December 22, 2024

Bhavana Tv

Its Your Channel

ಪುರಸಭೆಯ ಆದೇಶದ ಮೇರೆಗೆ ಕುಮಟಾ ಪಟ್ಟಣದಾದ್ಯಂತ ಸೋಂಕು ತಡೆಯಲು ರಾಸಾಯನಿಕ ಸಿOಪಡಣೆ

ಕುಮಟಾ ಪಟ್ಟಣದ ಬಸ್ತಿಪೇಟೆ, ಮೂರುಕಟ್ಟೆ ಮಾರ್ಗವಾಗಿ ಮೀನು ಮಾರುಕಟ್ಟೆ, ಹಳೆ ಬಸ್ ನಿಲ್ದಾಣ,ಮಾಸ್ತಿಕಟ್ಟೆ, ಹೊಸ ಬಸ್ ನಿಲ್ದಾಣ, ಸರಕಾರಿ ಆಸ್ಪತ್ರೆ ಸೇರಿದಂತೆ ಪಟ್ಟಣದ ಹಲವೆಡೆಗಳಲ್ಲಿ ಔಷಧವನ್ನು ಸಿಂಪಡಿಸಲಾಯಿತು. ಈ ವೇಳೆ ಮಾಧ್ಯಮದೊಂದಿಗೆ ಪುರಸಭೆಯ ಆರೋಗ್ಯ ಅಧಿಕಾರಿ ಸೋಮಶೇಖರ ಅಕ್ಕಿ ಮಾತನಾಡಿ,” ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪಟ್ಟಣದಾದ್ಯಂತ ಅಗ್ನಿಶಾಮಕ ದಳದ ವಾಹನದ ಮೂಲಕ ಸೋಡಿಯಂ ಸಲ್ಫೇಟ್, ಸೋಡಿಯಂ ಹೈಪೋಕ್ಲೋರೈಡ್ ಸೊಲ್ಯೂಷನ್ ಅನ್ನು ಸಿಂಪಡಿಸುವುದರ ಮೂಲಕ ಕೊರೋನಾ ತಡೆಗಟ್ಟಲು ಪ್ರಯತ್ನಿಸುತ್ತಿದ್ದೇವೆ “ಎಂದರು.

error: