May 9, 2024

Bhavana Tv

Its Your Channel

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಬಿ ಎನ್ ವಾಸರೆ.

ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ೨೦೨೧ ಇದೇ ಬರುವ ನವೆಂಬರ ೨೧ ರಂದು ನಡೆಯಲಿದ್ದು ಉತ್ತರ ಕನ್ನಡ ಅಭ್ಯರ್ಥಿಯಾಗಿ ಪತ್ರಕರ್ತ ಲೇಖಕ ಬಿ.ಎನ್.ವಾಸರೆ ಚುನಾವಣಾ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ, ಇವರು ಎರಡು ದಶಕಗಳಿಗೂ ಮೀರಿ ಪತ್ರಕರ್ತನಾಗಿ ,ಬರಹಗಾರನಾಗಿ ನಿತ್ಯದ ಪತ್ರಿಕಾ ಬದುಕಿನ ಜೊತೆಗೆ ಕವನ ಸಂಕಲನ, ಅಭಿನಂದನ ಗ್ರಂಥಗಳನ್ನು ಹೊರತಂದು ಅಕ್ಷರ ಲೋಕದಲ್ಲಿ ಗುರುತಿಸಿಕೊಂಡು ಎರಡು ಅವಧಿಗೆ ಹಳಿಯಾಳ- ದಾಂಡೇಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ , ಒಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ , ನಾಲ್ಕು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಹಾಗೂ ಹಲವಾರು ಜಿಲ್ಲೆ ಮತ್ತು ರಾಜ್ಯ ಮಟ್ಟದ ಸಾಹಿತ್ಯಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿ ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮನ್ಯರು ಪರಿಷತ್ತನ್ನಾಗಿಸುವ ….., ಜೊತೆಗೆ ಮುಂದೆ ಜಿಲ್ಲಾ ಅಧ್ಯಕ್ಷನಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವುದು . ಪ್ರತೀ ವರ್ಷಕ್ಕೊಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಪ್ರತೀ ತಾಲೂಕುಗಳಲ್ಲಿ ವರ್ಷಕ್ಕೊಂದು ತಾಲೂಕು ಸಾಹಿತ್ಯ ಸಮ್ಮೇಳನ ಆಯೋಜಿಸುವುದು. *ವಿದ್ಯಾರ್ಥಿ -ಯುವಜನರಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಶಾಲಾ-ಕಾಲೇಜುಗಳಲ್ಲಿ ಬಯಸಿದರೆ ಸಾಹಿತ್ಯ ಘಟಕ ಪ್ರಾರಂಭಿಸುವುದು. ಸಾಹಿತ್ಯಿಕ ಕಾರ್ಯಕ್ರಮ ಸಂಘಟಿಸುವುದು. *ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಕನ್ನಡ ಭವನ ಅಥವಾ ಸಾಹಿತ್ಯ ಭವನ ನಿರ್ಮಿಸಲು ಪ್ರಯತ್ನಿಸುವುದು. *ಪ್ರತೀ ತಾಲೂಕುಗಳಲ್ಲಿ ತಿಂಗಳಿಗೆ ಕನಿಷ್ಠ ಎರಡಕ್ಕೂ ಹೆಚ್ಚು ಸಾಹಿತ್ಯಿಕ ಕಾರ್ಯಕ್ರಮಗಳ ಆಯೋಜನೆ ಮಾಡುವುದು. *ಜಿಲ್ಲೆಯ ದಾನಿಗಳ ಹಾಗೂ ಕನ್ನಡಪರ ಮನಸ್ಸುಗಳ ಸಹಕಾರದಲ್ಲಿ ಸಹಾಯ ನಿಧಿ ಸ್ಥಾಪಿಸುವುದು ಹಾಗೂ ಆ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಆರ್ಥಿಕವಾಗಿ ದುರ್ಬಲವಾಗಿರುವ ಲೇಖಕರ ಕೃತಿಗಳನ್ನು ಪ್ರಕಟಿಸುವುದು, *ವರುಷಕ್ಕೊಮ್ಮೆ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರ ಸಭೆ ನಡೆಸುವುದು. ವಾರ್ಷಿಕ ವರದಿ ಪ್ರಕಟಿಸುವುದು, * ಶಾಲೆಗಳತ್ತ ಸಾಹಿತಿಗಳು ಪರಿಕಲ್ಪನೆಯಲ್ಲಿ ಕಾರ್ಯಕ್ರಮ ಆಯೋಜನೆ. ವಿದ್ಯಾರ್ಥಿಗಳಿಗೆ ಜಿಲ್ಲೆಯ ಸಾಹಿತಿಗಳನ್ನು ಹಾಗೂ ಕವಿ- ಕಲಾವಿದರನ್ನು ಪರಿಚಯಿಸುವುದು, *ಶಾಲಾ – ಕಾಲೇಜುಗಳಲ್ಲಿ ಹಳೆಗನ್ನಡ ಕವಿಗಳ ಪರಿಚಯ ಹಾಗೂ “ಹಳೆಗನ್ನಡ ಓದು” ಕಾರ್ಯಕ್ರಮ ಆಯೋಜಿಸುವುದು, *ರೂ ೧೦೦೦=೦೦ ಗಳಿಗೆ ಹೆಚ್ಚಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯತ್ವದ ಶುಲ್ಕವನ್ನು ಮೊದಲಿನಂತೆಯೇ ರೂ ೨೫೦=೦೦ಕ್ಕೆ ಕಡಿಮೆಗೊಳಿಸಲು ಒತ್ತಾಯಿಸುವುದು. ಇನ್ನೂ ಹಲವಾರು ಜೀವಪರ , ಜನಪರ ನಾಡು-ನುಡಿಪರ ಮುನ್ನೋಟಗಳನ್ನಿಟ್ಟುಕೊಂಡು ಉತ್ತರಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ತಮ್ಮೆಲ್ಲರ ಪ್ರತಿನಿಧಿಯಾಗಿ ಸ್ಪರ್ಧೆಯಲ್ಲಿದ್ದಾರೆ.. ನಾಡು ನುಡಿ ಸೇವೆಗಾಗಿ ತಮ್ಮ ಅಮೂಲ್ಯ ಮತವನ್ನು ತನಗೆ ನೀಡಿ ಎಲ್ಲರೂ ಸೇರಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜೀವ ತುಂಬುವ ಕೆಲಸ ಮಾಡೋಣ,ಸಾಹಿತ್ಯ ಸಮ್ಮೇಳನ,ಅನುದಾನ ಮತ್ತು ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡೋಣ ಎಂದಿದ್ದಾರೆ.

error: