ಕಾರ್ಕಳ:- ಅತ್ತೂರುನಿಟ್ಟೆ ಬೆರಂದೊಟ್ಟು ಶ್ರೀ ಧರ್ಮರಸು ಶ್ರೀ ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನ ಮತ್ತು ಬ್ರಹ್ಮಬೈದರ್ಕಳ ಗರಡಿ ಅತ್ತೂರು ಇದರ ವಾರ್ಷಿಕ ನೇಮೋತ್ಸವ ದಿನಾಂಕ 20/03/2023 ರಿಂದ 25/03/2023 ರ ತನಕ ದೈವಗಳ ನೇಮೋತ್ಸವ ವಿಜೃಂಭಣೆಯಿoದ ಅನ್ನಸಂತರ್ಪಣೆ ಯೊಂದಿಗೆ ನಡೆಯಿತು.
ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ ಕ್ಕೇ ಪ್ರಮೋದ್ ಮುತಾಲಿಕ್ ಭೇಟಿ ನೀಡಿದರು.
ಸಾವಿರಾರು ಭಕ್ತಾದಿಗಳು ದೈವಗಳ ನೇಮೋತ್ಸವ ವನ್ನು ವೀಕ್ಷಿಸಿ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿ ಪುನೀತರಾದರು.
ಭೈರವ ಅರಸರ ಕಾಲದಿಂದಲೂ ನಡೆದು ಕೊಂಡು ಬಂದ ನೇಮೋತ್ಸವ ಊರ ಪರ ಊರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು ವಿಠ್ಠಲ ಶೆಟ್ಟಿ ಬಲಿಪ ಗುತ್ತು,ಮನ್ಮಥ ಜೆ. ಶೆಟ್ಟಿ, ಮತ್ತು ಗುತ್ತು ಬರ್ಕೆ ಗುರಿಕಾರರು, ಆಡಳಿತ ಮಂಡಳಿ ಸರ್ವ ಸದಸ್ಯರು ಸೇರಿದ್ದರು.
ವರದಿ: ಅರುಣ ಭಟ್ ಕಾರ್ಕಳ
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ