December 22, 2024

Bhavana Tv

Its Your Channel

ದೇಶದಲ್ಲಿಯೇ ಭಟ್ಕಳ ಹಾಟ್ ಸ್ಪಾಟ್- ಸಂಪೂರ್ಣ ಕೋರೋನಾ ಭಟ್ಕಳದಿಂದ ಮುಕ್ತಾಯದ ವರೆಗೆ ಸಹಕಾರ ಅವಶ್ಯಕ- ಎಸ್.ಪಿ. ಶಿವಪ್ರಕಾಶ ದೇವರಾಜ್

ಭಟ್ಕಳ: ನಾಗರೀಕರು ಪರಸ್ಪರ ದೂರ ಇದ್ದು ಕೊರೊನಾ ವೈರಾಣುವನ್ನು ಶಾಶ್ವತವಾಗಿ ತೊಲಗಿಸಲು ಸಹಕರಿಸಬೇಕು ಕೆಲವೊಂದು ಕಡೆಗಳಲ್ಲಿ ಗುಂಪು ಸೇರುವುದು ಕಂಡು ಬಂದಿದ್ದು ಇನ್ನೂ ಹೆಚ್ಚಿನ ನಿಗಾ ವಹಿಸಲು ಭಟ್ಕಳ ನಗರದಲ್ಲಿ ದ್ರೋಣ್ ಕ್ಯಾಮರಾ ಕಣ್ಗಾವಲು ನಡೆಸಲು ಯೋಚಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದರು.

ಅವರು ಭಟ್ಕಳಕ್ಕೆ ಭೇಟಿ ನೀಡಿ ಇಲ್ಲಿ ವ್ಯವಸ್ಥೆಗಳನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ನಾಗರೀಕರಿಗೆ ಕನಿಷ್ಟ ಅಗತ್ಯತೆಗಳನ್ನು ಪೂರೈಸಲು ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗಿದ್ದು ಅದರಲ್ಲಿಯೂ ಭಟ್ಕಳ ನಗರದಲ್ಲಿ ಹೆಚ್ಚಿನ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಭಟ್ಕಳದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣ ಕಂಡು ಬಂದಿದ್ದರಿAದ ಹೆಚ್ಚು ಕಾಳಜಿ ವಹಿಸಬೇಕಾಗಿದೆ. ಆದರೂ ಜನರಲ್ಲಿ ವಿಶ್ವಾಸ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದ್ದು ಇನ್ನೂ ಹೆಚ್ಚು ಜಾಗೃತಿಗೊಳಿಸಲು ಪ್ರಯತ್ನಿಸಲಾಗುವುದು ಎಂದರು. ದಿನಸಿ, ಔಷಧ, ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆ ಇಲ್ಲ, ಕೃಷಿಕರು ತಮ್ಮ ವಸ್ತುಗಳನ್ನು ಅಗತ್ಯ ಮಾರುಕಟ್ಟೆ ತಲುಪಿಸಲು ಕೂಡಾ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದ ಅವರು ಯಾವುದೇ ಕಾರಣಕ್ಕೂ ಮನೆ ಕೆಲಸಕ್ಕೆ ಹೋಗುವವರು ಮುಂದಿನ ಆದೇಶದ ತನಕ ಹೊಗುವುದನ್ನು ನಿಷೇಧಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಇಲ್ಲಿಯ ತನಕ ನಿಯಮ ಮೀರಿದ ೪೬ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ದಾಂಡೇಲಿ ಹಾಗೂ ಶಿರಸಿಯಲ್ಲಿ ಎರಡು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಾಕಿದ ಕುರಿತು ಪ್ರಕರಣ ದಾಖಲಿಸಲಾಗಿದೆ. ಯಾವುದೇ ಕಾರಣಕ್ಕೂ ಬೇರೆ ಜಿಲ್ಲೆಯಲ್ಲಿರುವ ಕೂಲಿ ಕಾರ್ಮಿಕರು, ಮೀನುಗಾರರು ಅಲ್ಲಿಂದ ಬರಲು ಅವಕಾಶವಿಲ್ಲ, ಜಿಲ್ಲಾಡಳಿತ ಅವರಿದ್ದಲ್ಲಿಯೇ ಎಲ್ಲಾ ವ್ಯವಸ್ಥೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುವುದು ಎಂದರು.

error: