May 2, 2024

Bhavana Tv

Its Your Channel

ಸಂವಿಧಾನ ವಿರೋಧಿ ಶಕ್ತಿಗಳು ಯಾವುದೇ ಪಕ್ಷಕ್ಕೆ ಸೇರಿರಲಿ ಅಂತವರಿಗೆ ಸರಿಯಾದ ಶಿಕ್ಷೆ ಆಗಬೇಕು – ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್

ಕಾರ್ಕಳ : ರಾಜ್ಯದಲ್ಲಿ ತಮ್ಮ ಸರಕಾರದ ಆಡಳಿತಾವದಧಿಯಲ್ಲಿ ಜನರ ಸುಲಿಗೆ ಮತ್ತು ಭ್ರಷ್ಟಾಚಾರವನ್ನೆ ರಾಜಧರ್ಮವಾಗಿಸಿಕೊಂಡಿದ್ದ ಬಿಜೆಪಿ ನಾಯಕರು ಇದೀಗ ಅಧಿಕಾರ ಕಳೆದುಕೊಂಡು ಅನಾಥ ಪ್ರಜ್ಞೆಯ ತೂಕಡಿಕೆಯಲ್ಲಿದ್ದಾರೆ. ಈ ತೂಕಡಿಕೆಯಲ್ಲಿ ಆಳುವ ಕಾಂಗ್ರೆಸ್ಸನ್ನ ಹೆಣೆಯಲು ನೋಡಿ ನಿರಾಶರಾಗಿ ಇದೀಗ ಏನೇನೋ ಹೇಳಿಕೆ ನೀಡುತ್ತಿದ್ದು ಈ ನಾಡಿನ ಪ್ರಜ್ಞಾವಂತ ಜನ ಇದನ್ನು ಗಂಭೀರವಾಗಿ ಪರಿಗಣಿಸ ಬೇಕಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಅಪಪ್ರಚಾರದ ಮೂಲಕ ದಿಕ್ಕು ತಪ್ಪಿಸಿ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿ, ಅಧಿಕಾರ ಕಳೆದುಕೊಳ್ಳುವಂತೆ ಮಾಡಿದ ಬಡ ಫಲಾನುಭವಿಗಳ ಹೊಟ್ಟೆಗೆ ಹೊಡೆಯುವ ದ್ವೇಶ ಸಾಧನೆಯ ಗುಂಗಿನಲ್ಲಿದ್ದ ಬಿಜೆಪಿ ನಾಯಕರಿಗೆ ಈ ಯೋಜನೆಗಳಿಗೆ ಜನರ ಬೆಂಬಲದ ಮಹಾಪೂರ ಹರಿದು ಬರುತ್ತಿರುವುದನ್ನು ಕಂಡು ದಿಗ್ಭ್ರಮೆಯಾಗಿದೆ. ಈ ಹತಾಶ ಭಾವದಲ್ಲಿ ಕಾಂಗ್ರೆಸ್ ಸರಕಾರದ ಮೇಲೆ ಹತ್ತುಹಲವು ಮಿಥ್ಯಾರೋಪ ಹೊರಿಸಿ ಅದರ ತೇಜೋವಧೆ ಮಾಡುವ ಕಾಯಕದಲ್ಲಿ ತೊಡಗಿ ಕೊಂಡಿದ್ದಾರೆ. ಮಂಡ್ಯ ಜಿಲ್ಲಾ ಕೃಷಿ ಇಲಾಖೆಯಲ್ಲಿ ಸಚಿವರೊಬ್ಬರ ಲಂಚದ ಪ್ರಸ್ಥಾವನೆಯ ಬಗ್ಗೆ ರಾಜ್ಯಪಾಲರಿಗೆ ಬರೆದಿದೆ ಎನ್ನಲಾದ ಪತ್ರದ ಮಿಥ್ಯೆ ಇದಕ್ಕೊಂದು ಉದಾಹರಣೆಯಾಗಿದೆ. ತಮ್ಮದೇ ಆಡಳಿತಾವದಿಯಲ್ಲಿ ಮಾಡಿದ ವಿದ್ಯುತ್ ಬಿಲ್ ದರ ಏರಿಕೆ, ತಿರುಪತಿಗೆ ರಾಜ್ಯದ ನಂದಿನಿ ತುಪ್ಪ ನಿಲುಗಡೆ, ಅಷ್ಟೇ ಅಲ್ಲದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡೇ ತಿಂಗಳ ಅವದಿಯಲ್ಲಿ ಬೆಲೆ ಏರಿಕೆ, ವರ್ಗಾವಣೆ ದಂದೆಯೇ ಮೊದಲಾದ ವಿಷಯಗಳಿಗೆ ಕಾಂಗ್ರೆಸ್ಸನ್ನು ಹೊಣೆಯಾಗಿಸಿ ಮಾಡಿದ ಪ್ರತಿಭಟನೆಯ ಹಿಂದಿದ್ದ ಅಳುವ ಕಾಂಗ್ರೆಸ್ ವಿರುದ್ಧದ ಪ್ರಜಾತಂತ್ರ ವಿರೋಧಿ ಕಾರ್ಯಸೂಚಿಯನ್ನು ಜನ ಅರ್ಥಮಾಡಿಕೊಂಡಿದ್ದಾರೆ. ಯಾವುದೇ ನಿರ್ದಿಷ್ಟತೆ ಇಲ್ಲದ ನಕಲಿ ಪತ್ರಕ್ಕಾಗಿ ಸಚಿವರ ರಾಜೀನಾಮೆ ಕೇಳುವ ಮೊದಲು ತಮ್ಮ ಬಿಜೆಪಿ ಅಡಳಿತಾವದಿಯಲ್ಲಿ ಬ್ರಹ್ಮಾಂಢ ಭ್ರಷ್ಟಾಚಾರ ಗೈದು ಸಿಕ್ಕಿಬಿದ್ದ, ಆತ್ಮಹತ್ಯೆಗೆ ಕಾರಣರಾದ ಎಷ್ಟು ಮಂದಿ ಸಚಿವರು ರಾಜೀನಾಮೆ ಕೊಟ್ಟಿದ್ದಾರೆ ಎಂಬ ಬಗ್ಗೆ ಉತ್ತರಿಸಲಿ ಎಂದು ಕಾಂಗ್ರೆಸ್ ಹೇಳಿದೆ.
ಮಂಡ್ಯ ಜಿಲ್ಲಾ ಕೃಷಿ ಇಲಾಖೆಯ ಜಂಟಿ ಆಯುಕ್ತರು ಈ ದೂರು ಪತ್ರದ ಸಾಚಾತನವನ್ನು ಅಲ್ಲಗೆಳೆದಿದ್ದಾರೆ. ಇದೊಂದು ನಕಲೀ ಪತ್ರವಾಗಿದ್ದು ಇದರ ಸಹಿಗಳೂ ನಕಲಿಯಾಗಿವೆ ಎನ್ನಲಾಗಿದೆ. ಇದರ ಹಿಂದೆ ಬಿಜೆಪಿ ಜೆಡಿಎಸ್ ಎಂಬ ರಾಜ್ಯದ ಎರಡು ಹತಾಶ ಶಕ್ತಿಗಳ ದ್ವೇಶದ ಕೈವಾಡ ಇದೆ ಎಂಬ ಗುಮಾನಿ ಇದೆ ಎಂಬುದನ್ನು ಅಲ್ಲಗೆಳೆಯಲಾಗದು. ಈಗಾಗಲೇ ಪ್ರಕರಣದ ಯತಾರ್ಥತೆಯ ಬಗ್ಗೆ ತನಿಕೆಗೆ ಮಾನ್ಯ ಮುಖ್ಯ ಮಂತ್ರಿಗಳು ಆದೇಶಿಸಿದ್ದಾರೆ. ಸರಕಾರಕ್ಕೆ ಕೆಟ್ಟ ಹೆಸರು ತರಲು ಷಢ್ಯಂತ್ರ ನಡೆಸುವ ಸಂವಿಧಾನ ವಿರೋಧಿ ಶಕ್ತಿಗಳು ಅವರು ಯಾವುದೇ ಪಕ್ಷಕ್ಕೆ ಸೇರಿರಲಿ ಅಂತವರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವರದಿ ; ಅರುಣ ಭಟ್ ಕಾರ್ಕಳ

error: