May 20, 2024

Bhavana Tv

Its Your Channel

ಉತ್ತರಕನ್ನಡ ಜಿಲ್ಲೆಯ ಸಾಹಿತ್ಯ ಪರಿಷತ್ತಿಗೆ ಹೊಸ ಆಶಾಕಿರಣ ವೇಣುಗೋಪಾಲ ಮದ್ಗುಣಿ

ಉತ್ತರ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯು ೨೧-೧೧-೨೦೨೧ ರವಿವಾರರಂದು ನಡೆಯಲಿದ್ದು ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಯಲ್ಲಾಪುರದ ವೇಣು ಗೋಪಾಲ ಮದ್ಗುಣಿ ಕಣದಲ್ಲಿದ್ದಾರೆ.

ಕಳೆದ ೩೦ ವರ್ಷಗಳಿಂದ ಹಿರಿಯ ಸಾಹಿತಿಗಳ ಒಡನಾಡಿಯಾಗಿ ಅವರಿಂದ ಅನುಭವ ಪಡೆದು ಕೆಲಸ ನಿರ್ವಹಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ವೇಣುಗೋಪಾಲ ಮದ್ಗುಣಿ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕಳೆದ ೫ ವರ್ಷಗಳಿಂದ ಯಲ್ಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡದ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾವಿರಕ್ಕೂ ಹೆಚ್ಚು ಜನರನ್ನು ಹುರಿದುಂಬಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರನ್ನಾಗಿ ಮಾಡಿ, ಕನ್ನಡದ ಸೇವೆಯಲ್ಲಿ ತೊಡಗುವಂತೆ ಮಾಡಿದ ಶ್ರೇಯಸ್ಸು ಅವರದ್ದಾಗಿದೆ.
ಮನುಷ್ಯ ಜಾತಿ ತಾನೊಂದೆ ವಲಂ, ಮಾನವ ಜನ್ಮ ದೊಡ್ಡದು ಎಂಬ ವಾಕ್ಯದಂತೆ ನಾನು ಎಲ್ಲಾ ವರ್ಗದ ಜನರೊಡನೆ ಬೆರೆತು, ಎಲ್ಲಾ ಗೌರವ ಸದಸ್ಯರ ಸೇವೆಯನ್ನು ಮಾಡಿದ್ದೇನೆ. ಸಾಹಿತ್ಯಾಸಕ್ತರ ವಿಶ್ವಾಸಗಳಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಅಭಿವೃದ್ಧಿಗೆ ಶ್ರಮಿಸುತ್ತಾ ಕನ್ನಡದ ಕೆಲಸಗಳನ್ನು ಅತ್ಯಂತ ಪ್ರೀತಿಯಿಂದ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ, ಬದ್ಧತೆಯಿಂದ ಕೆಲಸ ನಿರ್ವಹಿಸಿದ್ದೇನೆ. ಹಾಗೂ ಇನ್ನು ಮುಂದೆಯು ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾದರೆ ಇದೇ ರೀತಿ ಕೆಲಸ ಮುಂದುವರಿಸುತ್ತೇನೆAದು ಪ್ರಾಮಾಣಿಕವಾಗಿ, ಪ್ರತಿಜ್ಞಾ ಪೂರ್ವಕವಾಗಿ ಪ್ರಮಾಣಿ ಕರಿಸುತ್ತೇನೆ. ಉತ್ಸಾಹ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ, ಭ್ರಷ್ಟಾಚಾರ ವಿರೋಧಿಸುವುದರ ಮೂಲಕ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸತನ ಮೂಡಿಸುವು ನಿಟ್ಟಿನಲ್ಲಿ ನನಗೆ ತಮ್ಮ ಅತ್ಯಮೂಲ್ಯವಾದ ಮತವನ್ನು ನೀಡಬೇಕಾಗಿ ವಿನಂತಿಸಿಕೊAಡಿದ್ದಾರೆ.
ಈಗಾಗಲೆ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಐವರು ಕಣದಲ್ಲಿದ್ದು ಪ್ರಚಾರ ಕಾರ್ಯ ಬರದಿಂದ ಸಾಗಿದೆ.

error: