
ಕುಂದಾಪುರ : ಸಂಜೀವಿನಿ NRLM ಪ್ರಾಯೋಜಕತ್ವದಲ್ಲಿ ಗುಡ್ ಗವರ್ನೆನ್ಸ್ ಪ್ರಾಜೆಕ್ಟ್ ನ ಅಡಿಯಲ್ಲಿ ಈ ಹಿಂದೆ ಆಯ್ಕೆ ಮಾಡಿ ಹಲವಾರು ಅರಿವು ಮೂಡಿಸುವ ಕಾರ್ಯಕ್ರಮ ಮಾಡಿದ ಮಾದರಿ ಗ್ರಾಮ ಪರಿಕಲ್ಪನೆಯ ಹನೆಹಳ್ಳಿ ಗ್ರಾಮದ ಸಂಜೀವಿನಿ ಸದಸ್ಯರಿಗೆ ಈ ದಿನ ಕೂರಾಡಿ ಶಾಲೆಯ ಸಭಾಭವನದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಲಾಯಿತು. ಸರಕಾರಿ ಸ್ಕೀಮ್ಗಳು, ಸೌರಶಕ್ತಿಯ ಜೀವನೋಪಾಯ ಯಂತ್ರಗಳ ಬಗ್ಗೆ ಸ್ವ ಉದ್ಯೋಗದ ಬಗ್ಗೆ ಹಾಗೂ ಬಿವಿಟಿ ಸಂಸ್ಥೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ರಾಘವೇಂದ್ರ ಆಚಾರ್ಯ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯದ ಬಗ್ಗೆ ಮಾಹಿತಿಯನ್ನು ಡಾಕ್ಟರ್ ಮಂಜುನಾಥ್ ಹಾಗೂ ಹೈನುಗಾರಿಕೆಯ ಬಗ್ಗೆ ಪಶುವೈಧ್ಯಾಧಿಕಾರಿಗಳು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಂಜೀವಿನಿಯ ಬಿ ಆರ್ ಪಿಯವರು ಎಮ್ ಬಿ ಕೆ, ಎಲ್ ಸಿ ಆರ್ ಪಿ ,ಯವರು ಉಪಸ್ಥಿತರಿದ್ದರು. 43 ಮಂದಿ ಸಂಜೀವಿನಿ ಸ್ವ ಸಹಾಯ ಸಂಘದ ಮಹಿಳೆಯರು ಕಾರ್ಯಕ್ರಮದ ಮಾಹಿತಿ ಪಡೆದರು.
More Stories
ಸಿನೆಮಾ ಸ್ಟೈಲಲ್ಲಿ ಕಾರು ಛೇಸಿಂಗ್ : ಪೊಲೀಸರಿಗೊಪ್ಪಿಸಿದ ಜನ
ಕಾರು ಅಪಘಾತ ಓರ್ವ ಮಹಿಳೆ ಮೃತ, ಇಬ್ಬರು ಗಂಭೀರ
ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿಗೆ, ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಭೇಟಿ