May 4, 2024

Bhavana Tv

Its Your Channel

ಅಶಕ್ತ ಬಡ ಕುಟುಂಬಕ್ಕೆ ಸ್ಪಂದಿಸಿದ ಸಾಣೂರು ಗ್ರಾಮ ಪಂಚಾಯತ್

ಕಾರ್ಕಳ : ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಲ್ಕೇರಿ ಇಂದಿರಾನಗರದ ನಿವಾಸಿಗಳಾದ ಗಣೇಶ್ ನಾಯ್ಕ್,ಬೇಬಿ ನಾಯ್ಕ್, ವೆಂಕಟೇಶ್ ಇವರ ಕುಟುಂಬವು ಸಂಪೂರ್ಣ ಶಿಥಿಲ ಗೊಂಡು ವಾಸಕ್ಕೆ ಯೋಗ್ಯವಲ್ಲದ ಮನೆಯಲ್ಲಿ ವಾಸ ಮಾಡಿಕೊಂಡಿರುತ್ತಾರೆ.. ಗಣೇಶ್ ನಾಯ್ಕ್ ಮದ್ಯ ವ್ಯಸನಿಯಾಗಿದ್ದು ಅವರ ಪತ್ನಿ ಬೇಬಿ ನಾಯ್ಕ್ ಮಾನಸಿಕ ಅಸ್ವಸ್ಥರಾಗಿದ್ದಾರೆ ಇವರ ಮಗನೂ ಕೂಡ ಮದ್ಯವ್ಯಸನಿಯಾಗಿರುತ್ತಾನೆ ಇವರಿಗೆ ಮನೆಯಲ್ಲಿ ಸೂಕ್ತ ಮೂಲಭೂತ ಸೌಕರ್ಯಗಳಿಲ್ಲದೆ ಅನ್ನ ಆಹಾರವಿಲ್ಲದೆ ಚಿಂತಾ ಜನಕ ಸ್ಥಿತಿಯಲ್ಲಿ ಕುಸಿದು ಬೀಳುವ ಹಂತದಲ್ಲಿದ್ದ ಮನೆಯಲ್ಲಿ ವಾಸವಾಗಿದ್ದರು. ಇದನ್ನು ಮನಗಂಡ ಗ್ರಾಮ ಪಂಚಾಯಿತ ಸದಸ್ಯರಾದ ಸತೀಶ್ ಪೂಜಾರಿಯವರು ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿರುತ್ತಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಉಪಾಧ್ಯಕ್ಷರಾದ ಪ್ರಸಾದ್ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುರೇಖಾ ಅವರು ಬಡ ಕುಟುಂಬದ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕಾರ್ಕಳ ತಹಶೀಲ್ದಾರ್ ಅನಂತ್ ಶಂಕರ್,ಕಾರ್ಕಳ ಪೊಲೀಸ್ ನಗರ ಠಾಣಾಧಿಕಾರಿ ಸಂದೀಪ್ ಶೆಟ್ಟಿ, ಗ್ರಾಮಕರಣಿಕರಾದ ಸಂಗಮೇಶ್ ಅವರಿಗೆ ಮಾಹಿತಿ ನೀಡಿದರು. ಆ ಕೂಡಲೇ ಎಲ್ಲಾ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಶಿಥಿಲಾವಸ್ತೆಯಲ್ಲಿದ್ದ ಅವರ ಮನೆಯನ್ನು ಪುನರ್ವಸತಿ ನಿರ್ಮಿಸುವುದಕ್ಕೆ ತಹಶೀಲ್ದಾರ್ ಅವರು ಸ್ಥಳದಲ್ಲಿಯೇ ಆದೇಶಿಸಿದರು. ಹೊಸ ಮನೆ ನಿರ್ಮಾಣ ಆಗುವವರೆಗೆ ಕುಟುಂಬವನ್ನು ಕಾರ್ಕಳದ ಸುರಕ್ಷಾ ಸೇವಾ ಶ್ರಮಕ್ಕೆ ಕಳಿಸುದೆಂದು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಪೂಜಾರಿ, ಶ್ರೀಮತಿ ಸುಮತಿ,ಸಮಾಜ ಸೇವಕರಾದ ರಾಜೇಶ್ ಪೂಜಾರಿ, ಗ್ರಾಮ ಸಹಾಯಕರಾದ ಬಾಬು ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು. ಸಾಣೂರು ಗ್ರಾಮ ಪಂಚಾಯಿತಿನ ತುರ್ತುಸ್ಪಂದನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ ; ಅರುಣ ಭಟ್, ಕಾರ್ಕಳ

error: