಕ್ಕೆ ತಂದು ಸ್ವರ್ಣ ಕಾರ್ಕಳ ಮಾಡಬೇಕೆನ್ನುವ ಯೋಜನೆಗೆ ಹಂತ ಹಂತವಾಗಿ ಒಂದೊAದೇ ಹೆಜ್ಜೆಗಳನ್ನು ದಾಟುತ್ತಾ ಮುಂದೆ ಬರುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ.

ಮದನಾಡಿನಲ್ಲಿ ಒಂದು ಕಾಲದಲ್ಲಿ ರಸ್ತೆಗಳಿಲ್ಲ, ಕುಡಿಯುವ ನೀರಿಲ್ಲ, ಏಪ್ರಿಲ್ ಮೇ ತಿಂಗಳಲ್ಲಿ ಟ್ಯಾಂಕರ್ ಗಳಲ್ಲಿ ನೀರು ತರಿಸಿಕೊಳ್ಳುವಂತಹ ಪರಿಸ್ಥಿತಿ ಇತ್ತು. ಇವತ್ತು ರಸ್ತೆ,ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಎಲ್ಲವೂ ಇದೆ. ನಿಟ್ಟೆ ವಿನಯ್ ಹೆಗ್ಡೆಯವರ,ವಿದ್ಯಾಸಂಸ್ಥೆಯ ಕಾರಣಕ್ಕೆ ನಿಟ್ಟೆ ಅತ್ಯಂತ ಪ್ರಸಿದ್ಧಿಯಾಗಿದ್ದು, ಇವತ್ತು ಮತ್ತೊಂದು ಯೋಜನೆ ಜವಳಿ ಪಾರ್ಕ್ ನಿಟ್ಟೆಗೆ ಬರುವುದರ ಮುಖಾಂತರ ನಿಟ್ಟೆ ಹಾಗೂ ಕಾರ್ಕಳಕ್ಕೆ ಇನ್ನಷ್ಟು ಹೊಸ ರೂಪವನ್ನು ಕೊಡುವಂತಹ ಪ್ರಯತ್ನ ನಡೆಯುತ್ತಿದೆ. ನಮ್ಮ ಎರಡು ಜಿಲ್ಲೆಯಲ್ಲಿ ನಮಗೆ ಉದ್ಯೋಗ, ಪರಿಸರ ಸ್ನೇಹಿ ಇಂಡಸ್ಟ್ರಿ ಬರಬೇಕೆನ್ನುವಂತಹ ಅಪೇಕ್ಷೆಯನ್ನು ಹೊಂದಿರುವ ಜನರೇ ಹೆಚ್ಚಾಗಿದ್ದು ಹೀಗಾಗಿ ಕ್ಯಾಶ್ಯೂ ಇಂಡಸ್ಟ್ರಿ, ಜವಳಿ ಪಾರ್ಕ್ ಕೂಡ ಪರಿಸರಸ್ನೇಹಿ ಇಂಡಸ್ಟ್ರಿಯಾಗಿದ್ದು ಇಲ್ಲಿರುವ ಜನ ಯಾವ ರೀತಿಯ ಉದ್ಯಮವನ್ನು ಅಪೇಕ್ಷೆ ಪಡುತ್ತಿದ್ದರೋ ಅದನ್ನು ಕೊಡುವಂತಹ ಪ್ರಯತ್ನವನ್ನು ಮಾಡಿದ್ದೇವೆ.

ನಮ್ಮ ತಾಲೂಕಿನಲ್ಲಿ ಕಲ್ಲು ಕೆತ್ತನೆ ಮಾಡುವ ಜನರು ಹೆಚ್ಚಾಗಿದ್ದು ಹಾಗಾಗಿ ಇಲ್ಲಿ ಒಂದು ಶಿಲ್ಪಕಲಾ ಕ್ಲಸ್ಟರ್ ಅನ್ನು ಮಾಡಬೇಕು ಎನ್ನುವಂತಹ ಚರ್ಚೆ ನಡೆದಿದ್ದು ಅದಕ್ಕೊಂದು ಜಾಗ ಗುರುತಿಸುತ್ತಿದ್ದೇವೆ. ದೊಡ್ಡ ಪ್ರಮಾಣದಲ್ಲಿ ಫರ್ನಿಚರ್ ಗಳನ್ನು ನಿರ್ಮಾಣ ಮಾಡುವಂತಹ ಸಮುದಾಯದವರು ಹಾಗೂ ಅದೇ ಉದ್ಯೋಗವನ್ನು ಮಾಡುವಂತಹ ಜನರಿದ್ದು “ಫರ್ನಿಚರ್ ಹಬ್” ಅನ್ನು ಕೂಡ ಮಾಡಬೇಕು ಎಂದು ತಯಾರಿ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇವೆಲ್ಲವನ್ನೂ ಕೂಡ ಮಾಡುವಂತಹ ಪ್ರಯತ್ನವನ್ನು ಮಾಡುತ್ತೇವೆ ಎಂದರು.
ಜಿಲ್ಲಾಧಿಕಾರಿ ಕೂರ್ಮ ರಾವ್ ಮಾತನಾಡಿ ಕೃಷಿ ಬಳಿಕ ಹೆಷ್ಷು ಉದ್ಯೋಗವನ್ನು ಜವಳಿ ಕ್ಷೇತ್ರ ಒದಗಿಸುತ್ತದೆ ಎಂದರು. ಜಿ.ಪಂ ಸಿಇಒ ಪ್ರಸನ್ನ ಎಚ್ ಎಂ. ಉಡುಪಿ ಸೀರೆ ಜಗತ್ ಪ್ರಸಿದ್ದಿ ಪಡೆದಿದೆ. ಅದು ನಶಿಸುತ್ತಿದೆ. ಇಲ್ಲಿಯೂ ಅದರ ಒಂದು ಘಟಕ ಆರಂಭವಾದರೆ ಅನುಕೂಲ ಎಂದರು. ಜವಳಿ ಮತ್ತು ಕೈಮಗ್ಗ ಇಲಾಖೆಯ ಶಿವಶಂಕರ್ ಪ್ರಸ್ತಾವನೆಗೈದರು.ತಹಶಿಲ್ದಾರ್ ಅನಂತಶAಕರ ಬಿ, ನಿಟ್ಟೆ ಗ್ರಾ.ಪಂ ಅಧ್ಯಕ್ಷ ಸತೀಶ್ ಪೂಜಾರಿ, ಉದ್ಯಮಿಗಳಾ ಅಶೋಕ ಅಡ್ಯಙತಾಯ, ದಾಮೋದರ ಕಾಮತ್, ಜಯಶೀಲ ಶೆಟ್ಟಿ, ಸಂತೋಷ್ ಡಿಸಿಲ್ವ, ಮತ್ತಿತರರು ಉಪಸ್ಣತಿತರಿದ್ದರು.ತಾ.ಪಂ ಇಒ ಗುರುದತ್ತ್ ಸ್ವಾಗತಿಸಿ, ಬಾಲಕೃಷ್ಣ ಹೆಗ್ಡೆ ವಂದಿಸಿ, ಸುರೇಶ್ ಭಟ್ ನಿರೂಪಿಸಿದರು.

error: