December 21, 2024

Bhavana Tv

Its Your Channel

ಉಸ್ತುವಾರಿ ಸಚಿವರಿಗೆ ದೇಶಪಾಂಡೆಯವರಿoದ ಪತ್ರ

ಕಾರವಾರ: ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಸಂಬಂದ ಜಿಲ್ಲಾ‌ ಉಸ್ತುವರಿ ಸಚಿವೆ ಶಶಿಕಲಾ‌ ಜೊಲ್ಲೆಯವರಿಗೆ 21 ಅಂಶಗಳನ್ನೊಳಗೊಂಡ ಸಲಹೆ ಹಾಗೂ ಸೂಚನೆಯ ಪತ್ರವನ್ನ ಮಾಜಿ ಜಿಲ್ಲಾ ಉಸ್ತುವರಿ ಸಚಿವ ಆರ್. ವಿ ದೇಶಪಾಂಡೆ ಬರೆದಿದ್ದಾರೆ.

ಜಿಲ್ಲೆಯ ಹಲವು ಸರ್ಕಾರಿ ಆಸ್ಪತ್ರೆಯಲ್ಲಿ ಹ್ಯಾಂಡ್ ಗ್ಲಾಸ್, ಮಾಸ್ಕ್, ಹಾಗೂ ಸ್ಯಾನಿಟೈಸರ್ ಕೊರತೆ ಇದ್ದು ಸರ್ಕಾರದಿಂದ ಪೂರೈಕೆಗೆ ಕ್ರಮ ಕೈಗೊಳ್ಳಲಿ, ಕೊರೋನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ದುಡಿಯುತ್ತಿರು ಖಾಸಗಿ ವೈದ್ಯಕೀಯ ಸಿಬ್ಬಂದಿಗಳಿಗೂ ಪ್ರಧಾನಿ ಮೋದಿ ಘೋಷಿಸಿರುವ ಐವತ್ತು ಲಕ್ಷ ವಿಮಾ ಸೌಲಭ್ಯವನ್ನ ವಿಸ್ತರಿಸುವಂತೆ ಕ್ರಮ ಕೈಗೊಳ್ಳಬೇಕು.

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಕೊರೋನಾ ಸೋಂಕು ಪತ್ತೆ ತಪಾಸಣಾ ಕೇಂದ್ರವನ್ನ ಪ್ರಾರಂಭಿಸಲು ಉಸ್ತುವರಿ ಸಚಿವರು ಕ್ರಮ ಕೈಗೊಳ್ಳಲಿ. ಜಿಲ್ಲೆ ಮೂಲದ ಕೂಲಿ ಕಾರ್ಮಿಕರು ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಕೆಲಸಕ್ಕೆಂದು ತೆರಳಿದ್ದಾರೆ. ಅಲ್ಲಿ ಲಾಕ್ ಡೌನ್ ಇರುವ ಹಿನ್ನಲೆಯಲ್ಲಿ ಊಟ ವಸತಿ ಇಲ್ಲದೇ ಸಮಸ್ಯೆಗೆ ಸಿಲುಕಿದ್ದಾರೆ. ಉಸ್ತುವರಿ ಸಚಿವರು ಈ ಬಗ್ಗೆ ಸಂಭಂದ ಪಟ್ಟ ಅಧಿಕಾರಿಗಳಿಗೆ ತಿಳಿಸಿ ಜಿಲ್ಲೆಯ ಮೂಲದವರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಿ.

ಜಿಲ್ಲೆಗೆ ಈಗಾಗಲೇ ಕೊರೋನಾ ವೈರಸ್ ಸೋಂಕು ಕಾಲಿಟ್ಟಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಜಿಲ್ಲೆಯಲ್ಲಿ ಕಾಮಗಾರಿ ಪೂರ್ತಿಯಾದ ಹಾಸ್ಟೆಲ್, ಯಾತ್ರಾ ನಿವಾಸಗಳು ಇಲಾಖೆಗೆ ಹಸ್ತಾಂತರಿಸಿಲ್ಲ. ಇವುಗಳನ್ನು ಸಹ ತಾತ್ಕಾಲಿಕ ಆಸ್ಪತ್ರೆ ಗಳನ್ನಾಗಿ ಮಾಡಿ ಚಿಕಿತ್ಸೆ ಕೊಡುವ ಕಾರ್ಯ ಮಾಡುವಂತಾಗಲಿ ಎಂದು ದೇಶಪಾಂಡೆ ಸಲಹೆ ನೀಡಿದ್ದಾರೆ.

ಹೀಗೆ ಇಪ್ಪತ್ತೊಂದು ಅಂಶಗಳನ್ನೊಳಗೊಂಡ ಪತ್ರವನ್ನ ಜಿಲ್ಲಾ ಉಸ್ತುವರಿ ಸಚಿವೆ ಶಶಿಕಲಾ ಜೊಲ್ಲೆಗೆ ದೇಶಪಾಂಡೆ ಬರೆದಿದ್ದು ತನ್ನ ಸಲಹೆ ಹಾಗೂ ಸೂಚನೆಯನ್ನ ಪರಿಗಣಿಸುವಂತೆ ತಿಳಿಸಿದ್ದಾರೆ.

source : NUDIJENU

error: