ಭಟ್ಕಳ: ತನ್ನ ಮಾವನ ಸ್ಮರಣಾರ್ಥವಾಗಿ ಉಪ್ಪುಂದ ಮೂಲದ ನಾಗಿಣಿ ಮೇರಿಯನ್ ಮಾಲೀಕರಾದ ಉದ್ಯಮಿ, ಸಮಾಜ ಸೇವಕ ಪ್ರದೀಪ ಖಾರ್ವಿ ಕುಂದಾಪುರ ಎಂಬುವವರು ಭಟ್ಕಳದ ಗಡಿಭಾಗದಲ್ಲಿ ಕೋರೋನಾ ವೈರಸ್ ತಪಾಸಣೆ ಮಾಡುವ ಬೈಂದೂರು ತಾಲೂಕಾ ವೈದ್ಯರಿಗೆ, ಬೈಂದೂರು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ, ಪೊಲೀಸರಿಗೆ ಹಾಗೂ ಪರ ಊರಿನಿಂದ ಬರುತ್ತಿರುವ ಕಾರ್ಮಿಕರಿಗೆ ನಿಸ್ವಾರ್ಥದಿಂದ ತಿಂಡಿ, ಉಪಹಾರ, ವೆಜ್ ನಾನ್ ವೆಜ್ ಊಟವನ್ನು ವಿತರಿಸುವುದರ ಮೂಲಕ ಸಾರ್ಥಕತೆಯನ್ನು ಮೆರೆದಿದ್ದಾರೆ.
ಕಳೆದ ಎರಡು ವರ್ಷದ ಹಿಂದೆ ೨೦೧೮ ರಲ್ಲಿ ಶಿರಸಿಯ ಜಾತ್ರೆ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಸಮಾಜ ಸೇವಕ ಹಾಗು ಉದ್ಯಮಿ ಪ್ರದೀಪ ಖಾರ್ವಿ ಅವರ ಅಮ್ಮನ ಅಣ್ಣ, ಮಾಜಿ ಧರ್ಮದರ್ಶಿಗಳು ಕೊಲ್ಲುರು ದೇವಸ್ಥಾನ ಹಾಗೂ ಉದ್ಯಮಿ ಬಿ.ಎಚ್.ಪಿ ಅಣ್ಣಪ್ಪ ಹಾಗೂ ಅವರ ಕುಟುಂಬಸ್ಥರು ಕಾರಿನಲ್ಲಿ ಬರುತ್ತಿದ್ದ ವೇಳೆ ಭಟ್ಕಳದ ಬೆಂಗ್ರೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತದಲ್ಲಿ ಬಿ.ಎಚ್.ಪಿ. ಅಣ್ಣಪ್ಪ ಅವರು ಮರಣ ಪಟ್ಟಿದ್ದರು.
ಈ ಹಿನ್ನೆಲೆ ಪ್ರದೀಪ ಖಾರ್ವಿ ಅವರು ಅವರ ಮಾವನ ಸ್ಮರಣಾರ್ಥ ಸಮಾಜಮುಖಿ ಕಾರ್ಯಕ್ಕೆ ಮುಂದಾಗುವುದರ ಜೊತೆಗೆ ಸಾರ್ಥಕತೆಯನ್ನು ಮೆರೆದಿದ್ದಾರೆ. ಕೋರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆ ಲಾಕ್ ಡೌನ್ ಆದೇಶದ ದಿನದಿಂದ ಭಟ್ಕಳ ಗಡಿ ಭಾಗದಲ್ಲಿ ಕೆಲಸ ಮಾಡುತ್ತಿರುವ ಪೊಲೀಸರಿಗೆ, ವೈದ್ಯರಿಗೆ ಆರೋಗ್ಯ ಇಲಾಖೆ ಬೈಂದೂರು ಸಿಬ್ಬಂದಿಗಳಿಗೆ, ಕೆಲವು ಪರ ಊರಿನ ಕಾರ್ಮಿಕರಿಗೆ ಉಪಚರಿಸಿದ್ದಾರೆ. ಸತತ ೫-೬ ದಿನದಿಂದ ಈ ಕಾರ್ಯ ಮಾಡುತ್ತಾ ಬಂದಿದ್ದ ಇವರಿಗೆ ಇವರ ಸ್ನೇಹಿತರಾದ ನಾಗೇಶ ಖಾರ್ವಿ ಹಾಗೂ ಭಾಸ್ಕರ ಖಾರ್ವಿ ಅವರ ಸಹಾಯದಿಂದ ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ.
ಉಪ್ಪುಂದದಲ್ಲಿ ಒಂದು ಹೋಟೆಲನ್ನು ಇದೇ ಕೆಲಸಕ್ಕೆ ಬಾಡಿಗೆಗೆ ಪಡೆದುಕೊಂಡಿದ್ದು ಬೆಳಿಗ್ಗೆ ಉಪಹಾರದಿಂದ ರಾತ್ರಿ ಊಟದ ತನಕ ವ್ಯವಸ್ಥೆ ನೀಡಿ ಕುಡಿಯುವ ನೀರಿನ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದಾರೆ. ಉಪ್ಪುಂದದಿAದ ತಮ್ಮ ಸ್ವಂತ ಕಾರನಲ್ಲಿ ಆಹಾರ ಪದಾರ್ಥವನ್ನು ಶಿರೂರಿನ ಟೋಲ್ ಗೇಟನ ವರೆಗೆ ತಂದು ನೀಡುತ್ತಿದ್ದಾರೆ. ಇನ್ನು ಇದರ ಜೊತೆಗೆ ಸಸ್ಯಹಾರ ಹಾಗೂ ಮಾಂಸಾಹಾರವನ್ನು ನೀಡುತ್ತಿದ್ದಾರೆ.
ಇವರ ಈ ಸೇವಾಮನೋಭಾವನೆಗೆ ಪೊಲೀಸರು, ವೈದ್ಯರು ಹಾಗೂ ಕಾರ್ಮಿಕರು ಕ್ರತಜ್ಞತೆಯನ್ನು ಸಲ್ಲಿಸಿದ್ದು ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ