June 20, 2024

Bhavana Tv

Its Your Channel

ಕೊರೋನಾ ಸೋಂಕು ತಗುಲಿದ್ದ 20 ಸೋಂಕಿತರು ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಕಾರವಾರ: ಕೊರೋನಾ ಸೋಂಕು ತಗುಲಿದ್ದ 20 ಸೋಂಕಿತರು ಸಂಪೂರ್ಣ ಗುಣಮುಖರಾದ ಹಿನ್ನಲೆಯಲ್ಲಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.ಮೇ 5, 8 ಹಾಗೂ 9ರಂದು ಸೋಂಕು ದೃಢಪಟ್ಟಿದ್ದ ಭಟ್ಕಳ ಮೂಲದ ಈ 20 ಮಂದಿಗೆ ನಗರದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್- 19 ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗಿತ್ತು.ಸೋಂಕಿತರು ದಾಖಲಾಗಿ ಹದಿನಾಲ್ಕಕ್ಕೂ ಹೆಚ್ಚು ದಿನ ಪೂರೈಸಿದ್ದು, ಸದ್ಯ ಇವರೆಲ್ಲರ ವರದಿಯಲ್ಲಿ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.ವೈದ್ಯಕೀಯ ಸಿಬ್ಬಂದಿಗಳಿಗೆ ಅಭಿನಂದನೆ: ಸೋಂಕಿತರು ಗುಣಮುಖರಾಗಲು ಸೇವೆ ಸಲ್ಲಿಸಿದ ವೈದ್ಯಕೀಯ ಸಿಬ್ಬಂದಿಗಳಿಗೆ ಜಿಲ್ಲಾಡಳಿತದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜನರ ಆತಂಕ ದೂರಮಾಡಲು ಬೀಳ್ಕೊಡುಗೆ ಕಾರ್ಯಕ್ರಮ ಮಾಡಿದ್ದೇವೆ. ಸೋಂಕಿತರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಿದ್ದಕ್ಕೆ ವೈದ್ಯಕೀಯ ಸಿಬ್ಬಂದಿಗೆ ಶ್ಲಾಘನೆ ವ್ಯಕ್ತಪಡಿಸಿದರು.ಗುಣಮುಖರಾದವರಿಗೆ ಔಷಧಿ, ಮಾಸ್ಕ್ ಹಾಗೂ ಪ್ರಮಾಣಪತ್ರದ ಜೊತೆಗೆ ಸಿಹಿಯನ್ನ ಸಹ ನೀಡಿ ಬೀಳ್ಕೊಡಲಾಯಿತು. ಗುಣಮುಖರಾದ 20 ಮಂದಿಯನ್ನು ಮೂರು ಅಂಬ್ಯುಲೆನ್ಸ್‌ ಗಳಿಂದ ಭಟ್ಕಳಕ್ಕೆ ಬಂದಿದ್ದಾರೆ.

error: