December 22, 2024

Bhavana Tv

Its Your Channel

೩ ದಿನಗಳಲ್ಲಿ ಸಡಿಲ ಗೊಳಿಸದಿದ್ದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನಿರ್ಭಂದಿಸಿರುವುದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ದಾಖಲಿಸಲಾಗುವುದು – ವಕೀಲ ರವೀಂದ್ರ ನಾಯ್ಕ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಿಂದ ಮಂಗಳೂರು, ಉಡುಪಿ ಜಿಲ್ಲೆಗೆ ಆರೋಗ್ಯ ತುರ್ತು ಹಾಗೂ ಪುನರ್ ಚಿಕಿತ್ಸೆಗೆ ಹೋಗಲು ಉಡುಪಿ ಜಿಲ್ಲಾಡಳಿತ ನಿರ್ಭಂದಿಸುವಿಕೆಯನ್ನು ಮುಂದಿನ ೩ ದಿನಗಳಲ್ಲಿ ಸಡಿಲ ಗೊಳಿಸದಿದ್ದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನಿರ್ಭಂದಿಸಿರುವುದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ದಾಖಲಿಸಲಾಗುವುದೆಂದು ಸಾಮಾಜಿಕ ಹೋರಾಟಗಾರ ಹಾಗೂ ವಕೀಲ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಕರ್ನಾಟಕ ಮುಖ್ಯ ಕಾರ್ಯದರ್ಶಿ ಅವರಿಗೆ ಶಿರಸಿ ಉಫವಿಭಾಗದ ಕಛೇರಿ ಮೂಲಕ ತಿಳುವಳಿಕೆ ಪತ್ರ ನೀಡಿದ ನಂತರ ರವೀಂದ್ರ ನಾಯ್ಕ  ಹೇಳಿಕೆ ನೀಡಿದ್ದಿರುತ್ತಾರೆ.

  ಉತ್ತರ ಕನ್ನಡ ಜಿಲ್ಲೆ ೧೧ ತಾಲೂಕಿನಿಂದ ಒಳಗೊಂಡು, ೧೬ ಲಕ್ಷ ಜನಸಂಖ್ಯೆ ಹೊಂದಿರುವ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ಇಂದಿನವರೆಗೂ ಒಂದೂ ಸೂಪರ್ ಸ್ಪೆಷಲಿಸ್ಟ ಆಸ್ಪತ್ರೆ ಇಲ್ಲದಿರುವ ಹಿನ್ನೆಲೆಯಲ್ಲಿ ಹಿಂದಿನಿAದಲೂ ವಿಶೇಷ, ಗಂಭೀರ ಹಾಗೂ ತೀವ್ರನಿಗಾ ರೋಗಿಗಳು ಪಕ್ಕದ ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಅಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದು ತಿಳುವಳಿಕೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪ್ರತಿ ತಿಂಗಳು ೭-೮ ಸಾವಿರ ರೋಗಿಗಳು ಜಿಲ್ಲಾದ್ಯಂತ ವಿವಿಧ ರೀತಿಯ ಚಿಕಿತ್ಸೆ ಹೃದಯ ರೋಗಕ್ಕೆ ಸಂಭAದಿಸಿ ವಿವಿಧ ರೀತಿಯ ಆಪರೇಷನ್, ಕ್ಯಾನ್ಸರ ಸಂಭAದಿಸಿದ ರೆಡಿಯೇಷನ್ ಮತ್ತು ಕಿಮೋತೋರಫಿ, ಕಿಡ್ನಿ ವರ್ಗಾಯಿಸುವಿಕೆ, ಬಹೂರೂಪಿ ಎಲುಬು ಮುರಿತ, ತೀವ್ರ ಸ್ವರೂಪದ ಅಪಘಾತ ಮುಂತಾದ ರೋಗಗಳ ಚಿಕಿತ್ಸೆ ಜಿಲ್ಲೆಯಲ್ಲಿ ಅವಕಾಶ ಇಲ್ಲದಿರುವುದರಿಂದ ನೆರೆಯ ಉಡುಪಿ, ಮಂಗಳೂರು ಜಿಲ್ಲೆಯ ಆಸ್ಪತ್ರೆಗಳಿಗೆ ಉತ್ತರ ಕನ್ನಡ ಜಿಲ್ಲೆಯ ಜನ ಅವಲಂಭಿತವಾಗಿರುವುದು ಅನಿವಾರ್ಯವಾಗಿದೆ. ಉಡುಪಿ, ಮಂಗಳೂರು ಜಿಲ್ಲೆಯಲ್ಲ್ಲಿ ೮ ವೈದ್ಯಕೀಯ ಕಾಲೇಜಿನ ಆಸ್ಪತ್ರೆ ಸೇರಿ, ಇನ್ನಿತರ ೨೦ ಸೂಪರ್ ಸ್ಪೆಷಲಿಸ್ಟ ಆಸ್ಪತ್ರೆಯ ಪ್ರಯೋಜನ ಜಿಲ್ಲೆಯ ರೋಗಿಗಳು ಪಡೆದುಕೊಳ್ಳಿತ್ತಿದ್ದಾರೆಂದು ತಿಳುವಳಿಕೆ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. 

  ಉಡುಪಿ ಜಿಲ್ಲಾಡಳಿತವು ಕೋರೋನಾ ವೈರಲ್ ಕಾರಣ ನೀಡಿ ನಿರ್ಭಂದಿಸಿರುವ ನಿರ್ಧಾರ ಅಮಾನವೀಯ, ಕಾನೂನಿಗೆ ವ್ಯತಿರಿಕ್ತವಾಗಿ, ಮಾನವನ ಮೂಲಭೂತ ಹಕ್ಕಿಗೆ ಧÀಕ್ಕೆ ಉಂಟಾಗುವ ಹಾಗೂ ಅತೀರೆಕದ ಕ್ರಮವಾಗಿರುವುದರಿಂದ ಉಡುಪಿ ಜಿಲ್ಲಾಡಳಿತದ ನಿರ್ಭಂದಿಸಿರುವ ನೀತಿಯನ್ನು ಮುಂದುವರೆಸಿದ್ದಲ್ಲಿ ರೋಗಿಗಳÀ ಸಾವಿಗೆ ಕಾರಣವಾಗಿರುವುದರಿಂದ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವೆಂದು ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
error: